ಭಾರತದಲ್ಲಿ ನಾಳೆಯಿಂದ ನಡೆಯಲಿರುವ ಶೂಟಿಂಗ್ ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಶೂಟರ್‌ಗಳಿಗೆ ಕೊನೆಗೂ ವೀಸಾ ನೀಡಲಾಗಿದೆ. ಪುಲ್ವಾಮಾ ದಾಳಿಯಿಂದ ವೀಸಾ ನೀಡಲು ಹಿಂದೇಟು ಹಾಕಿದ್ದ ಭಾರತ, ಕೊನೆ ಕ್ಷಣದಲ್ಲಿ ಪಾಕ್ ಶೂಟರ್‌ಗಳಿಗೆ ವೀಸಾ ನೀಡಿದ್ದೇಕೆ? ಇಲ್ಲಿದೆ ವಿವರ.
ನವದೆಹಲಿ(ಫೆ.19): ಬುಧವಾರದಿಂದ ಇಲ್ಲಿನ ಡಾ.ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ 2019ರ ಮೊದಲ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ನಡೆಯಲಿದೆ. ಪ್ರತಿಷ್ಠಿತ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಇಬ್ಬರು ಇಬ್ಬರು ಶೂಟರ್‌ಗಳು ಹಾಗೂ ವ್ಯವಸ್ಥಾಪಕರಿಗೆ ಭಾರತ ವೀಸಾ ಮಂಜೂರು ಮಾಡಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದ IMG ರಿಲಯನ್ಸ್!
ಸೋಮವಾರ ಸಂಜೆ ವೇಳೆಗೆ ವೀಸಾ ನೀಡದಿದ್ದರೆ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಶೂಟಿಂಗ್ ಸಂಸ್ಥೆ ತಿಳಿಸಿತ್ತು. ವಿಶ್ವಕಪ್ ಆಗಿರುವ ಕಾರಣ ಭಾರತ, ಪಾಕಿಸ್ತಾನಿ ಶೂಟರ್‌ಗಳಿಗೆ ವೀಸಾ ನೀಡದಿದ್ದರೆ ಮುಂಬರುವ ದಿನಗಳಲ್ಲಿ ಪ್ರತಿಷ್ಠಿತ ಟೂರ್ನಿಗಳ ಆತಿಥ್ಯ ಅವಕಾಶ ಕಳೆದುಕೊಳ್ಳುವ ಭೀತಿಯಿಂದ ಭಾರತ ಈ ನಿರ್ಧಾರ ಕೈಗೊಳ್ಳಬೇಕಾಯಿತು.
ಇದನ್ನೂ ಓದಿ: ದಾಳಿಯಲ್ಲಿ ಹುತಾತ್ಮರಾದ ಎಲ್ಲಾ ಯೋಧರ ಮಕ್ಕಳಿಗೆ ಸೆಹ್ವಾಗ್ ಉಚಿತ ಶಿಕ್ಷಣ!
ಪುಲ್ವಾಮಾ ಭಯೋತ್ಪಾದಕ ದಾಳಿಯಿಂದ ಭಾರತದ 40 CRPF ಯೋಧರು ಹುತಾತ್ಮರಾಗಿದ್ದಾರೆ. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಹೀಗಾಗಿ ಭಾರತ ಪಾಕಿಸ್ತಾನ ಆಟಗಾರರಿಗೆ ವೀಸಾ ನೀಡಲು ಹಿಂದೇಟು ಹಾಕಿತ್ತು. ಇದೀಗ ವೀಸಾ ನೀಡಲಾಗಿದ್ದು, ವಿಶೇಷ ಭದ್ರತೆಯನ್ನೂ ನಿಯೋಜಿಸಲಾಗಿದೆ.