ಪಾಕಿಸ್ತಾನ ಜತೆ ಕ್ರಿಕೆಟ್‌ ಸಾಧ್ಯವಿಲ್ಲ: ಐಪಿಎಲ್ ಚೇರ್ಮೆನ್

By Web DeskFirst Published Feb 19, 2019, 9:30 AM IST
Highlights

ಪಾಕಿಸ್ತಾನ ವಿರುದ್ಧದ ದ್ವಿಪಕ್ಷೀಯ ಸರಣಿ ಸಾಧ್ಯವೇ ಇಲ್ಲ ಎಂದು ಐಪಿಎಲ್ ಚೇರ್ಮೆನ್ ರಾಜೀವ್ ಶುಕ್ಲಾ ಹೇಳಿದ್ದಾರೆ. ಪುಲ್ವಾಮ ದಾಳಿ ಬಳಿಕ ರಾಜೀವ್ ಶುಕ್ಲಾ ಹೇಳಿದ್ದೇನು? ಇಲ್ಲಿದೆ ವಿವರ.
 

ಮುಂಬೈ(ಫೆ.19): ಪಾಕಿಸ್ತಾನ ಪ್ರಾಯೋಜಿತ ಉಗ್ರ ಚಟುವಟಿಕೆಗಳು ನಿಲ್ಲುವವರೆಗೂ ಆ ದೇಶದ ವಿರುದ್ಧ ಭಾರತ ಕ್ರಿಕೆಟ್‌ ಸರಣಿಗಳನ್ನು ಆಡುವುದಿಲ್ಲ ಎಂದು ಐಪಿಎಲ್‌ ಅಧ್ಯಕ್ಷ ರಾಜೀವ್‌ ಶುಕ್ಲಾ ಹೇಳಿದ್ದಾರೆ. ‘ಈ ಹಿಂದೆಯೇ ನಾವು ಪಾಕ್‌ ವಿರುದ್ಧ ಸರಣಿಗಳನ್ನು ಆಡದಿರಲು ನಿರ್ಧರಿಸಿದ್ದೆವು. ಆ ನಿರ್ಧಾರಕ್ಕೆ ಈಗಲೂ ಬದ್ಧರಾಗಿದ್ದೇವೆ’ ಎಂದು ಶುಕ್ಲಾ ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಚಿನ್ನಸ್ವಾಮಿಯಲ್ಲೂ ಪಾಕ್‌ ಕ್ರಿಕೆಟಿಗರ ಫೋಟೋ ತೆರವು!

2008ರ ಮುಂಬೈ ದಾಳಿ ಬಳಿಕ ಪಾಕಿಸ್ತಾನ ಜೊತೆಗಿನ ದ್ವಿಪಕ್ಷೀಯ ಸರಣಿ ಕೈಬಿಡಲಾಯ್ತು. ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಪಾಕಿಸ್ತಾನ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಆದರೆ ಮುಂಬೈ ದಾಳಿ ಬಳಿಕ ಐಪಿಎಲ್ ಟೂರ್ನಿಯಿಂದಲೂ ಪಾಕಿಸ್ತಾನ ಕ್ರಿಕೆಟಿಗರಿಗೆ ಬಹಿಷ್ಕಾರ ಹಾಕಲಾಯ್ತು.

ಇದನ್ನೂ ಓದಿ: ತೆಲಂಗಾಣ ರಾಯಭಾರಿ: ಸಾನಿಯಾ ಮಿರ್ಜಾ ಬೇಡವೆಂದ ಬಿಜೆಪಿ ಮುಖಂಡ

2012ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿ ಮತ್ತೆ ಆರಂಭಗೊಂಡಿತು.  ತ್ರಿಸದಸ್ಯತ್ವ ಪಡೆಯುವ  ನಿಟ್ಟಿನಲ್ಲಿ ಬಿಸಿಸಿಐ ಅಂದಿನ ಅಧ್ಯಕ್ಷ ಎನ್.ಶ್ರೀನಿವಾಸನ್ ಪಾಕ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದರು. ಹೀಗಾಗಿ ಒಂದು ಬಾರಿ ದ್ವಿಪಕ್ಷೀಯ ಸರಣಿ ಆಯೋಜಿಸಿತ್ತು. ಬಳಿಕ ಗಡಿಯಲ್ಲಿ ಪಾಕ್ ಪ್ರಚೋದಿತ ದಾಳಿ ಹೆಚ್ಚಾದ ಹಿನ್ನಲೆಯಲ್ಲಿ ಮತ್ತೆ ಪಾಕ್ ಜೊತೆಗಿನ ಸರಣಿ ರದ್ದಾಯಿತು.  ಇದೀಗ ಪುಲ್ವಾಮ ದಾಳಿಯಿಂದ ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಸರಣಿ ಸಾಧ್ಯವೇ ಇಲ್ಲಎನ್ನವಂತಾಗಿದೆ.

click me!