ಈ ವರ್ಷದ ಐಪಿಎಲ್ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿ

Published : May 11, 2017, 11:14 AM ISTUpdated : Apr 11, 2018, 12:42 PM IST
ಈ ವರ್ಷದ ಐಪಿಎಲ್ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿ

ಸಾರಾಂಶ

ಶೇನ್ ವ್ಯಾಟ್ಸನ್ ಆರ್'ಸಿಬಿ ಪರ 11.16ರ ಸರಾಸರಿಯಂತೆ ಕೇವಲ 67ರನ್ ಮಾತ್ರ ಗಳಿಸಿದ್ದಾರೆ. ಇನ್ನು ಬೌಲಿಂಗ್'ನಲ್ಲೂ ದುಬಾರಿಯಾಗಿರುವ ಆಸೀಸ್ ವೇಗಿ ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದಾರೆ.

ಬೆಂಗಳೂರು(ಮೇ.11): ಪ್ರಸಕ್ತ ವರ್ಷದ ಐಪಿಎಲ್ ಪಂದ್ಯಾವಳಿ ನನ್ನ ಪಾಲಿನ ಅತ್ಯಂತ ಕೆಟ್ಟ ಟೂರ್ನಿಯಾಗಿದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಲ್ರೌಂಡರ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರ್'ಸಿಬಿಗೆ ಅಸಂಖ್ಯಾತ ಅಭಿಮಾಣಿಗಳಿದ್ದಾರೆಂದು ಈ ಎರಡು ವರ್ಷಗಳಲ್ಲಿ ಅರ್ಥಮಾಡಿಕೊಂಡಿದ್ದೇನೆ. ಕಳೆದ ಬಾರಿ ಆ ನಂಬಿಕೆಯನ್ನು ಉಳಿಸಿಕೊಂಡಿದ್ದೆವು. ಆದರೆ ಈ ಬಾರಿ ಕೆಟ್ಟದಾಗಿ ಆಡುವ ಮೂಲಕ ಅಭಿಮಾನಿಗಳ ಮನಸ್ಸಿಗೆ ಆಘಾತ ತಂದಿದ್ದೇವೆ ಎಂದು ಆಸೀಸ್ ಆಟಗಾರ ಹೇಳಿದ್ದಾರೆ.

ಚಿನ್ನಸ್ವಾಮಿ ಸೇರಿದಂತೆ ಯಾವುದೇ ಕ್ರೀಡಾಂಗಣದಲ್ಲಿ ಆಡಿದರೂ ಅಭಿಮಾನಿಗಳಿಂದ ಅದ್ಭುತ ಬೆಂಬಲ ವ್ಯಕ್ತವಾಗುತ್ತಿತ್ತು. ಈಡನ್'ನಲ್ಲಿ ಕಳಪೆ ಆಟವಾಡಿದ ಹೊರತಾಗಿಯೂ ಬೆಂಬಲಿಗರ ಉತ್ಸಾಹ ನೋಡಿ ಮನಸು ಉಲ್ಲಾಸಗೊಂಡಿತು ಎಂದು ವಾಟ್ಸನ್ ಹೇಳಿದ್ದಾರೆ.

ಶೇನ್ ವ್ಯಾಟ್ಸನ್ ಆರ್'ಸಿಬಿ ಪರ 11.16ರ ಸರಾಸರಿಯಂತೆ ಕೇವಲ 67ರನ್ ಮಾತ್ರ ಗಳಿಸಿದ್ದಾರೆ. ಇನ್ನು ಬೌಲಿಂಗ್'ನಲ್ಲೂ ದುಬಾರಿಯಾಗಿರುವ ಆಸೀಸ್ ವೇಗಿ ಕೇವಲ 4 ವಿಕೆಟ್ ಮಾತ್ರ ಕಬಳಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL Playoffs: ಒಂದೇ ಸ್ಥಾನ, 4 ತಂಡಗಳ ಫೈಟ್! ಯಾರಿಗೆ ಸಿಗಲಿದೆ ಕೊನೆಯ ಚಾನ್ಸ್?
ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?