ಶ್ರೇಯಸ್ ಅಯ್ಯರ್ ಬೌಂಡರಿಗಳಾಟಕ್ಕೆ ಶರಣಾದ ಗುಜರಾತ್

By Suvarna Web DeskFirst Published May 10, 2017, 6:43 PM IST
Highlights

ಶ್ರೇಯಸ್ ಕೊನೆಯ ಓವರ್'ನಲ್ಲಿ ಔಟಾದಾಗ ಪಂದ್ಯ 2 ಕಡೆ ವಾಲಿತ್ತಾದರೂ ಅಮಿತ್ ಮಿಶ್ರಾ ಸತತ 2 ಬೌಂಡರಿ ಹೊಡೆಯುವುದರೊಂದಿಗೆ  ಪಂದ್ಯವನ್ನು ಸಮಾಪ್ತಿಗೊಳಿಸಿದರು. ಉಳಿದಂತೆ  ಶ್ರೇಯಸ್'ಗೆ ಬೆಂಬಲವಾಗಿ ಕರುಣಾ ನಾಯರ್ 30(15 ಎಸೆತ, 5 ಬೌಂಡರಿ, ಒಂದು ಸಿಕ್ಸ್'ರ್) ಹಾಗೂ ಕಮ್ಮಿನ್ಸ್ 24(13 ಎಸೆತ, 2 ಬೌಂಡರಿ ಹಾಗೂ ಒಂದು ಸಿಕ್ಸ್'ರ್) ರನ್ ಗಳಿಸಿ ದೆಹಲಿ ಗೆಲುವಿಗೆ ನೆರವಾದರು.

ಕಾನ್ಪುರ(ಮೇ.10): ಡೆಲ್ಲಿ ಡೇರ್'ಡೇವಿಲ್ಸ್ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಅವರ ಅಬ್ಬರದ ಬೌಂಡರಿಗಳಾಟಕ್ಕೆ ಗುಜರಾತ್ ಲಯನ್ಸ್ ಶರಣಾಯಿತು.

ಎರಡೂ ತಂಡಗಳು ಪ್ಲೇ ಆಫ್'ನಿಂದ ಹೊರಬಿದ್ದಿರುವ ಕಾರಣ ಇದು ಕೇವಲ ಪ್ರೇಕ್ಷಕರಿಗೆ ಮನರಂಜನೆಯ ಆಟವಾಗಿತ್ತು.  ಗುಜರಾತ್ ನೀಡಿದ 195 ರನ್'ಗಳ ಸವಾಲನ್ನು ಬೆನ್ನಟ್ಟಿದ ಜಾಹೀರ್' ಖಾನ್ ನೇತೃತ್ವದ ಡೆಲ್ಲಿ ಪಡೆ 2 ಎಸೆತಗಳಿರುವಂತೆ 19.4 ಓವರ್'ಗಳಲ್ಲಿ  8 ವಿಕೇಟ್ ಕಳೆದುಕೊಂಡು ಗುರಿ ತಲುಪಿತು. ಸ್ಫೋಟಕ ಆಟವಾಡಿದ ಶ್ರೇಯಸ್ ಅಯ್ಯರ್ 57 ಎಸತಗಳಲ್ಲಿ 15 ಆಕರ್ಷಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸ್'ರ್'ಗಳೊಂದಿಗೆ  96 ರನ್ ಬಾರಿಸಿದರು.

ಶ್ರೇಯಸ್ ಕೊನೆಯ ಓವರ್'ನಲ್ಲಿ ಔಟಾದಾಗ ಪಂದ್ಯ 2 ಕಡೆ ವಾಲಿತ್ತಾದರೂ ಅಮಿತ್ ಮಿಶ್ರಾ ಸತತ 2 ಬೌಂಡರಿ ಹೊಡೆಯುವುದರೊಂದಿಗೆ  ಪಂದ್ಯವನ್ನು ಸಮಾಪ್ತಿಗೊಳಿಸಿದರು. ಉಳಿದಂತೆ  ಶ್ರೇಯಸ್'ಗೆ ಬೆಂಬಲವಾಗಿ ಕರುಣಾ ನಾಯರ್ 30(15 ಎಸೆತ, 5 ಬೌಂಡರಿ, ಒಂದು ಸಿಕ್ಸ್'ರ್) ಹಾಗೂ ಕಮ್ಮಿನ್ಸ್ 24(13 ಎಸೆತ, 2 ಬೌಂಡರಿ ಹಾಗೂ ಒಂದು ಸಿಕ್ಸ್'ರ್) ರನ್ ಗಳಿಸಿ ದೆಹಲಿ ಗೆಲುವಿಗೆ ನೆರವಾದರು.

ಅಬ್ಬರಿಸಿದ ಫಿಂಚ್

ಇದಕ್ಕೂ ಮುನ್ನ ಟಾಸ್ ಗೆದ್ದ ಡೆಲ್ಲಿ ಡೇರ್'ಡೇವಿಲ್ಸ್ ಗುಜರಾತ್'ಗೆ ಬ್ಯಾಟಿಂಗ್'ಗೆ ಆಹ್ವಾನವಿತ್ತರು. ಬಿರುಸಿನ ಆಟಗಾರರಾದ  ಡ್ವೆನ್ ಸ್ಮಿತ್ 8 ಹಾಗೂ ನಾಯಕ ರೈನಾ 6 ರನ್ ಗಳಿಸಿ ಔಟಾದರೆ ಅರೋನ್ ಫಿಂಚ್ 69(39 ಎಸೆತ, 6 ಬೌಂಡರಿ,4 ಸಿಕ್ಸ್'ರ್) ದಿನೇಶ್ ಕಾರ್ತಿಕ್ 40(28 ಎಸೆತ,4 ಬೌಂಡರಿ, ಒಂದು ಸಿಕ್ಸ್'ರ್) ಇಶಾನ್ ಕೃಷ್ಣನ್ 34(25 ಎಸೆತ,5 ಬೌಂಡರಿ,1 ಸಿಕ್ಸ್'ರ್) ರನ್ಗಳಿಸುವುದರಿಂಗೆ ತಂಡ 5 ವಿಕೇಟ್ ನಷ್ಟಕ್ಕೆ  195 ಕಲೆ ಹಾಕಲು ನೆರವಾದರು.

ಸಂಕ್ಷಿಪ್ತ ಸ್ಕೋರ್

ಗುಜರಾತ್ ಲಯನ್ಸ್: 195/5(20/20)

ಡೆಲ್ಲಿ ಡೇರ್'ಡೇವಿಲ್ಸ್: 197/8(19.4/20)

ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್   

click me!