ಅಫ್ರಿದಿ ದಾಖಲೆ ಶತಕಕ್ಕೆ ಸಚಿನ್ ಕಾರಣ- ಆತ್ಮಚರಿತ್ರೆಯಲ್ಲಿ ಸೀಕ್ರೆಟ್ ಬಹಿರಂಗ!

By Web DeskFirst Published May 5, 2019, 5:10 PM IST
Highlights

ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಗೇಮ್ ಚೇಂಜರ್ ಆತ್ಮಚರಿತ್ರೆ ಹಲವು ಸೀಕ್ರೆಟ್ ಬಹಿರಂಗ ಪಡಿಸಿದೆ. ಇದೀಗ ಅಫ್ರಿದಾ 37 ಎಸೆತದಲ್ಲಿ ದಾಖಲೆಯ ಶತಕ ಸಿಡಿಸಿದ ಸೀಕ್ರೆಟ್ ಕೂಡ ಬಹಿರಂಗವಾಗಿದೆ. 

ಇಸ್ಲಾಮಾಬಾದ್(ಮೇ.04): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ 37 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದರು. 1996ರಲ್ಲಿ ಅಫ್ರಿದಿ ಸಿಡಿಸಿದ ದಾಖಲೆ 2014ರ ವರೆಗೆ ಅಚ್ಚಳಿಯದೇ ಉಳಿದಿತ್ತು. ಅಫ್ರಿದಿ ಈ ದಾಖಲೆಯ ಶತಕ ಸಿಡಿಸಲು ಮುಖ್ಯ ಕಾರಣ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಈ ಸೀಕ್ರೆಟ್ ಶಾಹಿದ್ ಅಫ್ರಿದಿ ತಮ್ಮ ಗೇಮ್ ಚೇಂಜರ್ ಆತ್ಮಚರಿತ್ರೆಯಲ್ಲಿ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಹುಟ್ಟಿದ್ದು 1980 ಅಲ್ಲ- ಶಾಹಿದ್ ಅಫ್ರಿದಿ ನಿಜ ವಯಸ್ಸು ಬಹಿರಂಗ!

ಅಫ್ರಿದಿ 37 ಎಸೆತದಲ್ಲಿ ಸೆಂಚುರಿ ಸಿಡಿಸಲು ಸಚಿನ್ ತೆಂಡುಲ್ಕರ್ ಬ್ಯಾಟ್ ಬಳಸಿದ್ದರು. ಸಚಿನ್ ತೆಂಡುಲ್ಕರ್ ತಮ್ಮ ಬ್ಯಾಟ್‌ನ್ನು ಪಾಕಿಸ್ತಾನ ಕ್ರಿಕೆಟಿಗ ವಕಾರ್ ಯುನಿಸ್‌ಗೆ ಕೈಗೆ ನೀಡಿದ್ದರು. ಪಾಕಿಸ್ತಾನದ ಸೈಲ್‌ಕೋಟ್‌ನಲ್ಲಿ ಇದೇ ರೀತಿ ಬ್ಯಾಟ್ ಮಾಡಿಸಿ ತರಲು ವಕಾರ್‌ಗೆ ಹೇಳಿದ್ದರು. ಬ್ಯಾಟ್ ವಕಾರ್ ಕೈಯಲ್ಲೇ ಇತ್ತು. ತ್ರಿಕೋನ ಸರಣಿ ಮುಗಿಸಿ ತವರಿಗೆ ತೆರಳೋ ವೇಳೆ ಬ್ಯಾಟ್ ಮಾಡಿಸಲು ನಿರ್ಧರಿಸಿದ್ದರು.

ಇದನ್ನೂ ಓದಿ: ಮಾನಸಿಕ ಚಿಕಿತ್ಸೆ ಕೊಡಿಸುತ್ತೇನೆ, ಭಾರತಕ್ಕೆ ಬನ್ನಿ: ಅಫ್ರಿದಿಗೆ ಗಂಭೀರ್ ಆಹ್ವಾನ

ತ್ರಿಕೋನ ಸರಣಿಯಲ್ಲಿ ಅಫ್ರಿದಿ ಬ್ಯಾಟಿಂಗ್ ಹೋಗುವಾಗ ವಕಾರ್ ಯುನಿಸ್, ಸಚಿನ್ ನೀಡಿದ ಬ್ಯಾಟನ್ನೇ ನೀಡಿದ್ದಾರೆ. ಕ್ರೀಸ್‌ಗೆ ಬಂದ ಅಫ್ರಿದಿ ಸಿಕ್ಸರ್ ಸುರಿಮಳೆ ಸುರಿಸಿದ್ದಾರೆ. ಕೇವಲ 37 ಎಸೆತದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಸಚಿನ್ ಬ್ಯಾಟ್‌ನಿಂದ ಅಫ್ರಿದಿ ದಾಖಲೆ ಬರೆಯಲು ಸಾಧ್ಯವಾಯಿತು.

click me!