ಎದುರಾಳಿಯ ಹೊಡೆತಕ್ಕೆ ಕಿಡ್ನಿ ಕಳಕೊಂಡ ಬಾಸ್ಕೆಟ್‌ಬಾಲ್‌ ಪಟು!

By Kannadaprabha NewsFirst Published Sep 5, 2023, 10:19 AM IST
Highlights

ಭಾನುವಾರ ದಕ್ಷಿಣ ಸುಡಾನ್‌-ಸರ್ಬಿಯಾ ನಡುವಿನ ಪಂದ್ಯದ ವೇಳೆ ಈ ಪ್ರಸಂಗ ಜರುಗಿದೆ. ಪಂದ್ಯ ಮುಕ್ತಾಯಕ್ಕೆ 2 ನಿಮಿಷ ಬಾಕಿ ಇರುವಾಗ ಸರ್ಬಿಯಾದ ಬೋರಿಸಾ ಸಿಮಾನಿಕ್‌ರ ಹೊಟ್ಟೆ ಭಾಗಕ್ಕೆ ಸುಡಾನ್‌ನ ನುನಿ ಒಮೊಟ್‌ರ ಕೈ ಬಲವಾಗಿ ತಾಗಿದೆ. ನೋವಿನಿಂದ ಚೀರುತ್ತಿದ್ದ ಸಿಮಾನಿಕ್‌ರನ್ನು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಕಿಡ್ನಿ ನಿಷ್ಕ್ರಿಯಗೊಂಡಿದ್ದಾಗಿ ಘೋಷಿಸಿದ್ದಾರೆ.

ಮನಿಲಾ(ಫಿಲಿಪ್ಪೀನ್ಸ್‌): ಪಂದ್ಯದ ವೇಳೆ ಎದುರಾಳಿ ಆಟಗಾರನ ಹೊಡೆತದಿಂದ ಗಾಯಗೊಂಡು, ಸರ್ಬಿಯಾದ ಬಾಸ್ಕೆಟ್‌ಬಾಲ್‌ ಆಟಗಾರ ಒಂದು ಕಿಡ್ನಿಯನ್ನೇ ಕಳೆದುಕೊಂಡ ಆಘಾತಕಾರಿ ಘಟನೆ ಬಾಸ್ಕೆಟ್‌ಬಾಲ್‌ ವಿಶ್ವಕಪ್‌ ವೇಳೆ ನಡೆದಿದೆ. ಭಾನುವಾರ ದಕ್ಷಿಣ ಸುಡಾನ್‌-ಸರ್ಬಿಯಾ ನಡುವಿನ ಪಂದ್ಯದ ವೇಳೆ ಈ ಪ್ರಸಂಗ ಜರುಗಿದೆ. ಪಂದ್ಯ ಮುಕ್ತಾಯಕ್ಕೆ 2 ನಿಮಿಷ ಬಾಕಿ ಇರುವಾಗ ಸರ್ಬಿಯಾದ ಬೋರಿಸಾ ಸಿಮಾನಿಕ್‌ರ ಹೊಟ್ಟೆ ಭಾಗಕ್ಕೆ ಸುಡಾನ್‌ನ ನುನಿ ಒಮೊಟ್‌ರ ಕೈ ಬಲವಾಗಿ ತಾಗಿದೆ. ನೋವಿನಿಂದ ಚೀರುತ್ತಿದ್ದ ಸಿಮಾನಿಕ್‌ರನ್ನು ಬಳಿಕ ಆಸ್ಪತ್ರೆಗೆ ಸೇರಿಸಲಾಗಿದ್ದು, ವೈದ್ಯರು ಕಿಡ್ನಿ ನಿಷ್ಕ್ರಿಯಗೊಂಡಿದ್ದಾಗಿ ಘೋಷಿಸಿದ್ದಾರೆ. ಬಳಿಕ ಸರ್ಜರಿ ಮೂಲಕ ಕಿಡ್ನಿಯನ್ನು ಹೊರತೆಗೆದಿದ್ದಾರೆ.

ಟಿಟಿ ಏಷ್ಯನ್‌ ಕೂಟದಲ್ಲಿ ಭಾರತಕ್ಕೆ ಪದಕ ಖಚಿತ

ಪ್ಯೊಂಗ್‌ಚಾಂಗ್‌(ದ.ಕೊರಿಯಾ): ಇಲ್ಲಿ ನಡೆಯುತ್ತಿರುವ ಟೇಬಲ್‌ ಟೆನಿಸ್‌ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪುರುಷರ ತಂಡ ಸೆಮಿಫೈನಲ್‌ ಪ್ರವೇಶಿಸಿದ್ದು, ಪದಕ ಖಚಿತಪಡಿಸಿದೆ. ಸೋಮವಾರ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ತಂಡ ಸಿಂಗಾಪೂರ ವಿರುದ್ಧ 3-0 ಅಂತರದಲ್ಲಿ ಜಯಗಳಿಸಿತು. ಭಾರತದ ಪರ ಸಿಂಗಲ್ಸ್‌ನಲ್ಲಿ ಶರತ್‌ ಕಮಲ್‌, ಜಿ.ಸತ್ಯನ್‌ ಹಾಗೂ ಹರ್ಮಿತ್‌ ದೇಸಾಯಿ ಜಯಗಳಿಸಿದರು. ಇದೇ ವೇಳೆ ಮಹಿಳಾ ವಿಭಾಗದ ಕ್ವಾರ್ಟರ್‌ ಫೈನಲ್ಸ್‌ನಲ್ಲಿ ಭಾರತ, ಜಪಾನ್‌ ವಿರುದ್ಧ ಸೋತು ಹೊರಬಿತ್ತು.

US Open 2023: ನೋವಾಕ್ ಜೋಕೋವಿಚ್ ಕ್ವಾರ್ಟರ್‌ಗೆ, ಇಗಾ ಸ್ವಿಯಾಟೆಕ್ ಔಟ್

ನೀರಜ್‌ ಚೋಪ್ರಾಗೆ ಸ್ವಿಸ್‌ ಸರ್ಕಾರದಿಂದ ಸನ್ಮಾನ!

ಜೂರಿಚ್‌: ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಒಲಿಂಪಿಕ್ಸ್‌ ಹಾಗೂ ವಿಶ್ವ ಚಾಂಪಿಯನ್‌ ನೀರಜ್‌ ಚೋಪ್ರಾ ಅವರನ್ನು ಸ್ವಿಜರ್‌ಲೆಂಡ್‌ ಪ್ರವಾಸೋದ್ಯಮ ಸಚಿವಾಲಯ ಸನ್ಮಾನಿಸಿದ್ದು, ಅವರನ್ನು ಸ್ನೇಹದ ರಾಯಭಾರಿ ಎಂದು ಕರೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವಾಲಯದ ಜಾಗತಿಕ ಪಾಲುದಾರಿಕೆ ಮುಖ್ಯಸ್ಥ ಪಾಸ್ಕಲ್‌ ಪ್ರಿನ್ಸ್‌, ‘ಜಾವೆಲಿನ್‌ ಚಾಂಪಿಯನ್‌ ನೀರಜ್‌ ಇಡೀ ಪೀಳಿಗೆಗೆ ಸ್ಫೂರ್ತಿ. ನಮ್ಮ ಸ್ನೇಹದ ರಾಯಭಾರಿಯಾಗಿರುವ ನೀರಜ್‌ ಭವಿಷ್ಯದಲ್ಲಿ ಮತ್ತಷ್ಟು ಉತ್ತುಂಗಕ್ಕೇರಲಿ’ ಎಂದು ಶುಭ ಹಾರೈಸಿದ್ದಾರೆ. ನೀರಜ್‌ ಡೈಮಂಡ್‌ ಲೀಗ್‌ ಫೈನಲ್ಸ್‌ ಹಾಗೂ ಏಷ್ಯಾಡ್‌ಗೆ ಸ್ವಿಜರ್‌ಲೆಂಡ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ.

ರಾಂಚಿಯಲ್ಲಿ ಹಾಕಿ ಮಹಿಳಾ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ

ರಾಂಚಿ: ಇತ್ತೀಚೆಗಷ್ಟೇ ಪುರುಷರ ಏಷ್ಯನ್‌ ಹಾಕಿ ಚಾಂಪಿಯನ್‌ಶಿಪ್‌ಗೆ ಆತಿಥ್ಯ ವಹಿಸಿದ್ದ ಭಾರತ ಮತ್ತೊಂದು ಪ್ರತಿಷ್ಠಿತ ಟೂರ್ನಿ ಆಯೋಜಿಸಲಿದ್ದು, ಅ.27ರಿಂದ ನ.5ರ ವರೆಗೆ ಜಾರ್ಖಂಡ್‌ನ ರಾಂಚಿಯಲ್ಲಿ ಮಹಿಳೆಯರ ಏಷ್ಯನ್‌ ಹಾಕಿ ಕೂಟಕ್ಕೆ ಆತಿಥ್ಯ ವಹಿಸಲಿದೆ. 

ತಂದೆಯಾದ ವೇಗಿ ಜಸ್ಪ್ರೀತ್ ಬುಮ್ರಾ; ಮಗುವಿನ ಮುದ್ದಾದ ಹೆಸರಿಟ್ಟ ಟೀಂ ಇಂಡಿಯಾ ವೇಗಿ..!

ಭಾರತ ಇದೇ ಮೊದಲ ಬಾರಿ ಮಹಿಳೆಯರ ಏಷ್ಯನ್‌ ಕೂಟಕ್ಕೆ ಆತಿಥ್ಯ ವಹಿಸಲಿದೆ. 2016ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದ ಭಾರತ, ಹಾಲಿ ಚಾಂಪಿಯನ್‌ ಜಪಾನ್‌, ಕೊರಿಯಾ, ಚೀನಾ, ಮಲೇಷ್ಯಾ ಹಾಗೂ ಥಾಯ್ಲೆಂಡ್‌ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಭಾರತ ಈವರೆಗೆ 3 ಬಾರಿ ಫೈನಲ್‌ಗೇರಿದ್ದು, 2013 ಹಾಗೂ 2018ರಲ್ಲಿ ರನ್ನರ್‌-ಅಪ್‌ ಆಗಿತ್ತು.

click me!