US Open 2023: ನೋವಾಕ್ ಜೋಕೋವಿಚ್ ಕ್ವಾರ್ಟರ್‌ಗೆ, ಇಗಾ ಸ್ವಿಯಾಟೆಕ್ ಔಟ್

By Naveen Kodase  |  First Published Sep 5, 2023, 8:21 AM IST

ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಜೋಕೋ ಕ್ರೊವೇಷಿಯಾದ ಬೊರ್ನಾ ಗೊಜೊ ವಿರುದ್ಧ 6-2, 7-5, 6-4 ಗೆಲುವು ದಾಖಲಿಸಿದರು. ಮುಂದಿನ ಸುತ್ತಿನಲ್ಲಿ ಜೋಕೋಗೆ, ಟೂರ್ನಿಯಲ್ಲಿ ಯಾವುದೇ ಸೆಟ್‌ ಕಳೆದುಕೊಳ್ಳದೇ ಕ್ವಾರ್ಟರ್‌ಗೇರಿರುವ ಅಮೆರಿಕದ ಟೇಲರ್‌ ಫಿಟ್ಜ್‌ ಸವಾಲು ಎದುರಾಗಲಿದೆ.
 


ನ್ಯೂಯಾರ್ಕ್‌(ಸೆ.05): 24ನೇ ಗ್ರ್ಯಾನ್‌ಸ್ಲಾಂ ಮೇಲೆ ಕಣ್ಣಿಟ್ಟಿರುವ ನೋವಾಕ್‌ ಜೋಕೋವಿಚ್‌ ಯುಎಸ್‌ ಓಪನ್ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ. ಆದರೆ ಮಹಿಳಾ ಸಿಂಗಲ್ಸ್‌ ಹಾಲಿ ಚಾಂಪಿಯನ್‌ ಇಗಾ ಸ್ವಿಯಾಟೆಕ್‌ ಆಘಾತಕಾರಿ ಸೋಲನುಭವಿಸಿದ್ದಾರೆ.

ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಜೋಕೋ ಕ್ರೊವೇಷಿಯಾದ ಬೊರ್ನಾ ಗೊಜೊ ವಿರುದ್ಧ 6-2, 7-5, 6-4 ಗೆಲುವು ದಾಖಲಿಸಿದರು. ಮುಂದಿನ ಸುತ್ತಿನಲ್ಲಿ ಜೋಕೋಗೆ, ಟೂರ್ನಿಯಲ್ಲಿ ಯಾವುದೇ ಸೆಟ್‌ ಕಳೆದುಕೊಳ್ಳದೇ ಕ್ವಾರ್ಟರ್‌ಗೇರಿರುವ ಅಮೆರಿಕದ ಟೇಲರ್‌ ಫಿಟ್ಜ್‌ ಸವಾಲು ಎದುರಾಗಲಿದೆ.

Latest Videos

undefined

ಕ್ಯಾಚ್ ಬಿಟ್ಟವರು ಒಬ್ಬಿಬ್ಬರಲ್ಲ, ನೇಪಾಳ ವಿರುದ್ಧ ಭಾರತದ ಕಳಪೆ ಫೀಲ್ಡಿಂಗ್ ಟ್ರೋಲ್!

ಇಗಾ ಸವಾಲು ಅಂತ್ಯ: 5ನೇ ಗ್ರ್ಯಾನ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕಾತರದಲ್ಲಿದ್ದ ಪೋಲೆಂಡ್‌ನ ಸ್ವಿಯಾಟೆಕ್‌, ಪ್ರಿ ಕ್ವಾರ್ಟರ್‌ನಲ್ಲಿ ಲಾತ್ವಿಯಾದ ಎಲೆನಾ ಒಸ್ಟಪೆಂಕೋ ವಿರುದ್ಧ 6-3, 3-6, 1-6 ಸೆಟ್‌ಗಳಲ್ಲಿ ಪರಾಭವಗೊಂಡರು. ಇದರೊಂದಿಗೆ ಅವರು ವಿಶ್ವ ನಂ.1 ಸ್ಥಾನವನ್ನೂ ಕಳೆದುಕೊಂಡಿದ್ದು, ಬೆಲಾರಸ್‌ನ ಅರೈನಾ ಸಬಲೆಂಕಾ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ 10ನೇ ಶ್ರೇಯಾಂಕಿತೆ ಕ್ಯಾರೊಲಿನಾ ಮುಕೋವಾ, 6ನೇ ಶ್ರೇಯಾಂಕಿತೆ ಕೊಕೊ ಗಾಫ್‌ ಕ್ವಾರ್ಟರ್‌ಗೇರಿದರು.

ಬೋಪಣ್ಣ ಪುರುಷರ ಡಬಲ್ಸ್ ಕ್ವಾರ್ಟರ್‌ಗೆ

ಭಾರತದ ಹಿರಿಯ ಟೆನಿಸಿಗ ರೋಹನ್‌ ಬೋಪಣ್ಣ ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಆಡುತ್ತಿರುವ ಬೋಪಣ್ಣ, ಭಾನುವಾರ ರಾತ್ರಿ ಬ್ರಿಟನ್‌ನ ಜೂಲಿಯನ್ ಕ್ಯಾಶ್‌-ಹೆನ್ರಿ ಪ್ಯಾಟನ್‌ ವಿರುದ್ಧ 6-4, 6-7(5), 7-6(10-6) ಅಂತರದಲ್ಲಿ ಜಯಗಳಿಸಿದರು. ಆದರೆ ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ ಸೋಲನುಭವಿಸಿದರು. ಪ್ರಿ ಕ್ವಾರ್ಟರ್‌ನಲ್ಲಿ ಬೋಪಣ್ಣ-ಇಂಡೋನೇಷ್ಯಾದ ಆಲ್ಡಿಲಾ ಜೋಡಿ ಅಮೆರಿಕದ ಬೆನ್‌ ಶೆಲ್ಟನ್‌-ಟೇಲರ್‌ ವಿರುದ್ಧ 2-6, 5-7ರಿಂದ ಪರಾಭವಗೊಂಡಿತು.

ಕೊಹ್ಲಿ ಪರ ಘೋಷಣೆಗೆ ಉರಿದು ಬಿದ್ದ ಗಂಭೀರ್, ಮಧ್ಯದ ಬೆರಳು ತೋರಿಸಿ ಸಂಸದನ ಅಸಭ್ಯ ನಡೆ!

ಇಂದಿನಿಂದ ಚೀನಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ ಶುರು

ಚಾಂಗ್ಝೂ(ಚೀನಾ): ಚೀನಾ ಓಪನ್‌ ಸೂಪರ್‌ 1000 ಬ್ಯಾಡ್ಮಿಂಟನ್‌ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಏಷ್ಯನ್‌ ಗೇಮ್ಸ್‌ಗೂ ಮುನ್ನ ಸುಧಾರಿತ ಪ್ರದರ್ಶನ ತೋರಲು ಭಾರತೀಯ ಶಟ್ಲರ್‌ಗಳು ಕಾತರದಲ್ಲಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ಚಾಂಪಿಯನ್‌ಶಿಪ್‌ ಕಂಚು ಗೆದ್ದಿದ್ದ ವಿಶ್ವ ನಂ.6 ಎಚ್‌.ಎಸ್.ಪ್ರಣಯ್‌ ಭಾರತದ ಸವಾಲು ಮುನ್ನಡೆಸಲಿದ್ದಾರೆ. ಲಕ್ಷ್ಯ ಸೇನ್‌, ಪ್ರಿಯಾನ್ಶು ರಾಜಾವತ್‌ ಕೂಡಾ ಪುರುಷರ ಸಿಂಗಲ್ಸ್‌ನಲ್ಲಿ ಕಣಕ್ಕಿಳಿಯಲಿದ್ದು, ಮಹಿಳಾ ಸಿಂಗಲ್ಸ್‌ನಲ್ಲಿ ಭಾರತೀಯರ ಸ್ಪರ್ಧೆ ಇಲ್ಲ. ಪುರುಷರ ಡಬಲ್ಸ್‌ನಲ್ಲಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ ಪದಕ ನಿರೀಕ್ಷೆಯಲ್ಲಿದ್ದು, ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ ಆಡಲಿದ್ದಾರೆ.

click me!