* ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭದ್ರತಾ ವೈಫಲ್ಯ?
* ಕುಸ್ತಿ ನಡೆಯಬೇಕಿದ್ದ ಪಂದ್ಯದ ಸ್ಥಳ ಬೇರೆಡೆಗೆ ಶಿಫ್ಟ್
* ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿರುವ ದೃಶ್ಯಾವಳಿಗಳು ಕಂಡು ಬಂದಿವೆ
ಬರ್ಮಿಂಗ್‌ಹ್ಯಾಮ್(ಆ.05): ಕುಸ್ತಿ ಪಂದ್ಯಾವಳಿಗಳು ನಡೆಯಬೇಕಿದ್ದ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭದ್ರತಾ ಉಲ್ಲಂಘನೆಯಾದಂತೆ ಕಂಡುಬಂದಿದ್ದು, ಕುಸ್ತಿ ಪಂದ್ಯಾವಳಿಗಳು ನಡೆಯಬೇಕಿದ್ದ ಸ್ಥಳವನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕುಸ್ತಿಪಟುಗಳನ್ನು ಹಾಗೂ ಕುಸ್ತಿ ಪಂದ್ಯಾವಳಿಗಳನ್ನು ವೀಕ್ಷಿಸಲು ಬಂದಿದ್ದ ಪ್ರೇಕ್ಷಕರನ್ನೂ ಸಹಾ ಭದ್ರತಾ ಸಿಬ್ಬಂದಿಗಳು ಹೊರಗೆ ಕಳಿಸಿದ ಘಟನೆ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದೆ.
ಕುಸ್ತಿ ಪಂದ್ಯಾವಳಿಗಳು ನಡೆಯಬೇಕಿದ್ದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಗಳು ತಪಾಸಣೆ ನಡೆಸುತ್ತಿರುವ ದೃಶ್ಯಾವಳಿಗಳು ಕಂಡು ಬಂದಿವೆ. ಈ ಕುರಿತಂತೆ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿದ್ದು, ನಾವು ಕುಸ್ತಿ ಪಂದ್ಯಾವಳಿಗೆ ಅರ್ಧವಿರಾಮ ಹಾಕುತ್ತಿದ್ದು, ಆ ನಂತರ ಪಂದ್ಯಗಳು ಎಂದಿನಂತೆ ಸಾಗಲಿದೆ ಎಂದು ಟ್ವೀಟ್ ಮಾಡಿತ್ತು. ಇದಾದ ಬಳಿಕ ಮತ್ತೊಂದು ಟ್ವೀಟ್ ಮಾಡಿರುವ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್, ಕುಸ್ತಿ ಪಂದ್ಯಗಳು ಒಂದು ಗಂಟೆ ತಡವಾಗಿ ಆರಂಭವಾಗಲಿವೆ. ಕುಸ್ತಿ ಪಂದ್ಯಗಳು ಇಂಗ್ಲೆಂಡ್ ಕಾಲಮಾನ 12:15ರಿಂದ ಆರಂಭವಾಗಲಿವೆ. ಅಡಚಣೆಯಾಗಿದ್ದಕ್ಕೆ ಕುಸ್ತಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸುತ್ತಿದ್ದೇವೆ ಎಂದು ಟ್ವೀಟ್ ಮಾಡಿತ್ತು.
We're taking a short pause for a safety check and will resume action once we receive the go-ahead.
— United World Wrestling (@wrestling)Wrestling will resume in one hour. We'll restart at 12:15 (local time 🏴). We apologize, wrestling fans. https://t.co/pXwoUiQyey
— United World Wrestling (@wrestling)ಇನ್ನು ಇದೇ ವೇಳೆ ಭಾರತದ ತಾರಾ ಕುಸ್ತಿಪಟು ಹಾಗೂ ಒಲಿಂಪಿಕ್ಸ್ ಪದಕ ವಿಜೇತ ಭಜರಂಗ್ ಪೂನಿಯಾ ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ 65 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದು, ಮೊದಲ ಸುತ್ತಿನಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿಯೇ ಅತ್ಯುದ್ಭುತ ತಂತ್ರಗಾರಿಕೆ ಮೆರೆದ ಭಜರಂಗ್ ಪೂನಿಯಾ ಕೇವಲ 1.47 ನಿಮಿಷಗಳಲ್ಲಿ ಎದುರಾಳಿ ಕುಸ್ತಿಪಟುವನ್ನು 5-0 ಅಂತರದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.
BREAKING NEWS-
Wrestling venue vacated, all asked to step out, security checks going on at the wrestling venue at
Competition on hold.
📸 pic.twitter.com/U586nQDJSo
Commonwealth Games 2022 :ಸೆಮಿಫೈನಲ್‌ಗೆ ಭಾರತ ಪುರುಷರ ಹಾಕಿ ತಂಡ ಲಗ್ಗೆ
ಇಂದು ಕಣಕ್ಕಿಳಿಯುತ್ತಿರುವ ಭಾರತೀಯ ಕುಸ್ತಿಪಟುಗಳ ವಿವರ ಹೀಗಿದೆ ನೋಡಿ
ದೀಪಕ್ ಪೂನಿಯಾ - ಪುರುಷರ ಪ್ರೀಸ್ಟೈಲ್ 86 ಕೆಜಿ ವಿಭಾಗ
ಅನ್ಶು ಮಲಿಕ್ - ಮಹಿಳೆಯರ ಪ್ರೀಸ್ಟೈಲ್ 57 ಕೆಜಿ ವಿಭಾಗ
ಸಾಕ್ಷಿ ಮಲಿಕ್ - ಮಹಿಳೆಯರ ಪ್ರೀಸ್ಟೈಲ್ 62 ಕೆಜಿ ವಿಭಾಗ
ದಿವ್ಯ ಕಕ್ರಾನ್ - ಮಹಿಳೆಯರ ಪ್ರೀಸ್ಟೈಲ್ 68 ಕೆಜಿ ವಿಭಾಗ
ಮೋಹಿತ್ ಗ್ರೆವಾಕ್ - ಪುರುಷರ ಪ್ರೀಸ್ಟೈಲ್ 125 ಕೆಜಿ ವಿಭಾಗ