ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ದಂಪತಿ ಮಗು ಇಜಾನ್ ಫೋಟೋ ರಿವೀಲ್ ಆಗಿದೆ. ಸ್ವತಃ ಸಾನಿಯಾ ಮಿರ್ಜಾ ಎರಡು ಫೋಟೋಗಳನ್ನ ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ಫೋಟೋ.
ಹೈದರಾಬಾದ್(ನ.22): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಕಳೆದ ಅಕ್ಟೋಬರ್ 30 ರಂದು ಗಂಡು ಮಗುವಿಗೆ ಜನ್ಮನೀಡಿದ್ದರು. ಮಗು ಹುಟ್ಟಿದ ವೇಳೆ ಸಾನಿಯಾ ಪತಿ, ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದರು.
ಸಾನಿಯಾ ಹಾಗೂ ಶೆೋಯೆಬ್ ಹಾಗು ಕುಟುಂಬಸ್ಥರು ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡಿದ್ದರು. ಆದರೆ ಮಗು ಇಜಾನ್ ಫೋಟೋ ಬಹಿರಂಗವಾಗಿರಲಿಲ್ಲ. ಇದೇ ಮೊದಲ ಬಾರಿಗೆ ಸಾನಿಯಾ ಹಾಗೂ ಶೋಯೆಬ್ ದಂಪತಿ ಮಗುವಿನ ಫೋಟೋ ರಿವೀಲ್ ಆಗಿದೆ.
#Moments 💖🤱🏽👼🏽 #Allhamdulillah
A post shared by Sania Mirza (@mirzasaniar) on Nov 21, 2018 at 8:59am PST
ಸಾನಿಯಾ ಮಿರ್ಜಾ ಫೋಟೋ ರಿವೀಲ್ ಮಾಡಿದ್ದಾರೆ. ಮಗು ಇಜಾನ್ ಎತ್ತಿಕೊಂಡ ಸಾನಿಯಾ ಮಿರ್ಜಾ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾನಿಯಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. ಎರಡು ಫೋಟೋ ಪೋಸ್ಟ್ ಮಾಡಿರುವ ಸಾನಿಯಾ ಮಿರ್ಜಾ, ಅಭಿಮಾನಿಗಳ ಕುತೂಹಲನ್ನ ಇಮ್ಮಡಿಗೊಳಿಸಿದ್ದಾರೆ.