ತಂಡಕ್ಕೆ ಭಾರವಾದ್ರೆ ಬ್ಯಾಗ್ ಪ್ಯಾಕ್ ಮಾಡುತ್ತೇನೆ: ವಾಸಿಮ್ ಜಾಫರ್!

By Web DeskFirst Published Nov 22, 2018, 3:26 PM IST
Highlights

ಟೀಂ ಇಂಡಿಯಾ ಟೆಸ್ಟ್ ಹಾಗೂ ಏಕದಿನ ಪಂದ್ಯವಾಡಿ ಗಮನಸೆಳೆದ ಹಿರಿಯ ಕ್ರಿಕೆಟಿಗ ಇದೀಗ ತಂಡಕ್ಕೆ ಬೇಡವಾದರೆ ಹೊರನಡೆಯುತ್ತೇನೆ ಅನ್ನೋ ಮೂಲಕ ಪ್ರಶ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ. ಅಷ್ಟಕ್ಕೂ ಆ ಕ್ರಿಕೆಟಿಗ ಯಾರು? ಇಲ್ಲಿದೆ ಹೆಚ್ಚಿನ ವಿವರ.

ಮುಂಬೈ(ನ.22): ತಂಡಕ್ಕೆ ಭಾರವಾದರೆ ನಾನು ಬ್ಯಾಗ್ ಪ್ಯಾಕ್ ಮಾಡಿ ಹೊರಡುತ್ತೇನೆ ಎಂದು ರಣಜಿ ಕ್ರಿಕೆಟಿಗ ವಾಸಿಮ್ ಜಾಫರ್ ಹೇಳಿದ್ದಾರೆ. ಈ ಮೂಲಕ 40 ವರ್ಷದ ವಾಸಿಮ್ ಜಾಫರ್ ತನ್ನ ವಿದಾಯ ಸದ್ಯಕ್ಕಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ.

ಮುಂಬೈ ತೊರೆದು ವಿದರ್ಭ ತಂಡ ಸೇರಿಕೊಂಡಿರುವ ವಾಸಿಮ್ ಜಾಫರ್ ರಣಜಿ ಸೇರಿದಂತೆ ದೇಸಿ ಟೂರ್ನಿಗಳಲ್ಲಿ ಸಕ್ರೀಯರಾಗಿದ್ದಾರೆ. ಇಷ್ಟೇ ಅಲ್ಲ ರಣಜಿ ಕ್ರಿಕೆಟ್‌ನಲ್ಲಿ 11,000 ರನ್ ಸಿಡಿಸಿದ ಏಕೈಕ ಕ್ರಿಕೆಟಿಗಅನ್ನೋ ಹೆಗ್ಗಳಿಕೆಗೂ ಜಾಫರ್ ಪಾತ್ರರಾಗಿದ್ದಾರೆ. ಇಷ್ಟೇ ಅಲ್ಲ ಗರಿಷ್ಠ ರಣಜಿ ಪಂದ್ಯ ಆಡಿದ ಸಾಧನೆಗೆ ಜಾಫರ್‌ಗಿನ್ನು 4 ಪಂದ್ಯಗಳ ಅವಶ್ಯಕತೆ ಇದೆ.

ಕಳೆದ  ವರ್ಷ ವಿದರ್ಭ ಪರ ಆಡಿರುವುದು ಹೆಚ್ಚು ಖುಷಿ ನೀಡಿದೆ. ಇಷ್ಟೇ ಅಲ್ಲ ವಿದರ್ಭ ರಣಜಿ ಹಾಗೂ ಇರಾನಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾನು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ನೀಡುತ್ತೇನೆ. ಹೀಗಾಗಿ ಕ್ರಿಕೆಟ್ ನಿವೃತ್ತಿ ಸದ್ಯಕ್ಕಿಲ್ಲ ಎಂದು ವಾಸಿಮ್ ಜಾಫರ್ ಸ್ಪಷ್ಟಪಡಿಸಿದ್ದಾರೆ.

ವಾಸಿಮ್ ಜಾಫರ್ ಟೀಂ ಇಂಡಿಯಾ ಪರ 31 ಟೆಸ್ಟ್ ಪಂದ್ಯದಿಂದ 1944 ರನ್ ಸಿಡಿಸಿದ್ದಾರೆ. 5 ಶತಕ ಹಾಗೂ 11 ಅರ್ಧಶತಕ ಸಿಡಿಸಿದ್ದಾರೆ. ಇನ್ನು 2 ಏಕದಿನ ಪಂದ್ಯ ಕೂಡ ಆಡಿದ್ದಾರೆ. 2008ರ ಬಳಿಕ ಟೀಂ ಇಂಡಿಯಾದಿಂದ ದೂರ ಉಳಿದ ಜಾಫರ್, ದೇಸಿ ಟೂರ್ನಿಗಳಿಗೆ ಸೀಮಿತವಾಗಿದ್ದಾರೆ.

click me!