ಕ್ಯಾಮರಮ್ಯಾನ್ ಆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

Published : Nov 22, 2018, 04:17 PM IST
ಕ್ಯಾಮರಮ್ಯಾನ್ ಆದ ಹಿಟ್ ಮ್ಯಾನ್ ರೋಹಿತ್ ಶರ್ಮಾ!

ಸಾರಾಂಶ

ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಇದೀಗ ಕ್ಯಾಮರಮ್ಯಾನ್ ಆಗಿ ಗಮನಸೆಳೆದಿದ್ದಾರೆ. ಅಷ್ಟಕ್ಕೂ ರೋಹಿತ್ ಕ್ಯಾಮರಮ್ಯಾನ್ ಆಗಿದ್ದು ಯಾಕೆ? ಇಲ್ಲಿದೆ ವಿವರ.

ಮೆಲ್ಬೋರ್ನ್(ನ.22): ಆಸ್ಟ್ರೇಲಿಯಾ ವಿರುದ್ದದ 2ನೇ ಟಿ20 ಪಂದ್ಯಕ್ಕೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ಇದೀಗ ಮೆಲ್ಬೋರ್ನ್‌ನಲ್ಲಿ ಬೀಡುಬಿಟ್ಟಿದೆ. ಅಭ್ಯಾಸದ ಬಿಡುವಿನ ವೇಳೆ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕ್ಯಾಮರಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಫೋಟೋ ಶೂಟ್‌ಗಾಗಿ ಟೀಂ ಇಂಡಿಯಾ ಕ್ರಿಕೆಟಿಗರು ರೆಡಿಯಾಗಿದ್ದರು. ಈ ವೇಳೆ ಕನ್ನಡಿಗ ಮನೀಶ್ ಪಾಂಡೆ ಫೋಟೋ ಶೂಟ್‌ಗೆ ನಿಂತಿದ್ದರು. ಇದನ್ನ ರೋಹಿತ್ ಶರ್ಮಾ ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದರು.  ಪ್ರೋಫೆಶನಲ್ ಕ್ಯಾಮರಾಮ್ಯಾನ್ ರೀತಿ ಮನೀಶ್ ಪಾಂಡೆ ವೀಡಿಯೋ ಶೂಟ್ ಮಾಡಿದರು. ರೋಹಿತ್ ಕ್ಯಾಮರಮ್ಯಾನ್ ಆಗಿರುವ ವೀಡಿಯೋ ಇದೀಗ ವೈರಲ್ ಆಗಿದೆ.  

 

 

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಸೋಲು ಅನುಭವಿಸಿರುವ ಟೀಂ ಇಂಡಿಯಾ ಇದೀಗ 2ನೇ ಪಂದ್ಯದಲ್ಲಿ ತಿರುಗೇಟು ನೀಡೋ ವಿಶ್ವಾಸದಲ್ಲಿದೆ. ನಾಳೆ(ನ.23) ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ 2ನೇ ಚುಟುಕು ಪಂದ್ಯ ಆಯೋಜಿಸಲಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Cricket: 30 ಎಸೆತಗಳ ಆಟವೂ ಅಂತರರಾಷ್ಟ್ರೀಯ ಪಂದ್ಯವಾ? ಭಾರತ-ಜಪಾನ್ ಕದನದ ಹಿನ್ನೆಲೆಯಲ್ಲಿ ಐಸಿಸಿ ರೂಲ್ಸ್‌ ಬಿಚ್ಚಿಟ್ಟ ಸತ್ಯ!
India vs Japan T20: ಕೊನೆ ಓವರ್‌ವರೆಗೂ ವಿಶ್ವ ಚಾಂಪಿಯನ್ನರನ್ನು ನಡುಗಿಸಿದ ಜಪಾನ್: 2 ರನ್‌ಗಳಿಂದ ಭಾರತಕ್ಕೆ ರೋಚಕ ಜಯ