
ಹೈದರಾಬಾದ್ (ಅ.28): ಭಾರತೀಯ ಟೆನಿಸ್ ರಂಗದ ಪೋಸ್ಟರ್ ಗರ್ಲ್, 6 ಗ್ರ್ಯಾಂಡ್ ಸ್ಲ್ಯಾಮ್ಗಳ ಒಡತಿ ಸಾನಿಯಾ ಮಿರ್ಜಾ (Sania Mirza) ವೃತ್ತಿಪರ ಟೆನಿಸ್ನಿಂದ ನಿವೃತ್ತರಾಗಿದ್ದರೂ, ಸದಾ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುತ್ತಾರೆ. ಇದೀಗ ಹೈದರಾಬಾದ್ ಟೆನಿಸ್ ಸುಂದರಿ ಮತ್ತೊಂದು ಪ್ರಮುಖ ವಿಚಾರದಿಂದಾಗಿ ಹೈಲೈಟ್ ಆಗಿದ್ದಾರೆ.. ಸಾನಿಯಾ ಕೈಗೊಂಡಿರುವ ನೂತನ ಕಾರ್ಯ ಒಂದೆಡೆ ಅವರ ಧರ್ಮನಿಷ್ಠೆಗೆ ಮೆಚ್ಚುಗೆ ತಂದಿದ್ದರೆ, ಇನ್ನೊಂದೆಡೆ ತೀವ್ರ ಟೀಕೆ ಹಾಗೂ ವಿವಾದಕ್ಕೂ ಗುರಿಯಾಗಿದೆ. ಹೈದರಾಬಾದ್ನಲ್ಲಿ ತಮಗೆ ಸೇರಿದ ಜಾಗದಲ್ಲಿ ಸ್ವಂತ ಖರ್ಚಿನಲ್ಲಿ ಬೃಹತ್ ಮಸೀದಿಯೊಂದನ್ನು (Mosque Construction) ನಿರ್ಮಿಸಲು ಸಾನಿಯಾ ಮುಂದಾಗಿದ್ದಾರೆ ಎನ್ನುವ ಸುದ್ದಿಯೇ ಚರ್ಚೆಗೆ ಕಾರಣವಾಗಿದೆ. ಆದರೆ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋದ ಹಿಂದಿನ ಸತ್ಯವೇ ಬೇರೆ ಇದೆ.
ಸ್ಪಷ್ಟನೆ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಸುದ್ದಿಗೆ ಪ್ರತಿಕ್ರಿಯೆ ನೀಡಿರುವ ಸಾನಿಯಾ ಮಿರ್ಜಾ ತಂದೆ ಇಮ್ರಾನ್ ಮಿರ್ನಾ, ಮಸೀದಿ ನಿರ್ಮಾಣಕ್ಕೆ ಸಾನಿಯಾ ಮಿರ್ಜಾ ತಮ್ಮ ಸ್ಥಳವನ್ನು ನೀಡಿದ್ದಾರೆ ಅನ್ನೋದು ಸುಳ್ಳು ಸುದ್ದಿ. ಇನ್ನು ಅಜರುದ್ದೀನ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಅನ್ನೋದು ಎಐ ಚಿತ್ರ ಎಂದು ಹೇಳಿದ್ದಾರೆ.ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಕೆಲ ದಿನಗಳಿಂದ ವೈರಲ್ ಆಗುತ್ತಿರುವ ಹಿನ್ನಲೆಯಲ್ಲಿ ಸ್ಪಷ್ಟನೆ ನೀಡುತ್ತಿದ್ದೇನೆ ಎಂದಿದ್ದಾರೆ.
ಭಾಗ್ಯನಗರ ಹೈದರಾಬಾದ್ನಲ್ಲಿ ಸಾನಿಯಾ ಮಿರ್ಜಾ ಅವರಿಗೆ ಹಲವು ಸ್ಥಿರಾಸ್ತಿಗಳಿವೆ. ನಗರದ ಹೃದಯಭಾಗದಲ್ಲಿ ಸಾನಿಯಾ ಒಡೆತನದ ಶಾಪಿಂಗ್ ಸೆಂಟರ್ ಒಂದಿದ್ದು, ಅದರ ಪಕ್ಕದಲ್ಲೇ ಅವರಿಗೆ ಸೇರಿದ ಖಾಲಿ ನಿವೇಶನವೂ ಇದೆ. ಮೂಲತಃ ಈ ಜಾಗದಲ್ಲಿ ಅತ್ಯಾಧುನಿಕ ಟೆನಿಸ್ ತರಬೇತಿ ಕೇಂದ್ರವನ್ನು (Tennis Training Academy) ತೆರೆಯಲು ಸಾನಿಯಾ ಯೋಜನೆ ರೂಪಿಸಿದ್ದರು. ಆದರೆ ನಾನಾ ರೀತಿಯ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳಿಂದಾಗಿ ಅಕಾಡೆಮಿ ನಿರ್ಮಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. ಇದೀಗ ಅದೇ ಖಾಲಿ ಜಾಗವನ್ನು ಸಾನಿಯಾ ಮಸೀದಿ ನಿರ್ಮಾಣಕ್ಕಾಗಿ ದಾನ ಮಾಡಿದ್ದು, ಕಟ್ಟಡ ನಿರ್ಮಾಣದ ಸಂಪೂರ್ಣ ವೆಚ್ಚವನ್ನೂ ತಾವೇ ಭರಿಸುವುದಾಗಿ ಪ್ರಕಟಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾ ವರದಿಗಳು ಬಂದಿದ್ದವು.
ಇತ್ತೀಚೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ತೆಲಂಗಾಣ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ 'ಮೊಹಮ್ಮದ್ ಅಜರುದ್ದೀನ್' (Mohammad Azharuddin) ಅವರು ಈ ನೂತನ ಮಸೀದಿಯ ಶಂಕುಸ್ಥಾಪನೆಯನ್ನು (Foundation Stone) ನೆರವೇರಿಸಿದ್ದಾರೆ ಎಂದೂ ತಿಳಿಸಲಾಗಿತ್ತು. ಸಾನಿಯಾ ಮಿರ್ಜಾ ಅವರೊಂದಿಗೆ ಸುದೀರ್ಘ ಒಡನಾಟ ಹಾಗೂ ಆಪ್ತತೆ ಹೊಂದಿರುವ ಅಜರುದ್ದೀನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮಸೀದಿ ನಿರ್ಮಿಸುತ್ತಿರುವ ಸ್ಥಳದ ಸುತ್ತಮುತ್ತ ಪ್ರಸ್ತುತ ಯಾವುದೇ ದೊಡ್ಡ ಮಸೀದಿಗಳಿಲ್ಲ. ಹೀಗಾಗಿ ಸ್ಥಳೀಯ ಮುಸ್ಲಿಮರು ನಮಾಜ್ ಮಾಡಲು ದೀರ್ಘ ದೂರ ಪ್ರಯಾಣಿಸಬೇಕಾಗಿತ್ತು. ಈ ಸಮಸ್ಯೆಯನ್ನು ಗಮನಿಸಿ ಸ್ಥಳೀಯ ನಿವಾಸಿಗಳ ಅನುಕೂಲಕ್ಕಾಗಿ ಸಾನಿಯಾ ಮಿರ್ಜಾ ತಮ್ಮ ಸ್ವಂತ ಖರ್ಚಿನಲ್ಲಿ ಮಸೀದಿ ನಿರ್ಮಿಸಿಕೊಡಲು ಮುಂದಾಗಿದ್ದಾರೆ ಎನ್ನುವ ವರದಿಗಳಿದ್ದವು. ಆದರೆ, ಇದೆಲ್ಲವೂ ಸುಳ್ಳು ಎನ್ನುವುದು ಗೊತ್ತಾಗಿದೆ.
ಆದರೆ, ಕ್ರೀಡಾ ತರಬೇತಿಗಾಗಿ ಸರ್ಕಾರದಿಂದ ಅಥವಾ ಕ್ರೀಡಾ ಉದ್ದೇಶಕ್ಕಾಗಿ ಖರೀದಿಸಿದ ಭೂಮಿಯಲ್ಲಿ ಮಸೀದಿಯನ್ನು ಯಾವ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ ಎಂದು ನೆಟ್ಟಿಗರು ಕಟುವಾಗಿ ಪ್ರಶ್ನಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವ ನೆಟ್ಟಿಗರು, ಒಂದು ವೇಳೆ ಅಲ್ಲಿ ಟೆನಿಸ್ ಅಕಾಡೆಮಿ ನಿರ್ಮಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕರ ಅನುಕೂಲಕ್ಕಾಗಿ ಬಡವರಿಗೆ ನೆರವಾಗುವ ಶಾಲೆ (School) ಅಥವಾ ಆಸ್ಪತ್ರೆಯನ್ನು (Hospital) ನಿರ್ಮಿಸಬಹುದಿತ್ತಲ್ಲವೇ? ಮಸೀದಿಯನ್ನೇ ಏಕೆ ನಿರ್ಮಿಸಬೇಕು? ಎಂದು ಸಾನಿಯಾ ನಡೆಯನ್ನು ತೀವ್ರವಾಗಿ ಪ್ರಶ್ನಿಸಿದ್ದಾರೆ. ಆದರೆ, ಸಂಪ್ರದಾಯವಾದಿ ಹಾಗೂ ಧರ್ಮನಿಷ್ಠ ಮುಸ್ಲಿಂ ಸಮುದಾಯದವರು ಸಾನಿಯಾ ಮಿರ್ಜಾ ಅವರ ಈ ನಿರ್ಧಾರವನ್ನು ಬೆಂಬಲಿಸಿ ಅವರ ಪರವಾಗಿ ನಿಂತಿದ್ದಾರೆ.
ಸಾನಿಯಾ ಮಿರ್ಜಾ ಅವರಿಗೆ ವಿವಾದಗಳು ಹೊಸದೇನಲ್ಲ. 2010 ರಲ್ಲಿ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರನ್ನು ವಿವಾಹವಾಗುವ ಮೂಲಕ ಅವರು ಭಾರಿ ವಿವಾದ ಸೃಷ್ಟಿಸಿದ್ದರು. ಈ ದಂಪತಿಗೆ ಇಝಾನ್ (Izhaan) ಎಂಬ ಮಗನಿದ್ದಾನೆ. ಆದರೆ 2024 ರಲ್ಲಿ ಸಾನಿಯಾ ಹಾಗೂ ಶೋಯೆಬ್ ಮಲಿಕ್ ಅಧಿಕೃತವಾಗಿ ವಿಚ್ಛೇದನ (Divorce) ಪಡೆದು ಪ್ರತ್ಯೇಕಗೊಂಡರು. ತರುವಾಯ ಶೋಯೆಬ್ ಮಲಿಕ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರನ್ನು ಮದುವೆಯಾಗಿದ್ದರು.
ಪ್ರಸ್ತುತ ಸಾನಿಯಾ ಮಿರ್ಜಾ ತಮ್ಮ ಹೆಚ್ಚಿನ ಸಮಯವನ್ನು ಹೈದರಾಬಾದ್ನಲ್ಲೂ ಕಳೆಯುತ್ತಿದ್ದಾರೆ. ಭಾರತದ ಪರ 6 ಗ್ರ್ಯಾಂಡ್ ಸ್ಲ್ಯಾಮ್ಗಳನ್ನು ಗೆದ್ದು ಸುದೀರ್ಘ ಕಾಲದ ಹಿಂದೆಯೇ ವೃತ್ತಿಪರ ಟೆನಿಸ್ಗೆ ವಿದಾಯ ಹೇಳಿರುವ ಅವರು, ವಿಚ್ಛೇದನದ ನಂತರವೂ ವರ್ಷದ ಬಹುಪಾಲು ಸಮಯವನ್ನು ದುಬೈನಲ್ಲಿ ಕಳೆಯುತ್ತಾರೆ. ದುಬೈನಲ್ಲಿ ಸ್ವಂತ ಟೆನಿಸ್ ಅಕಾಡೆಮಿ ಹೊಂದಿರುವ ಸಾನಿಯಾ, ದುಬೈ ಸ್ಪೋರ್ಟ್ಸ್ ಸಂಸ್ಥೆಯ ರಾಯಭಾರಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಅವರ ಪುತ್ರ ಇಝಾನ್ ಸಹ ದುಬೈನಲ್ಲೇ ಶಿಕ್ಷಣ ಪಡೆಯುತ್ತಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.