
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆದ ಮೂರನೇ ಟಿ20 ಮ್ಯಾಚ್‌ನಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನ ಬೆನ್ನಲ್ಲೇ ಕೇರಳ ಮೂಲದ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಸಹ ಆಟಗಾರ ಅಭಿಷೇಕ್ ಶರ್ಮಾ ಸಿಕ್ಕಾಪಟ್ಟೆ ಹೊಗಳಿದ್ದಾರೆ. ಯುವ ಆಟಗಾರ ವೈಭವ್ ಸೂರ್ಯವಂಶಿಗಾಗಿ ತಮ್ಮ ಓಪನಿಂಗ್ ಜಾಗವನ್ನು ಬಿಟ್ಟುಕೊಟ್ಟ ಸಂಜು ನಿರ್ಧಾರವೇ, ಟೀಮ್‌ಗೆ ಯಾವುದೇ ಭಯವಿಲ್ಲದೆ ಆಡಲು ಸ್ಫೂರ್ತಿ ತುಂಬಿತು ಅಂತ ಅಭಿಷೇಕ್ ಹೇಳಿದ್ದಾರೆ.
ವೆಲ್ಲಿಂಗ್ಟನ್ ಮ್ಯಾಚ್‌ನಲ್ಲಿ 199 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಇಂಡಿಯಾ ಕೇವಲ 13.2 ಓವರ್‌ಗಳಲ್ಲಿ ಗುರಿ ಮುಟ್ಟಿತು. ಅಭಿಷೇಕ್ ಶರ್ಮಾ 38 ಬಾಲ್‌ಗಳಲ್ಲಿ 113 ರನ್ ಚಚ್ಚಿದರೆ, ವೈಭವ್ ಸೂರ್ಯವಂಶಿ 19 ಬಾಲ್‌ಗಳಲ್ಲಿ 45 ರನ್ ಸಿಡಿಸಿದರು.
ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಪವರ್-ಪ್ಲೇ (ಮೊದಲ 6 ಓವರ್)ನಲ್ಲಿ ಬರೋಬ್ಬರಿ 118 ರನ್ ಸಿಡಿಸಿದರು. ಇದು ಅಂ.ರಾ. ಟಿ20ಯಲ್ಲಿ ಹೊಸ ದಾಖಲೆ. 2021ರಲ್ಲಿ ಸರ್ಬಿಯಾ ವಿರುದ್ಧ ರೊಮೇನಿಯಾ 116 ರನ್ ಗಳಿಸಿ ಬರೆದಿದ್ದ ದಾಖಲೆಯನ್ನು ಭಾರತ ಅಳಿಸಿ ಹಾಕಿತು.
ಮ್ಯಾಚ್ ಮುಗಿದ ಮೇಲೆ ಮೀಡಿಯಾ ಜೊತೆ ಮಾತಾಡಿದ ಅಭಿಷೇಕ್, ತಾವು ಹೊಡೆದ ಸೆಂಚುರಿಗಿಂತ ಹೆಚ್ಚಾಗಿ ಸಂಜು ಸ್ಯಾಮ್ಸನ್ ಟೀಮ್‌ಗಾಗಿ ಮಾಡಿದ ತ್ಯಾಗದ ಬಗ್ಗೆನೇ ಜಾಸ್ತಿ ಒತ್ತುಕೊಟ್ಟು ಮಾತಾಡಿದರು. "ಹಿಂದಿನ ಮ್ಯಾಚ್‌ಗಳಲ್ಲಿ ಸಂಜು ಭಾಯ್ ಮತ್ತು ನಾನು ಓಪನಿಂಗ್ ಮಾಡ್ತಿದ್ವಿ. ಆದ್ರೆ ಇಂದು ವೈಭವ್‌ಗಾಗಿ ಅವರು ತಮ್ಮ ಬ್ಯಾಟಿಂಗ್ ಜಾಗವನ್ನು ಬಿಟ್ಟುಕೊಟ್ಟರು. ಸಂಜು ಭಾಯ್ ಸ್ವಲ್ಪವೂ ಸ್ವಾರ್ಥವಿಲ್ಲದ ಆಟಗಾರ. ಹಿಂದಿನ ಮ್ಯಾಚ್‌ಗಳಲ್ಲಿ ಸಖತ್ ಪರ್ಫಾರ್ಮೆನ್ಸ್ ಕೊಟ್ಟಿದ್ದರೂ, ಟೀಮ್‌ನ ಒಳ್ಳೆ ಕಾಂಬಿನೇಷನ್‌ಗಾಗಿ ಅವರು ಮೂರನೇ ಕ್ರಮಾಂಕದಲ್ಲಿ ಆಡಲು ಒಪ್ಪಿಕೊಂಡರು. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಇಂಥಾ ಪಾಸಿಟಿವ್ ವಾತಾವರಣವೇ ಎಲ್ಲರಿಗೂ ಕ್ರೀಸ್‌ಗೆ ಹೋಗಿ ಫ್ರೀಯಾಗಿ ಬ್ಯಾಟ್ ಬೀಸಲು ತಾಕತ್ತು ಕೊಡುತ್ತೆ" ಅಂತ ಅಭಿಷೇಕ್ ಶರ್ಮಾ, ಸಂಜು ನಿಸ್ವಾರ್ಥ ನಡೆಯನ್ನು ಕೊಂಡಾಡಿದ್ದಾರೆ.
ಹೆಡ್ ಕೋಚ್ ಗೌತಮ್ ಗಂಭೀರ್ ಅವರು ವೈಯಕ್ತಿಕ ರೆಕಾರ್ಡ್‌ಗಳಿಗಿಂತ ಟೀಮ್‌ನ ಸ್ಟ್ರೈಕ್ ರೇಟ್ ಮತ್ತು ಅಟ್ಯಾಕಿಂಗ್ ಆಟಕ್ಕೆ ಜಾಸ್ತಿ ಪ್ರಾಮುಖ್ಯತೆ ಕೊಡ್ತಿದ್ದಾರೆ. ಮೊದಲ ಮ್ಯಾಚ್‌ನಲ್ಲಿ 33 ಬಾಲ್‌ಗಳಿಗೆ 67 ರನ್ ಸಿಡಿಸಿ 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿ ಗೆದ್ದಿದ್ದರೂ, ಯುವ ಆಟಗಾರನಿಗೆ ದಾರಿ ಮಾಡಿಕೊಡಲು ಸಂಜು ತೋರಿದ ದೊಡ್ಡ ಗುಣ ಡ್ರೆಸ್ಸಿಂಗ್ ರೂಮ್‌ನ ಒಗ್ಗಟ್ಟಿಗೆ ಸಾಕ್ಷಿಯಾಗಿದೆ.
"ಸೀನಿಯರ್ ಆಟಗಾರನೊಬ್ಬ ಟೀಮ್‌ಗಾಗಿ ಯಾವುದೇ ರೋಲ್ ತೆಗೆದುಕೊಳ್ಳಲು ರೆಡಿಯಾದಾಗ, ಅದು ಉಳಿದ ಆಟಗಾರರಿಗೂ ದೊಡ್ಡ ಸ್ಫೂರ್ತಿಯಾಗುತ್ತೆ" ಅಂತ ಅಭಿಷೇಕ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಗುಣಗಾನ ಮಾಡಿದ್ದಾರೆ. ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾದ ಮುಂದಿನ ಮ್ಯಾಚ್ ಶುಕ್ರವಾರ ಆಕ್ಲೆಂಡ್‌ನಲ್ಲಿ ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.