39ನೇ ವಯಸ್ಸಿನಲ್ಲಿ ಮತ್ತೆ ಮದುವೆಯಾಗ್ತಾರಾ ಸಾನಿಯಾ ಮಿರ್ಜಾ? ಡೇಟಿಂಗ್ ಬಗ್ಗೆ ಕೊನೆಗೂ ಸುಳಿವು ಕೊಟ್ಟ ಟೆನಿಸ್ ತಾರೆ!

Published : Nov 07, 2026, 08:07 AM IST
Indian Tennis Star Sania Mirza

ಸಾರಾಂಶ

39ನೇ ವಯಸ್ಸಿನ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಡೇಟಿಂಗ್ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಫರಾ ಖಾನ್ ಅವರ ಟಾಕ್ ಶೋನಲ್ಲಿ ತಾವು ಸಿಂಗಲ್ ಎಂದು ಹೇಳಿದ ಅವರು, ಜೀವನದಲ್ಲಿ ಯಾರಾದರೂ ಇರಬಹುದೇನೋ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮಾತುಗಳು ಎರಡನೇ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ.

39ನೇ ವಯಸ್ಸಿನಲ್ಲಿ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರ ಸಾನಿಯಾ ಮಿರ್ಜಾ? ಡೇಟಿಂಗ್ ಬಗ್ಗೆ ಕೊಟ್ಟ ಸುಳಿವೇನು?

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರ ಕ್ರೀಡಾ ಸಾಧನೆಯಿಂದಲ್ಲ, ವೈಯಕ್ತಿಕ ಜೀವನದ ವಿಚಾರವಾಗಿ! 39ನೇ ವಯಸ್ಸಿನಲ್ಲಿ ಸಾನಿಯಾ ಮತ್ತೆ ಪ್ರೀತಿಯಲ್ಲಿ ಬೀಳಲಿದ್ದಾರಾ? ಎರಡನೇ ಮದುವೆಗೆ ಸಿದ್ಧತೆ ನಡೆಸುತ್ತಿದ್ದಾರಾ? ಇಂತಹ ಪ್ರಶ್ನೆಗಳು ಇದೀಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮ್ಮ ಸಿಂಗಲ್ ಸ್ಟೇಟಸ್ ಮತ್ತು ಡೇಟಿಂಗ್ ಬಗ್ಗೆ ಸಾನಿಯಾ ನೀಡಿರುವ ಉತ್ತರಗಳು ಚರ್ಚೆಗೆ ಕಾರಣವಾಗಿವೆ.

ಡೇಟಿಂಗ್ ಬಗ್ಗೆ ಸಾನಿಯಾ ಮಿರ್ಜಾ ಹೇಳಿದ್ದೇನು?

ನಟಿ ಮತ್ತು ನಿರ್ದೇಶಕಿ ಫರಾ ಖಾನ್ ಅವರೊಂದಿಗೆ ಸಾನಿಯಾ ಮಿರ್ಜಾ 'ಡಬಲ್ ಡೇಟ್' ಎಂಬ ಟಾಕ್ ಶೋನಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಿರೂಪಕರಾದ ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಅವರೊಂದಿಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ವೇಳೆ ಸಾನಿಯಾ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ. ಸದ್ಯ ನೀವು ಸಿಂಗಲ್ ಆಗಿದ್ದೀರಾ ಎಂಬ ಪ್ರಶ್ನೆಗೆ ಸಾನಿಯಾ ಹೌದು ಎಂದು ಉತ್ತರಿಸಿದ್ದಾರೆ. ತಮ್ಮ ಜೀವನದಲ್ಲಿ ಯಾರೊಬ್ಬರ ಕೊರತೆಯೂ ಕಾಡುತ್ತಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಅಂಗದ್ ಬೇಡಿ ಅವರು ಸಾನಿಯಾಗೆ ಪುರುಷ ಸ್ನೇಹಿತರಲ್ಲಿ ಯಾರಾದರೂ ಕಾಫಿ ಡೇಟ್‌ಗೆ ಆಹ್ವಾನಿಸಿದ್ದಾರೆಯೇ ಎಂದು ಕೇಳಿದ್ದಾರೆ. ಇದಕ್ಕೆ ಸಾನಿಯಾ ನೀಡಿದ ಉತ್ತರ ಎಲ್ಲರ ಮುಖದಲ್ಲಿ ನಗು ಮೂಡಿಸಿದೆ. ತಮ್ಮ ಪುರುಷ ಸ್ನೇಹಿತರು ತಮ್ಮನ್ನು ಹುಡುಗರಂತೆಯೇ ನೋಡುತ್ತಾರೆ. ಬಾಯ್ಸ್ ಟ್ರಿಪ್‌ಗಳಿಗೆ ಆಹ್ವಾನಿಸುತ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ.

ಯುವರಾಜ್ ಸಿಂಗ್ ಜೊತೆಗಿನ ಸ್ನೇಹದ ಬಗ್ಗೆ ಮಾತು!

ಇದೇ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅಂಗದ್ ಬೇಡಿ ಅವರೊಂದಿಗಿನ ಸ್ನೇಹದ ಬಗ್ಗೆಯೂ ಸಾನಿಯಾ ಮಾತನಾಡಿದ್ದಾರೆ. ಅವರಿಬ್ಬರೂ ತಮ್ಮೊಂದಿಗೆ 'ಬ್ರೋ ಕೋಡ್' ಹಂಚಿಕೊಳ್ಳುತ್ತಾರೆ. ಅಂದರೆ ತಮ್ಮನ್ನು ಒಬ್ಬ ಹುಡುಗನ ಸ್ನೇಹಿತೆಯಂತೆಯೇ ನೋಡುತ್ತಾರೆ ಎಂದು ಹೇಳಿದ್ದಾರೆ.

ಫರಾ ಖಾನ್ ಕೂಡ ಸಾನಿಯಾ ಅವರ ಮಾತಿಗೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಸ್ನೇಹಿತರು ನಿಮ್ಮನ್ನು ಸಿಂಗಲ್ ಆಗಿದ್ದೀರಾ ಎಂದು ಕೇಳುತ್ತಾರೆ ಎಂದು ಹೇಳಿದಾಗ, ಸಾನಿಯಾ ತಾವು ನಿಜವಾಗಿಯೂ ಸಿಂಗಲ್ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ತಮ್ಮ ಜೀವನದಲ್ಲಿ ಪುರುಷ ಸಂಗಾತಿ ಯಾರೂ ಇಲ್ಲ ಎಂದು ಹೇಳಿದ ಅವರು, 'ಯಾರಿಗೊತ್ತು, ಇರಲೂಬಹುದು' ಎಂದು ನಗುತ್ತಾ ಹೇಳಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಶೋಯೆಬ್ ಮಲಿಕ್ ಜೊತೆಗಿನ ವಿಚ್ಛೇದನದ ಬಳಿಕ ಏನಾಯ್ತು?

ಸಾನಿಯಾ ಮಿರ್ಜಾ 2010ರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಇಝಾನ್ ಎಂಬ ಮಗನಿದ್ದಾನೆ. ಆದರೆ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ ಹಿನ್ನೆಲೆಯಲ್ಲಿ 2023ರಲ್ಲಿ ಇಬ್ಬರೂ ಬೇರೆಯಾಗಿದ್ದರು. 2024ರ ಜನವರಿಯಲ್ಲಿ ಸಾನಿಯಾ ಕುಟುಂಬ ವಿಚ್ಛೇದನದ ವಿಚಾರವನ್ನು ಸಾರ್ವಜನಿಕವಾಗಿ ದೃಢಪಡಿಸಿತ್ತು.

ಇದಾದ ಬಳಿಕ ಶೋಯೆಬ್ ಮಲಿಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾದರು. ಇದೀಗ ಸಾನಿಯಾ ಅವರ ಡೇಟಿಂಗ್ ಕುರಿತ ಮಾತುಗಳು ಅಭಿಮಾನಿಗಳಲ್ಲಿ ಹೊಸ ಚರ್ಚೆ ಹುಟ್ಟುಹಾಕಿವೆ. ಆದರೆ ಸಾನಿಯಾ ಎರಡನೇ ಮದುವೆ ಅಥವಾ ಹೊಸ ಪ್ರೇಮ ಸಂಬಂಧದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Breaking: ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಮ್‌ ಇಂಡಿಯಾ ವೇಗಿ ಮೊಹಮದ್‌ ಶಮಿ
ಕ್ರಿಕೆಟ್ ದೇವರ ಮಾತಿಗೂ ಡೋಂಟ್ ಕೇರ್: ಸಚಿನ್ ತೆಂಡೂಲ್ಕರ್ ಮಾತು ಧಿಕ್ಕರಿಸಿ 15 ವರ್ಷದ ವೈಭವ್‌ಗೆ ಕ್ಯಾಪ್ಟನ್ ಪಟ್ಟ!