ಚೀನಾ ಓಪನ್: ನಾಲ್ಕರ ಘಟ್ಟದಲ್ಲಿ ಎಡವಿದ ಸಾನಿಯಾ ಜೋಡಿ

Published : Oct 07, 2017, 05:29 PM ISTUpdated : Apr 11, 2018, 12:50 PM IST
ಚೀನಾ ಓಪನ್: ನಾಲ್ಕರ ಘಟ್ಟದಲ್ಲಿ ಎಡವಿದ ಸಾನಿಯಾ ಜೋಡಿ

ಸಾರಾಂಶ

ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಸಾನಿಯಾ ಜೋಡಿ ಮೊದಲ ಸೆಟ್ ತನ್ನದಾಗಿಸಿಕೊಂಡಿತು. ಆದರೆ 2ನೇ ಸೆಟ್ ಅನ್ನು 1-6 ಅಂತರದಿಂದ ಸುಲಭವಾಗಿ ಬಿಟ್ಟುಕೊಟ್ಟಿತು.

ಬೀಜಿಂಗ್(ಅ.7): ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಶುಯಿ ಪೆಂಗ್ ಜೋಡಿ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌'ನ ಸೆಮಿಫೈನಲ್‌'ನಲ್ಲಿ ಸೋಲನುಭವಿಸಿದೆ.

ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ಸ್ಲೊವಾಕಿಯಾದ ಮಾರ್ಟಿನಾ ಹಿಂಗೀಸ್ ಹಾಗೂ ತೈವಾನ್‌'ನ ಚಾನ್ ಯಂಗ್- ಜಾನ್ ಜೋಡಿ ವಿರುದ್ಧ 6-2, 1-6, 5-10 ಸೆಟ್‌'ಗಳಿಂದ ಸೋಲುಂಡಿತು. ಈ ಮೂಲಕ ಚೀನಾ ಓಪನ್‌ನಿಂದ ಹೊರ ನಡೆಯಿತು.

ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಸಾನಿಯಾ ಜೋಡಿ ಮೊದಲ ಸೆಟ್ ತನ್ನದಾಗಿಸಿಕೊಂಡಿತು. ಆದರೆ 2ನೇ ಸೆಟ್ ಅನ್ನು 1-6 ಅಂತರದಿಂದ ಸುಲಭವಾಗಿ ಬಿಟ್ಟುಕೊಟ್ಟಿತು. ಅಂತಿಮ ಹಾಗೂ ಕೊನೆಯ ನಿರ್ಣಾಯಕ ಸೆಟ್‌'ನಲ್ಲಿ ಅಂಕ ಗಳಿಸಲು ಎರಡೂ ಜೋಡಿ ಸಾಕಷ್ಟು ಬೆವರು ಹರಿಸಿತು. ಅಂತಿಮವಾಗಿ ಹಿಂಗೀಸ್ ಜೋಡಿ ಎದುರು ಸಾನಿಯಾ ಜೋಡಿ ಶರಣಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಬ್ಬರು ಮ್ಯಾಚ್‌ ವಿನ್ನರ್ ಕೈಬಿಟ್ಟು ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಟೀಂ ಇಂಡಿಯಾ ಆಯ್ಕೆ ಮಾಡಿದ ರವಿಚಂದ್ರನ್ ಅಶ್ವಿನ್! ಒಂದು ಅಚ್ಚರಿ ಎಂಟ್ರಿ
2027ರ ಏಕದಿನ ವಿಶ್ವಕಪ್: ಈ 12 ಸ್ಟೇಡಿಯಂಗಳಲ್ಲಿ ನಡೆಯಲಿದೆ ಹೈವೋಲ್ಟೇಜ್ ಕದನ, ಐಸಿಸಿಯಿಂದ ಮಹತ್ವದ ಘೋಷಣೆ