ಸಾನಿಯಾ ಮಿರ್ಜಾ-ಮಲಿಕ್‌ ದಾಂಪತ್ಯ ಅಂತ್ಯ: ವಿಚ್ಛೇದನ ಆಗಿದೆ, ಅಧಿಕೃತ ಘೋಷಣೆ ಬಾಕಿ?

By Kannadaprabha News  |  First Published Nov 12, 2022, 10:39 AM IST

ಟೆನಿಸ್ ತಾರೆ ಸಾನಿಯಾ ಮಿರ್ಜಾ-ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ದಾಂಪತ್ಯ ಜೀವನ ಅಂತ್ಯ
ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಗದ ಪತ್ರಗಳ ಕಾರ್ಯ ಬಾಕಿ
ಈಗಾಗಲೇ ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ


ನವದೆಹಲಿ(ನ.12): ಭಾರತದ ಟೆನಿಸ್‌ ತಾರೆ, 6 ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ವಿಜೇತೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ತಾರಾ ಕ್ರಿಕೆಟಿಗ ಶೋಯೆಬ್‌ ಮಲಿಕ್‌ ದಾಂಪತ್ಯ ಅಂತ್ಯಗೊಂಡಿದೆ. ಇಬ್ಬರ ವಿಚ್ಛೇದನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಕಾಗದ ಪತ್ರಗಳ ಕಾರ್ಯ ಬಾಕಿ ಇದೆ ಎಂದು ದಂಪತಿಯ ಆಪ್ತ ಸ್ನೇಹಿತರೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

ಇಬ್ಬರೂ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದಾರೆ. ಸಾನಿಯಾ ದುಬೈನಲ್ಲಿ ತಮ್ಮ ಮಗುವಿನೊಂದಿಗೆ ನೆಲೆಸಿದ್ದು, ಶೋಯೆಬ್‌ ಪಾಕಿಸ್ತಾನದಲ್ಲಿದ್ದಾರೆ ಎನ್ನಲಾಗಿದೆ. ಶೋಯೆಬ್‌ ಪಾಕಿಸ್ತಾನದ ನಟಿಯೊಬ್ಬರ ಜೊತೆ ಸಂಬಂಧ ಹೊಂದಿರುವುದು ವಿಚ್ಛೇದನಕ್ಕೆ ಮುಖ್ಯ ಕಾರಣ ಎನ್ನಲಾಗುತ್ತಿದೆ. ಈ ಬೆಳವಣಿಗೆ ಬಗ್ಗೆ ಸಾನಿಯಾ ಅಥವಾ ಮಲಿಕ್‌ ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಈ ಇಬ್ಬರೂ 2010ರಲ್ಲಿ ವಿವಾಹವಾಗಿದ್ದರು.

Tap to resize

Latest Videos

ಇಂಗ್ಲೆಂಡ್‌ನಲ್ಲಿ 2025ರ ಕಬಡ್ಡಿ ವಿಶ್ವಕಪ್‌ ಟೂರ್ನಿ

ನವದೆಹಲಿ: 2025ರ ಕಬಡ್ಡಿ ವಿಶ್ವಕಪ್‌ ಇಂಗ್ಲೆಂಡ್‌ನ ವೆಸ್ಟ್‌ ಮಿಡ್ಲೆಂಡ್‌್ಸನಲ್ಲಿ ನಡೆಯಲಿದೆ ಎಂದು ವಿಶ್ವ ಕಬಡ್ಡಿ ಫೆಡರೇಶನ್‌ ಶುಕ್ರವಾರ ಘೋಷಿಸಿದೆ. ಇದೇ ಮೊದಲ ಬಾರಿ ವಿಶ್ವಕಪ್‌ ಏಷ್ಯಾದ ಹೊರಗೆ ನಡೆಯಲಿದೆ. ಟೂರ್ನಿಯಲ್ಲಿ ಪುರುಷ, ಮಹಿಳಾ ವಿಭಾಗದಲ್ಲಿ ಭಾರತ, ಪಾಕಿಸ್ತಾನ ಸೇರಿದಂತೆ ಕನಿಷ್ಠ 16 ತಂಡಗಳಿರಲಿದೆ ಎಂದು ವಿಶ್ವ ಕಬಡ್ಡಿ ಫೆಡರೇಶನ್‌ ತಿಳಿಸಿದೆ. ಈವರೆಗಿನ 10 ವಿಶ್ವಕಪ್‌ಗಳಲ್ಲಿ ಭಾರತ 9ರಲ್ಲಿ ಪ್ರಶಸ್ತಿ ಗೆದ್ದಿದೆ.

ಬಾಕ್ಸಿಂಗ್‌: ಲವ್ಲೀನಾ ಸೇರಿ ನಾಲ್ವರಿಗೆ ಚಿನ್ನ

ಅಮ್ಮಾನ್‌(ಜೋರ್ಡನ್‌): ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗೋಹೈನ್‌ ಸೇರಿದಂತೆ ಭಾರತದ ನಾಲ್ವರು ಮಹಿಳಾ ಬಾಕ್ಸರ್‌ಗಳು ಏಷ್ಯನ್‌ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡಿದ್ದಾರೆ. ಶುಕ್ರವಾರ ಮಹಿಳೆಯರ 75 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಲವ್ಲೀನಾ, ಉಜ್ವೇಕಿಸ್ತಾನದ ರುಜ್‌ಮೆಟೋವಾ ವಿರುದ್ಧ 5-0 ಅಂತರದಲ್ಲಿ ಗೆದ್ದರೆ, 63 ಕೆ.ಜಿ. ವಿಭಾಗದಲ್ಲಿ ಪವೀರ್‍ನ್‌ ಹೂಡಾ, 81 ಕೆ.ಜಿ. ವಿಭಾಗದಲ್ಲಿ ಸ್ವೀಟಿ, 81+ ಕೆ.ಜಿ. ವಿಭಾಗದಲ್ಲಿ ಅಲ್ಫಿಯಾ ಖಾನ್‌ ಚಿನ್ನ ಜಯಿಸಿದರು. ಮೀನಾಕ್ಷಿ 53 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

ಸಾನಿಯಾ ಮಿರ್ಜಾ-ಶೋಯೆಬ್ ಮಲಿಕ್ ದಾಂಪತ್ಯಕ್ಕೆ ಹುಳಿ ಹಿಂಡಿದ ಆಯೆಷಾ ಒಮರ್ ಯಾರು ಗೊತ್ತಾ..?

ಐಎಸ್‌ಎಲ್‌: ಬೆಂಗಾಲ್‌ಗೆ ಶರಣಾದ ಬಿಎಫ್‌ಸಿ

ಬೆಂಗಳೂರು: ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯಲ್ಲಿ ಶುಕ್ರವಾರ ಈಸ್ಟ್‌ ಬೆಂಗಾಲ್‌ ವಿರುದ್ಧ 0-1 ಗೋಲುಗಳಿಂದ ಪರಾಭವಗೊಂಡಿದೆ. ತವರಿನ ಅಂಗಳದಲ್ಲಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡರೂ ಬೆಂಗಾಲ್‌ ಆಟದ ಮುಂದೆ ಬಿಎಫ್‌ಸಿ ಮಂಕಾಯಿತು. ಪಂದ್ಯದುದ್ದಕ್ಕೂ ಬಿಎಫ್‌ಸಿ ಹಿಡಿತ ಸಾಧಿಸಿದ್ದರೂ 69ನೇ ನಿಮಿಷದಲ್ಲಿ ಕ್ಲೀಟನ್‌ ಸಿಲ್ವ ಬಾರಿಸಿದ ಗೋಲು ಬೆಂಗಾಲ್‌ಗೆ ಜಯ ತಂದುಕೊಟ್ಟಿತು. ಸದ್ಯ ಬಿಎಫ್‌ಸಿ 5 ಪಂದ್ಯಗಳಲ್ಲಿ ಕೇವಲ 1 ಗೆಲುವಿನೊಂದಿಗೆ 4 ಅಂಕ ಹೊಂದಿದ್ದು, ಅಂಕಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿದಿದೆ.

ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದ ಶೂಟರ್‌ ಸಿಂಘರಾಜ್‌

ಅಬುಧಾಬಿ: ಎರಡು ಬಾರಿ ಪ್ಯಾರಾಲಿಂಪಿಕ್‌ ಪದಕ ವಿಜೇತ ಭಾರತದ ಪ್ಯಾರಾ ಶೂಟರ್‌ ಸಿಂಘರಾಜ್‌ ಅಧಾನ 2024ರ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಇಲ್ಲಿ ನಡೆಯುತ್ತಿರುವ ಪ್ಯಾರಾ ಶೂಟಿಂಗ್‌ ವಿಶ್ವ ಚಾಂಪಿಯನ್‌ಶಿಪ್‌ನ ಪಿ1-ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಅಧಾನ 4ನೇ ಸ್ಥಾನ ಪಡೆದರು. ಇದೇ ವೇಳೆ ಪುರುಷರ ಪಿ1 10 ಮೀ ಏರ್‌ ಪಿಸ್ತೂಲ್‌ ಎಸ್‌ಎಚ್‌1 ವಿಭಾಗದಲ್ಲಿ ಸಿಂಘರಾಜ್‌, ಮನೀಶ್‌ ನರ್ವಾಲ್‌, ನಿಹಾಲ್‌ ಸಿಂಗ್‌ ಅವರನ್ನೊಳಗೊಂಡ ತಂಡ ಚಿನ್ನ ಜಯಿಸಿತು.

click me!