ಭಾರತದ ಕ್ರಿರಿಯರ ಫುಟ್ಬಾಲ್ ತಂಡ ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ನೆರೆಯ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಕಠ್ಮಂಡು (ಸೆ.30): ಭಾರತ ಕಿರಿಯರ ಫುಟ್ಬಾಲ್ ತಂಡ, ಅಂಡರ್ 18 ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೊಚ್ಚಲ ಬಾರಿಗೆ ಭಾರತ ತಂಡ ಪ್ರಶಸ್ತಿ ಎತ್ತಿಹಿಡಿದಿದೆ. ಭಾನುವಾರ ಇಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ 2-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು.
CHAMPIONS!!
WELL DONE !
🇮🇳 2⃣ - 1⃣🇧🇩 🇮🇳 U18 lift maiden title 🏆!! ⚽️ pic.twitter.com/bryhTqiOZj
ಪ್ರೊ ಕಬಡ್ಡಿ 2019: ಪ್ಲೇ-ಆಫ್‌ಗೆ ಲಗ್ಗೆಯಿಟ್ಟ ಹರ್ಯಾಣ
ವಿಕ್ರಂ ಪ್ರತಾಪ್ 2ನೇ ನಿಮಿಷದಲ್ಲೇ ಗೋಲು ಬಾರಿಸಿ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಮೊದಲಾರ್ಧವನ್ನು 1-0 ಮುನ್ನಡೆಯೊಂದಿಗೆ ಮುಕ್ತಾಯಗೊಳಿಸುವ ವಿಶ್ವಾಸದಲ್ಲಿದ್ದ ಭಾರತಕ್ಕೆ ಯಾಸಿನ್ ಅರಾಫತ್ ಆಘಾತ ನೀಡಿದರು. 40ನೇ ನಿಮಿಷದಲ್ಲಿ ಗೋಲು ಬಾರಿಸಿದ ಯಾಸಿಸ್, ಬಾಂಗ್ಲಾ 1-1ರಲ್ಲಿ ಸಮಬಲ ಸಾಧಿಸಲು ನೆರವಾದರು.
Party begins in Kathmandu. India are the champions 🥳🎖️🎇
Congratulations, and boys. 👏🏻 👍🏻
🇧🇩 1⃣ - 2⃣ 🇮🇳 💙 ⚽️ pic.twitter.com/ttTd88GdpY
ದ್ವಿತೀಯಾರ್ಧದಲ್ಲಿ ಉಭಯ ತಂಡಗಳ ನಡುವೆ ಭಾರೀ ಪೈಪೋಟಿ ನಡೆಯಿತು. 90+1ನೇ ನಿಮಿಷದಲ್ಲಿ ರವಿ ಬಹದ್ದೂರ್ 30 ಯಾರ್ಡ್‌ಗಳಿಂದ ಬಾರಿಸಿದ ಆಕರ್ಷಕ ಗೋಲು, ಭಾರತದ ಗೆಲುವಿಗೆ ಕಾರಣವಾಯಿತು.
ಗುಡ್ ನ್ಯೂಸ್ ! 2020 ಒಲಿಂಪಿಕ್ಸ್‌ಗೆ ಭಾರತ ರಿಲೇ ತಂಡ!
ಟೂರ್ನಿಯಲ್ಲಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಮಾಲ್ಡೀವ್‌್ಸ ಹಾಗೂ ಭೂತಾನ್ ತಂಡಗಳು ಪಾಲ್ಗೊಂಡಿದ್ದವು. ಭಾರತ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿತ್ತು. ಬಾಂಗ್ಲಾ ವಿರುದ್ಧ ಗೋಲು ರಹಿತ ಡ್ರಾಗೆ ತೃಪ್ತಿಪಟ್ಟಿದ್ದ ಭಾರತ, ಶ್ರೀಲಂಕಾ ವಿರುದ್ಧ 3-0 ಅಂತರದಲ್ಲಿ ಗೆದ್ದು, ಗುಂಪಿನಲ್ಲಿ ಅಗ್ರಸ್ಥಾನ ಗಳಿಸುವ ಮೂಲಕ ಸೆಮೀಸ್‌ಗೇರಿತ್ತು. ಸೆಮೀಸ್‌ನಲ್ಲಿ ಮಾಲ್ಡೀವ್‌್ಸ ವಿರುದ್ಧ 4-0ಯಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಬಾಂಗ್ಲಾದೇಶ, ಭೂತಾನ್ ವಿರುದ್ಧ 4-0ಯಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೇರಿತ್ತು.
ಕಿರಿಯರ ಭರ್ಜರಿ ಪ್ರದರ್ಶನ!
ಇತ್ತೀಚೆಗಷ್ಟೇ ವಿವಿಧ ವಯೋಮಿತಿಯ ಭಾರತ ಫುಟ್ಬಾಲ್ ತಂಡ ಉತ್ತಮ ಪ್ರದರ್ಶನದಿಂದ ಗಮನಸೆಳೆಯುತ್ತಿರುವ ಹಿನ್ನೆಲೆಯಲ್ಲಿ ಅಖಿಲ ಭಾರತ ಫುಟ್ಬಾಲ್ ಸಂಸ್ಥೆ (ಎಐಎಫ್‌ಎಫ್) ಅಧ್ಯಕ್ಷ ಪ್ರಫುಲ್ ಪಟೇಲ್ ಸೇರಿದಂತೆ ಇತರೆ ಅಧಿಕಾರಿಗಳು ಶುಭ ಕೋರಿದರು. ಇದೇ ವರ್ಷದ ಆಗಸ್ಟ್‌ನಲ್ಲಿ ನಡೆದಿದ್ದ ಅಂಡರ್ 15 ಸ್ಯಾಫ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್‌ನಲ್ಲಿ ಭಾರತ, ಬಾಂಗ್ಲಾದೇಶ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತ್ತು. ಅಂಡರ್ 16 ಭಾರತ ಫುಟ್ಬಾಲ್ ತಂಡ, ಎಎಫ್‌ಸಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ. ಅಂಡರ್ 19 ಭಾರತ ತಂಡ, ಮುಂದಿನ ನವೆಂಬರ್‌ನಲ್ಲಿ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಆಡಲಿದೆ.