
ನವದೆಹಲಿ(ಡಿ.03): ವೃತ್ತಿಜೀವನದಲ್ಲಿ ತಾನು ಎದುರಿಸಿದ ಬೌಲರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ದಿವಂಗತ ಕ್ರಿಕೆಟಿಗ ಹ್ಯಾನ್ಸಿ ಕ್ರೋನಿಯೆ ಅವರಂಥ ಚಾಲಾಕಿ ಬೌಲರ್ ಅನ್ನು ಎಲ್ಲೂ ಕಾಣಲಿಲ್ಲ ಎಂದು ಭಾರತೀಯ ಕ್ರಿಕೆಟ್ ಲೋಕದ ದಿಗ್ಗಜ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.
ಬೌಲಿಂಗ್‌ನ ಅಗಾಧ ಪ್ರತಿಭೆಗಳಾದ ಗ್ಲೆನ್ ಮೆಗ್ರಾತ್, ವಾಸೀಂ ಅಕ್ರಂ, ಬ್ರೆಟ್ ಲೀ ಅವರಂಥ ಬೌಲರ್‌ಗಳನ್ನು ಎದುರಿಸಿದ್ದರೂ, ಹ್ಯಾನ್ಸಿ ಕೋನಿಯೇ ಅವರಿಂದ ಸಾಕಷ್ಟು ಬಾರಿ ತಬ್ಬಿಬ್ಬುಗೊಳ್ಳುತ್ತಿದ್ದೆ ಎಂದು ಸಚಿನ್ ನೆನೆದಿದ್ದಾರೆ.
ಶ್ರೀಲಂಕಾದ ಸ್ಪಿನ್ ಮಾಂತ್ರಿಕ ಸಚಿನ್'ರನ್ನು ಏಳು ಬಾರಿ ಔಟ್ ಮಾಡಿದ್ದರೆ, ಆಸೀಸ್ ವೇಗಿಗಳಾದ ಮೆಗ್ರಾತ್ ಹಾಗೂ ಜೇಸನ್ ಗಿಲಸ್ಪಿ ಆರು ಬಾರಿ ಸಚಿನ್'ಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಮೂವರನ್ನು ಬಿಟ್ಟರೆ ಅತಿಹೆಚ್ಚು ಬಾರಿ ಮಾಸ್ಟರ್ ಬ್ಲಾಸ್ಟರ್ ಅವರನ್ನು(5 ಬಾರಿ) ಔಟ್ ಮಾಡಿದ ಶ್ರೇಯ ಕ್ರೋನಿಯೆ ಅವರಿಗೆ ಸಲ್ಲುತ್ತದೆ.
ಇದೇ ವೇಳೆ, ಟೆನಿಸಿಗ ರೋಜರ್ ಫೆಡರರ್ ತಮ್ಮ ಅಚ್ಚುಮೆಚ್ಚಿನ ಕ್ರಿಕೇಟೇತರ ಕ್ರೀಡಾಳು ಎಂದಿರುವ ಅವರು, ಪಾಕಿಸ್ತಾನದ ಶೋಯೆಬ್ ಅಖ್ತರ್ ತಾನು ಕಂಡ ಅತಿ ವೇಗದ ಬೌಲರ್ ಎಂದಿದ್ದಾರೆ.
ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಆಟವನ್ನು ನಾನು ಯಾವಾಗಲೂ ಎಂಜಾಯ್ ಮಾಡುತ್ತಿದ್ದೆ ಎಂದು ಮುಂಬೈಕರ್ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.