
ನವದೆಹಲಿ(ಡಿ.04): ಭಾರತೀಯ ಟೆನಿಸ್ ಸಂಸ್ಥೆಯ (ಎಐಟಿಎ) ಅವಕೃಪೆಗೊಳಗಾಗಿ ಪದಚ್ಯುತಿ ಭೀತಿಯಲ್ಲಿರುವ ಭಾರತದ ಡೇವಿಸ್ ಕಪ್ ತಂಡದ ‘ಆಡದ ನಾಯಕ’ ಆನಂದ್ ಅಮೃತ್‌ರಾಜ್ ಅವರಿಗೆ ತಂಡದ ಆಟಗಾರರು ಬೆಂಬಲಕ್ಕೆ ನಿಂತಿದ್ದಾರೆ.
ಈ ಬಗ್ಗೆ ಎಐಟಿಎ ವ್ಯವಸ್ಥಾಪಕ ಮಂಡಳಿಗೆ ಪತ್ರ ಬರೆದಿರುವ ಆಟಗಾರರು, ಆನಂದ್ ಅಥವಾ ಕೋಚ್ ಜೀಶಾನ್ ಅಲಿಯವರ ಒಪ್ಪಂದವನ್ನು ರದ್ದುಗೊಳಿಸುವುದನ್ನು ತಾವು ವಿರೋಧಿಸುತ್ತೇವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಯುವ ಆಟಗಾರರಾದ ಯೂಕಿ ಬಾಬ್ರಿ, ಸಾಕೇತ್ ಮೈನೇನಿ, ರಾಮ್'ಕುಮಾರ್ ರಮಾನಾಥನ್ ಮತ್ತು ಸೋಮ್'ದೇವ್ ದೇವ್'ವರ್ಮನ್ ಅಮೃತ್'ರಾಜ್ ಪರ ಧ್ವನಿ ಎತ್ತಿದ್ದಾರೆ.
ತಂಡದ ಡ್ರೆಸ್ಸಿಂಗ್ ಕೋಣೆಯನ್ನು ಅಶಿಸ್ತಿನ ತಾಣವನ್ನಾಗಿಸಿದ್ದಾರೆಂದು ಆರೋಪಿಸಿ ಆನಂದ್ ಅವರ ಒಪ್ಪಂದ ಮುಂದುವರಿಸದಿರಲು ಎಐಟಿಎ ಚಿಂತನೆ ನಡೆಸಿದ್ದಾಗಿ ಶನಿವಾರ ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.
ಅಮೃತ್'ರಾಜ್ 2013ರಿಂದ ಡೇವಿಸ್ ಕಪ್ ತಂಡದ ‘ಆಡದ ನಾಯಕ’ರಾಗಿ ನೇಮಕಗೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.