ಮತ್ತೆ ಬಿಸಿಸಿಐ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ಶ್ರೀಶಾಂತ್

By Suvarna Web DeskFirst Published Aug 19, 2017, 9:01 AM IST
Highlights

‘ನ್ಯಾಯಾಲಯದ ಮಧ್ಯಸ್ಥಿಕೆ ಇಲ್ಲದೆ ಬಿಸಿಸಿಐ ನಿರಾಕ್ಷೇಪಣ ಪತ್ರ ನೀಡುವುದು ಅನುಮಾನ’ ಎಂದು ಶ್ರೀಶಾಂತ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೊಚ್ಚಿ(ಆ.19): ಸ್ಕಾಟ್ಲೆಂಡ್‌'ನ ಪ್ರೀಮಿಯರ್ ಲೀಗ್‌'ನ ಗ್ಲೆನ್ ರೋಥ್ಸ್ ಕ್ರಿಕೆಟ್ ಕ್ಲಬ್ ಪರ ಆಡುವುದಕ್ಕೆ ನಿರಾಕ್ಷೇಪಣ ಪತ್ರ ನೀಡಲು ಬಿಸಿಸಿಐಗೆ ಆದೇಶಿಸುವಂತೆ ಕೋರಿ, ಶ್ರೀಶಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದಾರೆ.

‘ನ್ಯಾಯಾಲಯದ ಮಧ್ಯಸ್ಥಿಕೆ ಇಲ್ಲದೆ ಬಿಸಿಸಿಐ ನಿರಾಕ್ಷೇಪಣ ಪತ್ರ ನೀಡುವುದು ಅನುಮಾನ’ ಎಂದು ಶ್ರೀಶಾಂತ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಸೆಪ್ಟೆಂಬರ್ 9ರ ವೇಳೆಗೆ ಲೀಗ್ ಅಂತ್ಯಗೊಳ್ಳಲಿದ್ದು, ಶೀಘ್ರ ಕ್ರಮಕ್ಕೆ ಕೇರಳ ಕ್ರಿಕೆಟಿಗ ಮನವಿ ಮಾಡಿದ್ದಾರೆ.

2013ರ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಶಾಂತ್ ವಿರುದ್ಧ ಬಿಸಿಸಿಐ ಹೇರಿದ್ದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ಆ.7ರಂದು ತೆರವುಗೊಳಿಸಿತ್ತು.

 

click me!