T20 ವಿಶ್ವಕಪ್‌ಗೂ ಮುನ್ನ ನಾಯಕನನ್ನೇ ಬದಲಿಸಲು ಸೂಚಿಸಿದ ಯುವಿ!

By Web Desk  |  First Published Sep 27, 2019, 6:51 PM IST

ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾಣೆ ಮಾಡಿದರೆ ಟ್ರೋಫಿ ಗೆಲುವು ಸುಲಭವಾಗಲಿದೆ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಟೀಂ ಇಂಡಿಯಾದ ನಾಯಕತ್ವ ಬದಲಿಸಿ ಎಂದು ಸಲಹೆ ನೀಡಿದ್ದಾರೆ. ಕೊಹ್ಲಿ ಬದಲು ಮತ್ತೊರ್ವ ಪ್ರತಿಭಾನ್ವಿತ ಹಾಗೂ ಯಶಸ್ವಿ ಆಟಗಾರನಿಗೆ ನಾಯಕತ್ವ ನೀಡಲು ಸೂಚಿಸಿದ್ದಾರೆ.


ನವದೆಹಲಿ(ಸೆ.27): ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದೆ. 2020ರಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿ ಭಾರತದ ಪಾಲಿಗೆ ಮಹತ್ವದ್ದಾಗಿದೆ. ಕಾರಣ, 2007ರ ಬಳಿಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿ ಗೆದ್ದಿಲ್ಲ. ಇಷ್ಟೇ ಅಲ್ಲ, 2013ರ ನಂತ್ರ ಭಾರತ  ಯಾವುದೇ ಐಸಿಸಿ ಟೂರ್ನಿ ಕೂಡ ಗೆದ್ದಿಲ್ಲ. ಹೀಗಾಗಿ ಟ್ರೋಫಿ ಕೊರಗು ನೀಗಿಸಲು ಭಾರತಕ್ಕೆ ಅತ್ಯುತ್ತಮ ವೇದಿಕೆ ಒದಗಿಸಿದೆ. ಈ ಟೂರ್ನಿಗೂ ಮುನ್ನ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡುವುದು ಸೂಕ್ತ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೂಚಿಸಿದ್ದಾರೆ.

ಇದನ್ನೂ ಓದಿ: ಯೋ-ಯೋ ಟೆಸ್ಟ್ ಪಾಸಾದ್ರೂ ಆಯ್ಕೆ ಮಾಡಲಿಲ್ಲ; ವಿದಾಯದ ರಹಸ್ಯ ಬಿಚ್ಚಿಟ್ಟ ಯುವಿ!

Tap to resize

Latest Videos

ಯುವಿ ಸೂಚನೆಯಲ್ಲಿ ನಾಯಕತ್ವ ಬದಲಾವಣೆ ಪ್ರಮುಖ. ಮೂರು ಮಾದರಿಯಲ್ಲಿ ವಿರಾಟ್ ಕೊಹ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡಲು, ಟಿ20 ಮಾದರಿಯಲ್ಲಿ ರೋಹಿತ್ ಶರ್ಮಾಗೆ ನಾಯಕತ್ವ ನೀಡುವುದು ಸೂಕ್ತ ಎಂದು ಯುವಿ ಹೇಳಿದ್ದಾರೆ. ನಿಗದಿತ ಓವರ್ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅತ್ಯುತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ ನಾಯಕ ಕೂಡ ಹೌದು ಎಂದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾ ಮ್ಯಾನೇಜ್ಮೆಂಟ್‌ಗೆ ಯುವರಾಜ್ ಸಿಂಗ್ ವಿಶೇಷ ಮನವಿ!

ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು 3 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಹೀಗಾಗಿ ರೋಹಿತ್‌ಗೆ ನಾಯಕತ್ವ ನೀಡಿದರೆ ಕೊಹ್ಲಿ ಮೇಲಿನ ಒತ್ತಡ ಕಡಿಮೆ ಮಾಡಲು ಸಾಧ್ಯವಿದೆ. ಇಷ್ಟೇ ಅಲ್ಲ ಭಾರತ ತಂಡಕ್ಕೂ ನೆರವಾಗಲಿದೆ ಎಂದು ಯುವಿ ಹೇಳಿದ್ದಾರೆ. ಈ ಹಿಂದೆ 2 ಮಾದರಿ ಮಾತ್ರ ಇತ್ತು. ಹೀಗಾಗಿ ನಾಯಕತ್ವ ಒತ್ತಡ ಇಷ್ಟಿರಲಿಲ್ಲ. ಇದೀಗ 3 ಮಾದರಿಯಿಂದ ನಾಯಕನ ವರ್ಕ್ ಲೋಡ್ ಹೆಚ್ಚಾಗಿದೆ ಎಂದಿದ್ದಾರೆ.
 

click me!