ಭಾನುವಾರ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಗೆ ಮೆಕ್ಸಿಕೋದ ಸ್ಯಾಂಟಿಯಾಗೊ ಗೊನ್ಜಾಲೆಜ್-ಫ್ರಾನ್ಸ್‌ನ ರೋಜರ್ ವ್ಯಾಸೆಲಿನ್ ವಿರುದ್ಧ 2-6, 7-5, 7-10 ಅಂತರದಲ್ಲಿ ಸೋಲು ಎದುರಾಯಿತು.
ಪ್ಯಾರಿಸ್(ನ.06): ಭಾರತದ ಹಿರಿಯ ಟೆನಿಸಿಗ, ಕರ್ನಾಟಕದ ರೋಹನ್ ಬೋಪಣ್ಣ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, ವಿಶ್ವ ಡಬಲ್ಸ್ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರುವ ಅವಕಾಶ ಕಳೆದುಕೊಂಡಿದ್ದಾರೆ. ಭಾನುವಾರ ಫೈನಲ್‌ನಲ್ಲಿ 3ನೇ ಶ್ರೇಯಾಂಕಿತ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಗೆ ಮೆಕ್ಸಿಕೋದ ಸ್ಯಾಂಟಿಯಾಗೊ ಗೊನ್ಜಾಲೆಜ್-ಫ್ರಾನ್ಸ್‌ನ ರೋಜರ್ ವ್ಯಾಸೆಲಿನ್ ವಿರುದ್ಧ 2-6, 7-5, 7-10 ಅಂತರದಲ್ಲಿ ಸೋಲು ಎದುರಾಯಿತು.
ತಮ್ಮನ ಬಳಿಕ ಅಕ್ಕನಿಗೂ ಕ್ಯಾಂಡಿಡೇಟ್ಸ್‌ಗೆ ಪ್ರವೇಶ!
undefined
ನವದೆಹಲಿ: ಭಾರತದ ತಾರಾ ಚೆಸ್ ಪಟು ಆರ್.ವೈಶಾಲಿ 2024ರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರವೇಶ ಪಡೆದಿದ್ದಾರೆ. ಭಾನುವಾರ ವೈಶಾಲಿ 2023ರ ಗ್ರ್ಯಾಂಡ್ ಸ್ವಿಸ್ ಟೂರ್ನಿಯಲ್ಲಿ ಮಾಜಿ ವಿಶ್ವ ಚಾಂಪಿಯನ್, ಚೀನಾದ ಝೊಂಗ್ಯಿ ತಾನ್ ವಿರುದ್ಧ ಜಯಗಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಖಚಿತಪಡಿಸಿಕೊಂಡ ವೈಶಾಲಿ, ಕ್ಯಾಂಡಿಡೇಟ್ಸ್ ಟೂರ್ನಿಗೂ ಅರ್ಹತೆ ಪಡೆದರು.
ICC World Cup 2023: ಇಂದು ಬಾಂಗ್ಲಾ vs ಲಂಕಾ ಮ್ಯಾಚ್ ನಡೆಯುತ್ತಾ?
ಈ ಮೊದಲೇ ಆರ್.ಪ್ರಜ್ಞಾನಂದ ಪುರುಷರ ಡಿಡೇಟ್ಸ್‌ಗೆ ಪ್ರವೇಶಿಸಿದ್ದರು. ಪ್ರಜ್ಞಾನಂದ-ವೈಶಾಲಿ ಕ್ಯಾಂಡಿಡೇಟ್ಸ್ ಟೂರ್ನಿಗೆ ಪ್ರವೇಶ ಪಡೆದ ವಿಶ್ವದ ಮೊದಲ ಅಕ್ಕ-ತಮ್ಮ ಎನ್ನುವ ದಾಖಲೆ ಬರೆದಿದ್ದಾರೆ. ಕ್ಯಾಂಡಿಡೇಟ್ಸ್ ಟೂರ್ನಿ ಏ.2ರಿಂದ ಏ.25ರ ವರೆಗೂ ಕೆನಡಾದ ಟೊರೊಂಟೋದಲ್ಲಿ ನಡೆಯಲಿದ್ದು, ಇದರಲ್ಲಿ ಗೆದ್ದರೆ 2024ರ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅರ್ಹತೆ ಸಿಗಲಿದೆ.
ರಾಷ್ಟ್ರೀಯ ಗೇಮ್ಸ್: ರಾಜ್ಯ ಹಾಕಿ ತಂಡಕ್ಕೆ 5-2 ಜಯ
ಪಣಜಿ: 37ನೇ ರಾಷ್ಟ್ರೀಯ ಗೇಮ್ಸ್‌ನ ಹಾಕಿಯಲ್ಲಿ ಕರ್ನಾಟಕ ಪುರುಷರ ತಂಡ ಗುಂಪು ಹಂತದಲ್ಲಿ 2ನೇ ಗೆಲುವು ಸಾಧಿಸಿದೆ. ಭಾನುವಾರ ರಾಜ್ಯ ತಂಡ ಜಾರ್ಖಂಡ್ ವಿರುದ್ಧ 5-2 ಗೋಲಿನ ಅಂತರದಲ್ಲಿ ಜಯಗಳಿಸಿತು. ಆಡಿರುವ 3 ಪಂದ್ಯಗಳಲ್ಲಿ 2 ಜಯ, 1 ಸೋಲು ಕಂಡಿರುವ ಕರ್ನಾಟಕ ‘ಬಿ’ ಗುಂಪಿನಲ್ಲಿ 2ನೇ ಸ್ಥಾನದಲ್ಲಿದೆ.
ಪಂದ್ಯದ ನಡುವೆ ಶಾರುಖ್ ಖಾನ್ ಚಲೆಯಾ ಹಾಡು ಹಾಡಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಕೊಹ್ಲಿ!
ಇದೇ ವೇಳೆ ರಾಜ್ಯ ಮಹಿಳಾ ತಂಡ ಲೀಗ್ ಹಂತದ 3ನೇ ಸೋಲಿನ ಮುಖಭಂಗಕ್ಕೊಳಗಾಯಿತು. ತಂಡ ಮಹಾರಾಷ್ಟ್ರ ವಿರುದ್ಧ 1-3 ಗೋಲಿನ ಅಂತರದಲ್ಲಿ ಸೋಲನುಭವಿಸಿತು. ಕರ್ನಾಟಕದ ಸದ್ಯ ಕೂಟದಲ್ಲಿ 28 ಚಿನ್ನ, 23 ಬೆಳ್ಳಿ ಹಾಗೂ 25 ಕಂಚಿನೊಂದಿಗೆ 76 ಪದಕ ಗೆದ್ದಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದೆ. 67 ಚಿನ್ನದೊಂದಿಗೆ 193 ಪದಕ ಗೆದ್ದಿರುವ ಮಹಾರಾಷ್ಟ್ರ ಅಗ್ರಸ್ಥಾನ ಕಾಯ್ದುಕೊಂಡಿದೆ.
ನಿಧಾನಗತಿ ಬೌಲಿಂಗ್: ಪಾಕ್‌ಗೆ ಶೇ.10 ದಂಡ
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ಗಾಗಿ ಪಾಕಿಸ್ತಾನ ತಂಡಕ್ಕೆ ಪಂದ್ಯದ ಸಂಭಾವನೆಯ ಶೇ.10ರಷ್ಟು ದಂಡ ವಿಧಿಸಲಾಗಿದೆ. ಮಳೆ ಪೀಡಿತ ಪಂದ್ಯದಲ್ಲಿ ನಿಗದಿತ ಸಮಯ ಮುಕ್ತಾಯಕ್ಕೆ ಪಾಕಿಸ್ತಾನ 2 ಓವರ್ ಕಡಿಮೆ ಎಸೆದಿತ್ತು. ಹೀಗಾಗಿ ಆಟಗಾರರಿಗೆ ದಂಡ ವಿಧಿಸಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ.