Laver Cup 2022 ಟೆನಿಸ್ ತಾರೆಯರ ಜತೆ ಡಿನ್ನರ್ ಪಾರ್ಟಿ ಮಾಡಿದ ರೋಜರ್ ಫೆಡರರ್..!

Published : Sep 23, 2022, 03:19 PM IST
Laver Cup 2022 ಟೆನಿಸ್ ತಾರೆಯರ ಜತೆ ಡಿನ್ನರ್ ಪಾರ್ಟಿ ಮಾಡಿದ ರೋಜರ್ ಫೆಡರರ್..!

ಸಾರಾಂಶ

ವಿದಾಯದ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಂಡ ರೋಜರ್ ಫೆಡರರ್ ಲೆವರ್ ಕಪ್ ಟೂರ್ನಿಗೂ ಮುನ್ನ ಫೆಡರರ್ ಡಿನ್ನರ್ ಪಾರ್ಟಿ ರಾಫಾ, ನಡಾಲ್, ಮರ್ರೆ ಜತೆ ಫೆಡರರ್ ಡಿನ್ನರ್

ಲಂಡನ್‌(ಸೆ.23): ಇಡೀ ಟೆನಿಸ್ ಜಗತ್ತು ಲೆವರ್ ಕಪ್‌ 2022 ಟೂರ್ನಿಯಲ್ಲಿ ರೋಜರ್ ಫೆಡರರ್ ಅವರ ಕೊನೆಯ ಆಟವನ್ನು ಕಣ್ತುಂಬಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ತಮ್ಮ ವಿದಾಯದ ಟೆನಿಸ್ ಟೂರ್ನಿಗೂ ಮುನ್ನ ಸ್ವಿಸ್ ಟೆನಿಸ್ ಮಾಂತ್ರಿಕ ತಮ್ಮ ನಿವೃತ್ತಿಯ ಕೊನೆಯ ಟೂರ್ನಿಗೂ ಮುನ್ನ ತಮ್ಮ ಸಹ ಆಟಗಾರರಾದ ರಾಫೆಲ್ ನಡಾಲ್, ನೋವಾಕ್ ಜೋಕೋವಿಚ್ ಹಾಗೂ ಆಂಡಿ ಮರ್ರೆ ಜತೆಯಾಗಿ ಒಂದು ಫೋಟೋಗೆ ಪೋಸ್‌ ನೀಡಿದ ಫೋಟೋ ಇದೀಗ ಸಾಕಷ್ಟು ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ರೋಜರ್ ಫೆಡರರ್ ತಾವು, ಲೆವರ್ ಕಪ್ ಟನಿಸ್ ಟೂರ್ನಿ ಬಳಿಕ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಪಡೆಯುವುದಾಗಿ ಕೆಲ ದಿನಗಳ ಹಿಂದಷ್ಟೇ ಘೋಷಿಸಿದ್ದರು. ಇದೀಗ ಲೆವರ್ ಕಪ್ ಟೂರ್ನಿ ಆರಂಭಕ್ಕೂ ಮುನ್ನ ರೋಜರ್ ಫೆಡರರ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಪರೂಪದ ಫೋಟೋವನ್ನು ಹಂಚಿಕೊಂಡಿದ್ದು, ಕೆಲ ಸ್ನೇಹಿತರೊಂದಿಗೆ ಡಿನ್ನರ್‌ನತ್ತ ತೆರಳುವ ಮುನ್ನ ಎಂದು ರಾಫೆಲ್ ನಡಾಲ್, ಆಂಡಿ ಮರ್ರೆ ಹಾಗೂ ನೋವಾಕ್ ಜೋಕೋವಿಚ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಫೆಡರರ್‌ ಈ ಫೋಟೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, 40 ಸಾವಿರಕ್ಕೂ ಅಧಿಕ ರೀಟ್ವೀಟ್‌ ಹಾಗೂ 5 ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಈ ಫೋಟೋಗೆ ಸಿಕ್ಕಿವೆ.

ರೋಜರ್ ಫೆಡರರ್ ತಮ್ಮ ಟೆನಿಸ್ ವೃತ್ತಿಜೀವನದ ಕೊನೆಯ ಎಟಿಪಿ ಟೂರ್ ಪಂದ್ಯವನ್ನು ದೀರ್ಘಕಾಲದ ಎದುರಾಳಿ ಹಾಗೂ ಸ್ನೇಹಿತ ರಾಫೆಲ್ ನಡಾಲ್ ಅವರ ಜತೆಗೂಡಿ ಡಬಲ್ಸ್ ಪಂದ್ಯವನ್ನು ಆಡಲಿದ್ದಾರೆ. ಈ ಮೊದಲು 2017ರಲ್ಲಿಯೂ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಲೆವರ್ ಕಪ್ ಟೂರ್ನಿಯಲ್ಲಿ ಒಟ್ಟಾಗಿ ಕಣಕ್ಕಿಳಿದಿದ್ದರು. ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಜೋಡಿ ಮೊದಲ ಸುತ್ತಿನಲ್ಲಿ ಜಾಕ್ ಸಾಕ್ ಹಾಗೂ ಫ್ರಾನ್ಸಸ್‌ ಟೈಫೋಯಿ ಎದುರು ಸೆಣಸಾಡಲಿದೆ,

ರಾಫೆಲ್‌ ನಡಾಲ್(22), ನೋವಾಕ್ ಜೋಕೋವಿಚ್(21), ರೋಜರ್ ಫೆಡರರ್(20) ಹಾಗೂ ಆಂಡಿ ಮರ್ರೆ(3) ಹೀಗೆ ನಾಲ್ವರು ಆಟಗಾರರ ಒಟ್ಟು 66 ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿದ್ದಾರೆ. 41 ವರ್ಷದ ಫೆಡರರ್ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, 2021ರ ವಿಂಬಲ್ಡನ್ ಕ್ವಾರ್ಟರ್‌ ಫೈನಲ್‌ ಬಳಿಕ ಯಾವುದೇ ಪಂದ್ಯವನ್ನು ಆಡಿಲ್ಲ. 

ಟೆನಿಸ್ ದಿಗ್ಗಜ Roger Federer ಹೆಸರಿನಲ್ಲಿರುವ 5 ಇಂಟ್ರೆಸ್ಟಿಂಗ್ ದಾಖಲೆಗಳಿವು..!

ಸ್ವಿಸ್ ಟೆನಿಸ್ ದಂತಕಥೆ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಟೆನಿಸ್ ಅಂಕಣದಲ್ಲಿ ಬದ್ದ ಎದುರಾಳಿಗಳೆಂದೇ ಬಿಂಬಿಸಲ್ಪಟ್ಟಿದ್ದಾರೆ. ಎರಡು ದಶಕಗಳ ಕಾಲ ಈ ಇಬ್ಬರು ಟೆನಿಸ್ ದಿಗ್ಗಜರು ಟೆನಿಸ್ ಜಗತ್ತನ್ನು ಆಳಿದ್ದಾರೆ. ಈ ಇಬ್ಬರು ಆಟಗಾರರೇ ಕಳೆದೆರಡು ದಶಕಗಳಲ್ಲಿ 42 ಟೆನಿಸ್ ಗ್ರ್ಯಾನ್‌ ಸ್ಲಾಂ ಜಯಿಸಿದ್ದಾರೆ

ಇನ್ನು ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಪುರುಷರ ಸಿಂಗಲ್ಸ್‌ನಲ್ಲಿ 9 ಗ್ರ್ಯಾನ್‌ ಸ್ಲಾಂ ಫೈನಲ್ ಸೇರಿದಂತೆ ಒಟ್ಟು 40 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ನಡಾಲ್ 24 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರೆ, ಫೆಡರರ್ 16 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

2026ರ FIFA ವಿಶ್ವಕಪ್ ವೇಳಾಪಟ್ಟಿ ಪ್ರಕಟ! ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ