ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

Published : Sep 02, 2019, 03:20 PM IST
ಹೊಸ ಮೈಲಿಗಲ್ಲು ನಿರ್ಮಿಸಿದ ಪಂತ್; ಧೋನಿ ದಾಖಲೆ ಉಡೀಸ್!

ಸಾರಾಂಶ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಗೆಲುವಿನತ್ತ ದಾಪುಗಾಲಿಟ್ಟಿರುವ ಜೊತೆಗೆ ಹಲವು ದಾಖಲೆ  ನಿರ್ಮಿಸಿದೆ. ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್, ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆ ಮುರಿದಿದ್ದಾರೆ. 

ಕಿಂಗ್ಸ್‌ಸ್ಟನ್(ಸೆ.02): ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ. ರಿಷಬ್ ಪಂತ್, ವಿಂಡೀಸ್‌ನ ಕ್ರೈಗ್ ಬ್ರಾಥ್ವೈಟ್ ಕ್ಯಾಚ್ ಹಿಡಿಯೋ ಮೂಲಕ 50 ಬ್ಯಾಟ್ಸ್‌ಮನ್ ಬಲಿ ಪಡೆದ ಸಾಧನೆ ಮಾಡಿದರು. ಈ ಮೂಲಕ ಮಾಜಿ ಕ್ರಿಕೆಟಿಗ, ಎಂ.ಎಸ್.ಧೋನಿ ದಾಖಲೆಯನ್ನು ಮುರಿದರು.

ಇದನ್ನೂ ಓದಿ: ಕಿಂಗ್ಸ್‌ಟನ್ ಟೆಸ್ಟ್: ಭಾರತದ ಬಿಗಿ ಹಿಡಿತದಲ್ಲಿ ಕೆರಿಬಿಯನ್ನರು

ರಿಷಬ್ ಪಂತ್ ಅತೀ ವೇಗವಾಗಿ  11 ಟೆಸ್ಟ್ ಪಂದ್ಯಗಳಲ್ಲಿ 50 ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದ ಭಾರತದ ಕೀಪರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು ಎಂ.ಎಸ್.ಧೋನಿ 15 ಟೆಸ್ಟ್ ಪಂದ್ಯದಳಲ್ಲಿ ಈ ಸಾಧನೆ ಮಾಡಿದ್ದರು. ಭಾರತದ ಪರ ಕಡಿಮೆ ಪಂದ್ಯಗಳಲ್ಲಿ 50 ವಿಕೆಟ್ ಕಬಳಿಸಿದ ವಿಕೆಟ್ ಕೀಪರ್ ಅನ್ನೋ ದಾಖಲೆಗೆ ರಿಷಬ್ ಪಂತ್ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಭಜ್ಜಿ to ಬುಮ್ರಾ; 3 ಭಾರತೀಯರ ಹ್ಯಾಟ್ರಿಕ್ ವಿಕೆಟ್ ವಿಡಿಯೋ!

ವೆಸ್ಟ್ ಇಂಡೀಸ್ ವಿರುದ್ದದ 2ನೇ ಟೆಸ್ಟ್ ಪಂದ್ಯದಲ್ಲೂ ಭಾರತ ಹಿಗಿ ಹಿಡಿತ ಸಾಧಿಸಿದೆ. ವೆಸ್ಟ್ ಇಂಡೀಸ್ ಗೆಲುವಿಗೆ 468 ರನ್ ಟಾರ್ಗೆಟ್ ನೀಡಿದೆ. ಬೃಹತ್ ಗುರಿ ಪಡೆದಿರುವ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 45 ರನ್ ಸಿಡಿಸಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ, ಇದೀಗ 2ನೇ ಪಂದ್ಯಲ್ಲೂ ಗೆದ್ದು ಸರಣಿ ವೈಟ್ ವಾಶ್ ಮಾಡಲು ಮುಂದಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೆಸರು ಸರ್ವಜ್ಞ: ಹಿರಿಯ ಆಟಗಾರನ ಸೋಲಿಸಿ ಜಾಗತಿಕ ಚೆಸ್ ಶ್ರೇಯಾಂಕ ಪ್ರವೇಶಿಸಿದ 3 ವರ್ಷದ ಪೋರ
ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana