ISSF ಶೂಟಿಂಗ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಶೂಟರ್‌ಗಳು ಚಿನ್ನದ ಬೇಟೆ ಮುಂದುವರೆಸಿದ್ದಾರೆ. ಇದೀಗ ಯಶಸ್ವಿನಿ ಸಿಂಗ್ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಜಯಿಸುವುದರೊಂದಿಗೆ 2020 ಟೊಕಿಯೊ ಒಲಿಂಪಿಕ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ರಿಯೋ (ಸೆ.02): ಭಾರತದ ಮಹಿಳಾ ಶೂಟರ್ ಯಶಸ್ವಿನಿ ಸಿಂಗ್ ದೇಸ್ವಾಲ್, ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಗುರಿ ಇಟ್ಟರು.
Yashaswini wins gold, secures !🇮🇳
A stunning display by 22 yr old as she wins a gold🥇 in women’s 10m Air Pistol at the ISSF World Cup in Rio.
👉🏻With this, she becomes the 9th Indian shooter to secure a quota.
Many congratulations!👏🏻🎊 pic.twitter.com/QeflGJvxWH
ಐಎಸ್‌ಎಸ್‌ಎಫ್ ಶೂಟಿಂಗ್: ಭಾರತಕ್ಕೆ ಮತ್ತೆರಡು ಚಿನ್ನ
22 ವರ್ಷ ವಯಸ್ಸಿನ ಮಾಜಿ ಜೂ. ವಿಶ್ವ ಚಾಂಪಿಯನ್ ಯಶಸ್ವಿನಿ, 236.7 ಅಂಕಗಳಿಸಿ ಚಿನ್ನ ಗೆದ್ದರು. ಇದರೊಂದಿಗೆ 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದರು.
ಶೂಟಿಂಗ್ ವಿಶ್ವಕಪ್: ಅಭಿಷೇಕ್ ವರ್ಮಾಗೆ ಚಿನ್ನ
ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ 9ನೇ ಶೂಟರ್ ಯಶಸ್ವಿನಿ ಆಗಿದ್ದಾರೆ. ಫೈನಲ್ ಸ್ಪರ್ಧೆಯಲ್ಲಿ ಮಾಜಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಉಕ್ರೇನ್‌ನ ಒಲೆನಾ ಕೊಸ್ತೆವಿಚ್ (234.8) ಅಂಕಗಳಿಸಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು.