
ಹೈದರಾಬಾದ್(ಏ.05): ಬಹು ನಿರೀಕ್ಷಿತ 10ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಚಾಲನೆ ದೊರೆತಿದ್ದು ಟಾಸ್ ಗೆದ್ದ ಆರ್'ಸಿಬಿ ಕ್ಷೇತ್ರರಕ್ಷಣೆ ಆಯ್ದುಕೊಂಡಿತು.
ಕಳೆದ ಬಾರಿಯ ಚಾಂಪಿಯನ್ ಸನ್'ರೈಸರ್ಸ್ ಹೈದರಾಬಾದ್ ಮತ್ತೊಮ್ಮೆ ಪ್ರಶಸ್ತಿಯ ಮೇಲೆ ಕಣ್ಣಿಟ್ಟು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದ್ದರೆ, ಚೊಚ್ಚಲ ಪ್ರಶಸ್ತಿಯ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಆರಂಭದ ನಿರೀಕ್ಷೆಯಲ್ಲಿದೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಆರ್'ಸಿಬಿ ತಂಡವನ್ನು ಶೇನ್ ವ್ಯಾಟ್ಸನ್ ಮುನ್ನೆಡೆಸುತ್ತಿದ್ದರೆ, ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಸಾರಥ್ಯದಲ್ಲಿ ಆಡಲಿಳಿಯಲಿದೆ. ಆರ್'ಸಿಬಿ ಪರ ತೈಮಲ್ ಮಿಲ್ಸ್ ಹಾಗೂ ಅಂಕಿತ್ ಚೌಧರಿ ಪಾದಾರ್ಪಣೆ ಮಾಡಿದರೆ, ಹೈದರಾಬಾದ್ ಪರ ರಶೀದ್ ಖಾನ್ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾ
ಸಾಕಷ್ಟು ಕುತೂಹಲ ಕೆರಳಿಸಿರುವ ಚೊಚ್ಚಲ ಪಂದ್ಯದ ಉಭಯ ಆಟಗಾರರ ತಂಡ ಹೀಗಿದೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು:
ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ಯಜುವೇಂದ್ರ ಚಾಹಲ್, ಮನ್ದೀಪ್ ಸಿಂಗ್, ತೈಮಲ್ ಮಿಲ್ಸ್, ಎಸ್ ಅರವಿಂದ್, ಸ್ಟುವರ್ಟ್ ಬಿನ್ನಿ, ಅಂಕಿತ್ ಚೌಧರಿ, ಕೇದಾರ್ ಜಾಧವ್, ಸಚಿನ್ ಬೇಬಿ, ತ್ರಿವೀಸ್ ಹೆಡ್
ಸನ್ ರೈಸರ್ಸ್ ಹೈದರಾಬಾದ್:
ಡೇವಿಡ್ ವಾರ್ನರ್, ನಮನ್ ಓಜಾ, ಶಿಖರ್ ಧವನ್, ಮೋಯಿಸ್ ಹೆನ್ರಿಕೇಸ್, ಯುವರಾಜ್ ಸಿಂಗ್, ಬೆನ್ ಕಟ್ಟಿಂಗ್ಸ್, ಬಿಪುಲ್ ಶರ್ಮಾ, ಭುವನೇಶ್ವರ್ ಕುಮಾರ್, ಆಶೀಸ್ ನೆಹ್ರಾ, ರಶೀದ್ ಖಾನ್, ದೀಪಕ್ ಹೂಡಾ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.