
ಬೆಂಗಳೂರು(ಏ. 04): ಐಪಿಎಲ್ ಸೀಸನ್ ಇನ್ನೂ ಆರಂಭವಾಗಿಯೇ ಇಲ್ಲ. ಆಗಲೇ ಗಾಯಾಳುಗಳ ಪಟ್ಟಿ ಬೆಳೆಯುತ್ತಲೇ ಇದೆ. ಆರ್'ಸಿಬಿಯ ಚೋಟುದ್ದದ ಸ್ಫೋಟಕ ಬ್ಯಾಟ್ಸ್'ಮ್ಯಾನ್ ಸರ್ಫರಾಜ್ ಖಾನ್ ಕೂಡ ಗಾಯಾಳು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬೈನ ಸರ್ಫರಾಜ್ ಖಾನ್ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದು, ಇಡೀ ಐಪಿಎಲ್ ಟೂರ್ನಿಯಿಂದ ಔಟ್ ಆಗಲಿದ್ದಾರೆ.
ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಮತ್ತು ಎಬಿ ಡೀವಿಲಿಯರ್ಸ್ ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿರುವಾಗ ಸರ್ಫರಾಜ್ ಖಾನ್ ಸುದ್ದಿಯು ಆರ್'ಸಿಬಿ ತಂಡಕ್ಕೆ ಮತ್ತು ಫ್ಯಾನ್ಸ್'ಗೆ ಶಾಕ್ ಕೊಟ್ಟಿದೆ. ಪಂದ್ಯಕ್ಕೆ ಅಭ್ಯಾಸ ನಡೆಸುವ ವೇಳೆ ಸರ್ಫರಾಜ್'ರ ಕಾಲಿಗೆ ಗಂಭೀರ ಗಾಯವಾಗಿದೆ. ಅವರು ಟೂರ್ನಿಯ ಯಾವ ಪಂದ್ಯವನ್ನೂ ಆಡುವುದು ಅನುಮಾನಾಸ್ಪದ ಎಂದು ಆರ್'ಸಿಬಿ ತಂಡದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಾಯಕ ವಿರಾಟ್ ಕೊಹ್ಲಿ ಇತ್ತೀಚಿನ ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ ವೇಳೆ ಭುಜಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಐಪಿಎಲ್'ನ ಕೆಲ ಆರಂಭಿಕ ಪಂದ್ಯಗಳಲ್ಲಿ ಕೊಹ್ಲಿ ಆಡುತ್ತಿಲ್ಲ. ಎಬಿ ಡೀವಿಲಿಯರ್ಸ್ ಕೂಡ ಒಂದೆರಡು ಪಂದ್ಯಗಳಲ್ಲಿ ಆಡುತ್ತಿಲ್ಲ. ಅವರಿಬ್ಬರು ಚೇತರಿಸಿಕೊಳ್ಳುವವರೆಗೂ ಶೇನ್ ವ್ಯಾಟ್ಸನ್ ಅವರೇ ಆರ್'ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.