BREAKING NEWS:ಗೆಲುವಿನ ನಾಗಾಲೋಟದ ಬೆನ್ನಲ್ಲೇ RCBಗೆ ಬಿಗ್ ಶಾಕ್!

By Web Desk  |  First Published Apr 25, 2019, 3:48 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ಲೇ ಆಫ್ ಕನಸು ಚಿಗುರೊಡೆಯುತ್ತಿದ್ದಂತೆ ಸಂಕಷ್ಟ ಎದುರಾಗಿದೆ. ಸತತ 3 ಗೆಲುವು ಸಾಧಿಸಿರುವ RCB ಇನ್ನುಳಿದ ಪಂದ್ಯದ ಗೆಲುವಿಗೆ ರಣತಂತ್ರ ರೂಪಿಸುತ್ತಿರುವಾಗಲೇ RCB ಆಘಾತವಾಗಿದೆ.  ತಂಡಕ್ಕೆ ಎದುರಾಗಿರೋ ಸಂಕಷ್ಟ ಏನು? ಇಲ್ಲಿದೆ.


ಬೆಂಗಳೂರು(ಏ.25): ಐಪಿಎಲ್ ಟೂರ್ನಿಯ ಅಂತಿಮ ಹಂತದಲ್ಲಿ ಗೆಲುವಿನ ಲಯಕ್ಕೆ ಮರಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ 3 ಗೆಲುವು ಸಾಧಿಸಿ ಪ್ಲೇ ಆಫ್ ಆಸೆಯನ್ನು ಜೀವಂತವಾಗಿರಿಸಿದೆ. ತವರಿನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಗೆಲುವು ಸಾಧಿಸಿದ ಬೆನ್ನಲ್ಲೇ RCB ತಂಡಕ್ಕೆ ಅತೀ ದೊಡ್ಡ ಆಘಾತ ಎದುರಾಗಿದೆ. ಹೌದು,  RCB ಲಕ್ ಬದಲಾಯಿಸಿದ ವೇಗಿ ಡೇಲ್ ಸ್ಟೇನ್ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಅಂಪೈರ್ ಮರೆವು- ಬಾಲ್‌ಗಾಗಿ ಮೈದಾನ ಹುಡುಕಾಡಿದ RCB-KXIP!

Tap to resize

Latest Videos

undefined

ಐಪಿಎಲ್ 12ನೇ ಆವೃತ್ತಿಯಲ್ಲಿ ಬೌಲಿಂಗ್ ಸಮಸ್ಯೆ ಎದುರಿಸಿದ RCB ಸತತ 6 ಪಂದ್ಯ ಸೋತು ನಿರಾಸೆ ಅನುಭವಿಸಿತು. ಆದರೆ ಸೌತ್ಆಫಿಕಾ ವೇಗಿ ಡೇಲ್ ಸ್ಟೇನ್ ತಂಡಕ್ಕೆ ಆಗಮಿಸಿದ ಬಳಿಕ RCB ತಂಡದ ಅದೃಷ್ಠ ಬದಲಾಗಿತ್ತು. ಅದ್ಬುತ ಬೌಲಿಂಗ್  ದಾಳಿ ಸಂಘಚಿಸೋ ಮೂಲಕ ಸ್ಟೇನ್ RCB ಗೆಲುವಿಗೆ ಪ್ರಮುಕ ಕಾರಣರಾಗಿದ್ದರು. ಇದೀಗ ಭುಜದ ನೋವಿಗೆ ತುತ್ತಾಗಿರುವ ಡೇಲ್ ಸ್ಟೇನ್ 12ನೇ ಆವೃತ್ತಿಯಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: RCB ಹ್ಯಾಟ್ರಿಕ್ ಗೆಲುವನ್ನು ಸಂಭ್ರಮಿಸಿದ ಸಂಚುರಿ ಸ್ಟಾರ್!

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ಟೇನ್ ಗಾಯದ ಸಮಸ್ಯೆಯಿಂದ ಹೊರುಗುಳಿದಿದ್ದರು. ಪಂಜಾಬ್ ಪಂದ್ಯಕ್ಕೆ ಮಾತ್ರ ಉಳಿದ ಪಂದ್ಯಗಳಿಗೆ ಸ್ಟೇನ್ ಕಮ್‌ಬ್ಯಾಕ್ ಮಾಡಲಿದ್ದಾರೆ ಅನ್ನೋ ವಿಶ್ವಾಸ ಅಭಿಮಾನಿಗಳಿಗಿತ್ತು. ಆದರೆ ನಿರೀಕ್ಷೆ ಸುಳ್ಳಾಗಿದೆ. ಸ್ಟೇನ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ RCB ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಿದೆ.
 

click me!