ವಾರ್ನರ್, ಹೇನ್ರಿಕ್ಸ್ ಗುಡುಗಿಗೆ ತಣ್ಣಗಾದ ಲಯನ್ಸ್: ಸತತ 2 ಗೆಲುವು ದಾಖಲಿಸಿದ ಸನ್'ರೈಸರ್ಸ್

By Suvarna Web DeskFirst Published Apr 9, 2017, 2:08 PM IST
Highlights

ಗುಜರಾತ್ ಬೌಲರ್'ಗಳ್ಯಾರು ವಾರ್ನರ್ ಹಾಗೂ ಹೇನ್ರಿಕ್ಸ್ ಜೋಡಿಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಪ್ರವೀಣ್ ಕುಮಾರ್ ಮಾತ್ರ 1 ವಿಕೇಟ್ ಪಡೆಯಲು ಸಫಲರಾದರು.

ಹೈದರಾಬಾದ್(ಏ.09): ಸನ್'ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ ಸಿಕ್ಸ್'ರ್, ಬೌಂಡರಿ ಗುಡುಗು ಹಾಗೂ ಮೊಯಿಸೆಸ್ ಹೇನ್ರಿಕ್ಸ್ ಆರ್ಭಟಕ್ಕೆ ಗುಜರಾತ್ ಲಯನ್ಸ್ ಸಂಪೂರ್ಣ ಸ್ತಬ್ಧವಾದರು.

ಹೈದರಾಬಾದ್'ನ ರಾಜೀವ್ ಗಾಂಧಿ ಇಂಟರ್'ನ್ಯಾಷನಲ್ ಸ್ಟೇಡಿಯಂ'ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್'ನ 10 ನೇ ಆವೃತ್ತಿಯ 6 ಪಂದ್ಯದಲ್ಲಿ  ಸನ್ ರೈಸರ್ಸ್ ಹೈದರಾಬಾದ್ ತಂಡದವರು ಗುಜರಾತ್ ಲಯನ್ಸ್ ತಂಡದ ವಿರುದ್ಧ 9 ವಿಕೇಟ್'ಗಳ ಜಯ ದಾಖಲಿಸುವ ಮೂಲಕ ಸತತ 2ನೇ ಗೆಲುವಿಗೆ ಪಾತ್ರರಾದರು.

ಲಯನ್ಸ್ ನೀಡಿದ ಸಾಧಾರಣ ಮೊತ್ತ 135 ರನ್'ಗಳ ಗುರಿಯನ್ನು ಹೈದರಾಬಾದ್ ತಂಡದವರು ಕೇವಲ 15.3  ಓವರ್'ಗಳಲ್ಲಿ ಮುಟ್ಟಿದರು.

ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನ್'ರ್ ಕೇವಲ 45 ಎಸತಗಳಲ್ಲಿ 4 ಭರ್ಜರಿ ಸಿಕ್ಸ್'ರ್ ಹಾಗೂ 6 ಬೌಂಡರಿಗಳೊಂದಿಗೆ 76 ರನ್  ಹಾಗೂ 2ನೇ ಕ್ರಮಾಂಕದ ಆಟಗಾರ ಮೊಯಸಿಸ್ ಹೇನ್ರಿಕ್ಸ್  39 ಎಸತಗಳಲ್ಲಿ 6 ಬೌಂಡರಿಗಳೊಂದಿಗೆ 52 ರನ್ ಬಾರಿಸುವ ಮೂಲಕ 135 ರನ್ ಮೊತ್ತವನ್ನು ಕೇವಲ 1 ವಿಕೇಟ್ ನಷ್ಟಕ್ಕೆ ಜಯ ದಾಖಲಿಸಿದರು. ಆರಂಭಿಕ ಆಟಗಾರ ಶಿಖರ್ ಧವನ್ 9 ರನ್ ಮಾತ್ರ ಗಳಿಸಿದರು.

ಗುಜರಾತ್ ಬೌಲರ್'ಗಳ್ಯಾರು ವಾರ್ನರ್ ಹಾಗೂ ಹೇನ್ರಿಕ್ಸ್ ಜೋಡಿಯನ್ನು ಮುರಿಯಲು ಸಾಧ್ಯವಾಗಲಿಲ್ಲ. ಪ್ರವೀಣ್ ಕುಮಾರ್ ಮಾತ್ರ 1 ವಿಕೇಟ್ ಪಡೆಯಲು ಸಫಲರಾದರು.

ರಶೀದ್ ಖಾನ್ ದಾಳಿಗೆ ಸಾಲಾಗಿ ಪೆವಿಲಿಯನ್'ಗೆ ತೆರಳಿದ ಗುಜರಾತಿಗಳು

ಟಾಸ್ ಗೆದ್ದು ಗುಜರಾತ್ ಲಯನ್ಸ್ ತಂಡವನ್ನು ಬ್ಯಾಟಿಂಗ್' ಮಾಡಲು  ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಆಹ್ವಾನಿಸಿದರು. ರಶೀದ್ ಖಾನ್,ಭುವನೇಶ್ವರ್ ಕುಮಾರ್ ಅವರ ಕರಾರುವಕ್ಕಾದ ಬೌಲಿಂಗ್ ದಾಳಿಗೆ ಗುಜರಾತಿ ಲಯನ್'ಗಳು ಸಾಲು ಸಾಲಾಗಿ ಪೆವಿಲಿಯನ್'ಗೆ ತೆರಳಿದರು.

ಸ್ಫೋಟಕ  ದಾಂಡಿಗರಾದ ಮೆಕಲಮ್, ನಾಯಕ ಸುರೇಶ್ ರೈನಾ ಹಾಗೂ ಅರೋನ್ ಫಿಂಚ್ ಅವರನ್ನು ಬೌಲರ್ ರಶೀದ್ ಖಾನ್ ಎಲ್'ಬಿ ಬಲೆಗೆ ಕೆಡವಿದರು. ಆರಂಭಿಕ ಆಟಗಾರ ಜೇಸನ್ ರಾಯ್, ವಿಕೇಟ್  ಕೀಪರ್ ದಿನೇಶ್ ಕಾರ್ತಿಕ್ ಹಾಗೂ ಡ್ವೆನ್ ಸ್ಮಿತ್ ಮಾತ್ರ  30 ರನ್'ಗಳ ಗಡಿ ದಾಟಿ ತಂಡದ ಮೊತ್ತವನ್ನು 135 ರನ್'ಗೆ ಮುಟ್ಟಿಸಿದರು.

ಸ್ಕೋರ್

ಗುಜರಾತ್ ಲಯನ್ಸ್ : 135/7 (20/20 )

ಸನ್'ರೈಸರ್ಸ್ ಹೈದರಾಬಾದ್: 140/1 (15.3/20 )

ಪಂದ್ಯ ಶ್ರೇಷ್ಠ: ರಶೀದ್ ಖಾನ್

click me!