1983 ವಿಶ್ವಕಪ್ ಬಯೋಪಿಕ್; ರಣವೀರ್ ಲುಕ್‌ಗೆ ಕಪಿಲ್ ಕ್ಲೀನ್ ಬೋಲ್ಡ್!

By Web Desk  |  First Published Jul 6, 2019, 4:46 PM IST

1983ರ ವಿಶ್ವಕಪ್ ಕುರಿತ ಬಯೋಪಿಕ್ ಬಿಡುಗಡೆಗೆ ಸಜ್ಜಾಗುತ್ತಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರ ಈಗಾಗಲೇ ಬಾಲಿವುಡ್ ಹಾಗೂ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಡಬಲ್ ಮಾಡಿದೆ. ಇದೀಗ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ. 


ಮುಂಬೈ(ಜು.06): ವಿರಾಟ್ ಕೊಹ್ಲಿ ನೇತೃತ್ವದ  ಟೀಂ ಇಂಡಿಯಾ ವಿಶ್ವಕಪ್ ಸೆಮಿಫೈನಲ್ ಹೋರಾಟದತ್ತ ಚಿತ್ತ ಹರಿಸಿದೆ. ಈ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ ಭಾರತ 3ನೇ ವಿಶ್ವಕಪ್ ಟ್ರೋಫಿ ಗೆದ್ದ ಸಾಧನೆ ಮಾಡಲಿದೆ. 1983ರಲ್ಲಿ ಕಪಿಲ್ ದೇವ್ ನೇೃತ್ವದ ಟೀಂ ಇಂಡಿಯಾ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ರಚಿಸಿತ್ತು. ಈ ಐತಿಹಾಸಿಕ ಕ್ಷಣ ತೆರೆ ಮೇಲೆ ಬರುತ್ತಿದೆ.  1983ರ ವಿಶ್ವಕಪ್ ಟೂರ್ನಿ ಬಯೋಪಿಕ್ ಬಿಡುಗಡೆಗೆ  ಬಾಲಿವುಡ್ ಸಿದ್ಧತೆ ನಡೆಸುತ್ತಿದೆ. ಇದರ ಬೆನ್ನಲ್ಲೇ ನಾಯಕ ನಟ ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ಇದನ್ನೂ ಓದಿ: ರಾಜಕೀಯ ಬದಿಗಿಟ್ಟು ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಸಿದ್ದರಾಮಯ್ಯ!

Tap to resize

Latest Videos

ಟೀ ಇಂಡಿಯಾ ನಾಯಕ ಕಪಿಲ್ ದೇವ್ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟಿಸುತ್ತಿದ್ದಾರೆ. ರಣವೀರ್ ಸಿಂಗ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಒಂದು ಕ್ಷಣಕ್ಕೆ ಕಪಿಲ್ ದೇವ್ ಹಳೇ ಪೋಟೋ ನೋಡಿದ ರೀತಿಯಲ್ಲೇ ಇದೆ.  ಅಷ್ಟರ ಮಟ್ಟಿಗೆ ರಣವೀರ್ ವರ್ಕೌಟ್ ಮಾಡಿದ್ದಾರೆ. ರಣವೀರ್ ಫಸ್ಟ್ ಲುಕ್‌ಗೆ ಸ್ವತಃ ಕಪಿಲ್ ದೇವ್ ಕೂಡ ಕ್ಲೀನ್ ಬೋಲ್ಡ್ ಆಗಿದ್ದಾರೆ.

 

ಇದನ್ನೂ ಓದಿ: ಜಡೇಜಾ ಮಾತಿನೇಟು: ಸಂಜಯ್ ಮಂಜ್ರೇಕರ್‌ಗೆ ಬೇಕಿತ್ತಾ ಇದು..?

ಸಾಮಾಜಿಕ ಜಾಲತಾಣದಲ್ಲಿ ರಣವೀರ್ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಜುಲೈ 6 ರಂದು ರಣವೀರ್ ಸಿಂಗ್‌ಗೆ ಹುಟ್ಟು ಹಬ್ಬದ ಸಂಭ್ರಮ.  ವಿಶೇಷ ದಿನ ಹರಿಯಾಣ ಹರಿಕೇನ್ ಫಸ್ಟ್ ಲುಕ್ ಅರ್ಪಿಸುತ್ತಿದ್ದೇನೆ ಎಂದು ರಣವೀರ್ ಸಾಮಾಜಿಕ ಜಾಲಣತಾಣದಲ್ಲಿ ಹೇಳಿಕೊಂಡಿದ್ದಾರೆ. ಕಬೀರ್ ಖಾನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದೆ.

click me!