ಹಾಲಿ ಚಾಂಪಿಯನ್ ಸರ್ಬಿಯಾದ ಜೋಕೋವಿಚ್ ಪ್ರಶಸ್ತಿ ಉಳಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಪ್ರೀ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಈ ಪಂದ್ಯದ ವರದಿ ಇಲ್ಲಿದೆ ನೋಡಿ...
ಲಂಡನ್[ಜು.06]: 2019ರ ವಿಂಬಲ್ಡನ್ ಗ್ರ್ಯಾಂಡ್‌ಸ್ಲಾಂನ ಪುರುಷರ ಸಿಂಗಲ್ಸ್ ನಲ್ಲಿ ಹಾಲಿ ಚಾಂಪಿಯನ್ ಸರ್ಬಿಯಾದ ಜೋಕೋವಿಚ್ ಪ್ರಿ ಕ್ವಾರ್ಟ ರ್‌ಗೇರಿದ್ದಾರೆ. 22 ವರ್ಷದ ಪೋಲೆಂಡ್’ನ ಹೋಬಾರ್ಟ್ಸ್ ಹರಿಕೇಜ್, ಹಾಲಿ ಚಾಂಪಿಯನ್ ಎದುರು ದಿಟ್ಟ ಹೋರಾಟ ನಡೆಸಿದರಾದರೂ, ಪಂದ್ಯ ಜಯಿಸಲು ಸಾಧ್ಯವಾಗಲಿಲ್ಲ.
ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಲ್ಲಿ ಮಾಜಿ ವಿಶ್ವ ನಂ.1 ಡೆನ್ಮಾರ್ಕ್‌ನ ಕ್ಯಾರೋಲಿನೆ ವೋಜ್ನಿಯಾಕಿ ಸೋತು ಹೊರಬಿದ್ದರು.
ವಿಂಬಲ್ಡನ್ 2019: 2ನೇ ಸುತ್ತಿಗೆ ಜೋಕೋವಿಚ್
ಭಾರತಕ್ಕೆ ಮಿಶ್ರ ಫಲ: ಪುರುಷರ ಡಬಲ್ಸ್‌ನಲ್ಲಿ ಭಾರತದ ದಿವಿಜ್, ಬ್ರೆಜಿಲ್‌ನ ಡಿಮೊಲಿನರ್ ಜೋಡಿ ಪ್ರಿ ಕ್ವಾರ್ಟರ್‌ಗೇರಿದೆ. ಮಿಶ್ರ ಡಬಲ್ಸ್ ನಲ್ಲಿ ಪೇಸ್, ಸಮಂತಾ ಜೋಡಿ ಮೊದಲ ಸುತ್ತಲ್ಲಿ ಸೋಲುಂಡಿತು.