ರಣಜಿ ಕ್ವಾರ್ಟರ್ ಫೈನಲ್: ವಿನಯ್ ಅರ್ಧಶತಕ- ಮುನ್ನಡೆ ಪಡೆದ ಕರ್ನಾಟಕ

By Web DeskFirst Published Jan 16, 2019, 6:03 PM IST
Highlights

ರಣಜಿ ಕ್ವಾರ್ಟರ್ ಫೈನಲ್ ಪಂದ್ಯದ ದ್ವಿತೀಯ ದಿನ ಕರ್ನಾಟಕ ಮೇಲುಗೈ ಸಾಧಿಸಿದೆ. ಹಿರಿಯ ಕ್ರಿಕೆಟಿಗ ವಿನಯ್ ಕುಮಾರ್ ಅದ್ಬುತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ಹಿಡಿತ ಸಾಧಿಸಿದೆ. ದ್ವಿತೀಯ ದಿನದಾಟದ ಹೈಲೈಟ್ಸ್ ಇಲ್ಲಿದೆ.

ಬೆಂಗಳೂರು(ಜ.16): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಣಜಿ ಕ್ವಾರ್ಟರ್ ಫೈನಲ್ ಪಂದ್ಯ ಎರಡೇ ದಿನಕ್ಕ ರೋಚಕ ಘಟ್ಟ ತಲುಪಿದೆ. ರಾಜಸ್ಥಾನ ತಂಡವನ್ನ 224 ರನ್‌ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಹಿನ್ನಡೆ ಭೀತಿಯಲ್ಲಿತ್ತು. ಆದರೆ ವಿನಯ್ ಕುಮಾರ್ ಆರ್ಭಟದಿಂದ ಕರ್ನಾಟಕ 2ನೇ ದಿನ ಮೇಲುಗೈ ಸಾಧಿಸಿದೆ.

ಆರ್ ಸಮರ್ಥ 32, ಕೆ ಸಿದ್ಧಾರ್ತ್ 52 ಹಾಗೂ ಶ್ರೇಯಸ್ ಗೋಪಾಲ್ ಸಿಡಿಸಿದ 25 ರನ್ ಹೊರತು ಪಡಿಸಿದರೆ ಇನ್ಯಾರು ಕೂಡ ಉತ್ತಮ ಪ್ರದರ್ಶನ ನೀಡಲಿಲ್ಲ. 166 ರನ್‌ಗಳಿಗೆ 9 ವಿಕೆಟ್  ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ತಂಡಕ್ಕೆ ವಿನಯ್ ಕುಮಾರ್ ಆಸರೆಯಾದರು.

ಇದನ್ನೂ ಓದಿ: ಬಡ ಮಕ್ಕಳಿಕೆಗೆ ಉಚಿತ ಕ್ರಿಕೆಟ್ ತರಬೇತಿ - ಜಿ.ಆರ್‌.ವಿ, ಬಿ.ಎಸ್ ಚಂದ್ರಶೇಕರ್ ಮಾರ್ಗದರ್ಶನ!

10ನೇ ವಿಕೆಟ್‌ಗೆ ರೋನಿತ್ ಮೊರೆ ಜೊತೆ ಬ್ಯಾಟಿಂಗ್ ನಡೆಸಿದ ವಿನಯ್, ರಾಜಸ್ಥಾನ ತಂಡದ ಸಂಪೂರ್ಣ ಲೆಕ್ಕಾಚಾರ ಉಲ್ಟಾ ಮಾಡಿದರು.  10ನೇ ವಿಕೆಟ್‌ಗೆ ವಿನಯ್ ಹಾಗೂ ರೋನಿತ್ ಬರೋಬ್ಬರಿ 97 ರನ್ ಜೊತೆಯಾಟ ನೀಡಿದರು ವಿನಯ್ ಕುಮಾರ್ ಅಜೇಯ 83 ರನ್ ಸಿಡಿಸಿದರು. ಈ ಮೂಲಕ ಕರ್ನಾಟಕ 263 ರನ್ ಸಿಡಿಸಿ ಆಲೌಟ್ ಆಯಿತು. ಇಷ್ಟೇ ಅಲ್ಲ ಮೊದಲ ಇನ್ನಿಂಗ್ಸ್‌ನಲ್ಲಿ 39 ರನ್ ಮುನ್ನಡೆ ಪಡೆದುಕೊಂಡಿತು.

ಇದನ್ನೂ ಓದಿ: ಐಸಿಸಿಗೆ ನೂತನ ಸಿಇಒ ಆಯ್ಕೆ- ಭಾರತಕ್ಕೆ ಒಲಿಯಿತು ಪಟ್ಟ!

ದ್ವಿತೀಯ ಇನ್ನಿಂಗ್ಸ್ ಆರಂಭಿಸಿರವು ರಾಜಸ್ಥಾನ ದಿನದಾಟದ ಅಂತ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 11 ರನ್ ಸಿಡಿಸಿದೆ. ಇನ್ನು 28 ರನ್‌ಗಳ ಹಿನ್ನಡೆಯಲ್ಲಿದೆ. ಸದ್ಯ ಮೇಲುಗೈ ಸಾಧಿಸಿರುವ ಕರ್ನಾಟಕ, ತೃತೀಯ ದಿನ ಬಹಬೇಗನೆ ರಾಜಸ್ಥಾನ ತಂಡವನ್ನ ಆಲೌಟ್ ಮಾಡಿ ರನ್ ಚೇಸ್ ಮಾಡೋ ಲೆಕ್ಕಾಚಾರದಲ್ಲಿದೆ.

click me!