ಚೇಸಿಂಗ್‌ನಲ್ಲಿ ಧೋನಿ ಈಗಲೂ ನಂ.1- ಕೊಹ್ಲಿಗೆ ಎಷ್ಟನೇ ಸ್ಥಾನ?

By Web DeskFirst Published Jan 16, 2019, 3:33 PM IST
Highlights

ಇತ್ತೀಚೆಗಿನ ಹಲವು ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಸ್ವಲ್ಪ ಮಂಕಾಗಿದ್ದು ನಿಜ.ಹೀಗಾಗಿಯೇ ಟೀಕೆಗಳು ಕೇಳಿಬಂದಿತ್ತು. ಆದರೆ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಬ್ಬರಿಸೋ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಇಷ್ಟೇ ಅಲ್ಲ ಈಗಲೂ ವಿಶ್ವದ ನಂಬರ್.1 ಚೇಸರ್ ಪಟ್ಟ ಧೋನಿ ಹೆಸರಲ್ಲಿದೆ.

ಆಡಿಲೆಡ್(ಜ.16): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಫಾರ್ಮ್ ಕಳೆದುಕೊಂಡಿದ್ದಾರೆ, ಧೋನಿಗೆ ವಯಸ್ಸಾಯ್ತು ಅನ್ನೋ ಮಾತುಗಳು ಕೇಳಿ ಬಂದಿತ್ತು. ಆದರೆ 2ನೇ ಏಕದಿನದಲ್ಲಿ ಅದ್ಬುತ ಬ್ಯಾಟಿಂಗ್ ಮೂಲಕ ಗೆಲುವು ತಂದುಕೊಡೋ ಮೂಲಕ ಧೋನಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. 

ಇದನ್ನೂ ಓದಿ: ಕೊಹ್ಲಿ-ಧೋನಿ ಬ್ಯಾಟಿಂಗ್ ಕಂಡು ಫಿದಾ ಆದ ಕ್ರಿಕೆಟಿಗರು..!

ಧೋನಿ ಅಬ್ಬರಿಸೋ ಮೂಲಕ ವಿಶ್ವದ ಬೆಸ್ಟ್ ರನ್ ಚೇಸರ್ ಅನ್ನೋದನ್ನ ಮತ್ತೆ ಸಾಬೀತುಪಡಿಸಿದ್ದಾರೆ. ಚೇಸಿಂಗ್‌ನಲ್ಲಿ ವಿರಾಟ್ ಕೊಹ್ಲಿ 24 ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಆದರೆ ಚೇಸಿಂಗ್‌ನಲ್ಲಿ ಗರಿಷ್ಠ ಬ್ಯಾಟಿಂಗ್ ಸರಾಸರಿಯಲ್ಲಿ ಎಂ.ಎಸ್.ಧೋನಿ ಮೊದಲ ಸ್ಥಾನದಲ್ಲೇ ಇದ್ದಾರೆ. ಕೊಹ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ.

ಇದನ್ನೂ ಓದಿ:  87 ವರ್ಷದ ಅಭಿಮಾನಿ ಆಸೆ ಈಡೇರಿಸಿದ ಧೋನಿ 

ಚೇಸಿಂಗ್‌ನಲ್ಲಿ ಧೋನಿ ಬ್ಯಾಟಿಂಗ್ ಸರಾಸರಿ 99.85, ಇನ್ನು ಕೊಹ್ಲಿ ಸರಾಸರಿ 99.04 ಹಾಗೂ 3ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಬೆವನ್ 66.42 ಸರಾಸರಿ ಹೊಂದಿದ್ದಾರೆ. ಹೀಗಾಗಿಯೇ ಧೋನಿ 2019ರ ವಿಶ್ವಕಪ್ ತಂಡದಲ್ಲಿರಬೇಕು ಅನ್ನೋ ಮಾತುಗಳ ಬಲವಾಗಿ ಕೇಳಿಬರುತ್ತಿದೆ.
 

click me!
Last Updated Jan 16, 2019, 3:33 PM IST
click me!