ಇನ್ಮುಂದೆ ರಣಜಿ ತಂಡಗಳಿಗೂ ಯೋ-ಯೋ ಫಿಟ್ನೆಸ್‌ ಟೆಸ್ಟ್‌?

Published : Feb 20, 2019, 08:58 AM IST
ಇನ್ಮುಂದೆ ರಣಜಿ ತಂಡಗಳಿಗೂ ಯೋ-ಯೋ ಫಿಟ್ನೆಸ್‌ ಟೆಸ್ಟ್‌?

ಸಾರಾಂಶ

ಟೀಂ ಇಂಡಿಯಾ ಸೇರಿಕೊಳ್ಳಲು ಯೋ-ಯೋ ಫಿಟ್ನೆಸ್ ಟೆಸ್ಟ್ ಮುಖ್ಯ ಯೋ-ಯೋ ಪರೀಕ್ಷೆ ಪಾಸ್ ಆದರೆ ಮಾತ್ರ ತಂಡದಲ್ಲಿ ಅವಕಾಶ. ಇದೀಗ ಇದೇ ಟೆಸ್ಟ್ ರಣಜಿ ಕ್ರಿಕೆಟಿಗೂ ಅನ್ವಯಿಸಲಿದೆ. ಈ ಕುರಿತ ಹೆಚ್ಚಿನ ವಿವರ.

ನವದೆಹಲಿ(ಫೆ.20): ಭಾರತ ಹಾಗೂ ರಾಜ್ಯ ರಣಜಿ ತಂಡಗಳ ನಡುವೆ ಇರುವ ಫಿಟ್ನೆಸ್‌ ಅಂತರವನ್ನು ಸರಿಪಡಿಸಲು ಬಿಸಿಸಿಐ ಮುಂದಾಗಿದೆ. ಇನ್ಮುಂದೆ ರಾಜ್ಯ ತಂಡಗಳು ಸಹ ಭಾರತ ತಂಡದ ಫಿಟ್ನೆಸ್‌ ನಿಯಮಗಳನ್ನು ಪಾಲಿಸಬೇಕು ಎನ್ನುವ ನಿಯಮ ಜಾರಿಗೆ ತರಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಇದನ್ನೂ ಓದಿ:  ಕ್ರಿಕೆಟಿಗರ ಯೋ-ಯೋ ಫಿಟ್ನೆಸ್ ಟೆಸ್ಟ್ ಅಂದ್ರೇನು?

ಇತ್ತೀಚೆಗೆ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ(ಎನ್‌ಸಿಎ)ಯಲ್ಲಿ ರಾಜ್ಯ ತಂಡಗಳ ಟ್ರೈನರ್‌ಗಳಿಗೆ ಭಾರತದ ತಂಡದ ಟ್ರೈನರ್‌ ಶಂಕರ್‌ ಕಾರ್ಯಾಗಾರ ನಡೆಸಿದರು. ಭಾರತ ಕಿರಿಯರ ತಂಡದ ಕೋಚ್‌ ರಾಹುಲ್‌ ದ್ರಾವಿಡ್‌, ಭಾರತ ತಂಡದ ಫೀಲ್ಡಿಂಗ್‌ ಕೋಚ್‌ ಆರ್‌.ಶ್ರೀಧರ್‌ ಸಹ ಕಾರ್ಯಾಗಾರದ ವೇಳೆ ಉಪಸ್ಥಿತರಿದ್ದರು. 

ಇದನ್ನೂ ಓದಿ: ಯೋ-ಯೋ ಟೆಸ್ಟ್ ಪಾಸ್ ಮಾಡಿದ ಗೌತಮ್ ಗಂಭೀರ್ ಪುತ್ರಿ!

ಸದ್ಯ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರು ಕಡ್ಡಾಯವಾಗಿ ಯೋ-ಯೋ ಟೆಸ್ಟ್‌ನಲ್ಲಿ ಉತ್ತೀರ್‍ಣರಾಗಬೇಕಿದೆ. ಈ ನಿಯಮವನ್ನು ಬಿಸಿಸಿಐ ಸದ್ಯದಲ್ಲೇ ರಣಜಿ ತಂಡಗಳಿಗೂ ವಿಸ್ತರಿಸಲಿದೆ ಎನ್ನಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?