ಇಂದಿನಿಂದ ಬ್ಯಾಡ್ಮಿಂಟನ್ ಹಂಗಾಮ

By Suvarna Web DeskFirst Published Jan 1, 2017, 10:25 AM IST
Highlights

ಟೂರ್ನಿಯಲ್ಲಿ ಅವಧ್ ವಾರಿಯರ್ಸ್, ಹೈದರಾಬಾದ್ ಹಂಟರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಚೆನ್ನೈ ಸ್ಮಾಷರ್ಸ್, ಮುಂಬೈ ರಾಕೆಟ್ಸ್, ಡೆಲ್ಲಿ ಏಸರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಹೈದರಾಬಾದ್(ಜ.01): ರಿಯೊ ಒಲಿಂಪಿಕ್ಸ್'ನ ಫೈನಲ್'ನಲ್ಲಿ ರೋಚಕವಾಗಿ ಕಾದಾಟ ನಡೆಸಿದ್ದ ಸ್ವರ್ಣ ವಿಜೇತೆ ಕರೊಲಿನಾ ಮರಿನ್ ಹಾಗೂ ಬೆಳ್ಳಿ ವಿಜೇತೆ ಪಿವಿ ಸಿಂಧು ಇಂದು ಮತ್ತೊಮ್ಮೆ ಮುಖಾಮುಖಿಯಾಗಲಿದ್ದಾರೆ.

ಇದಲ್ಲದೆ ವಿಶ್ವದ ದ್ವಿತೀಯ ಶ್ರೇಯಾಂಕಿತ ಜಾನ್ ಒ ಜಾರ್ಗೆನ್ಸನ್, ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಸೇರಿದಂತೆ ವಿಶ್ವದ ಅಗ್ರ ಬ್ಯಾಡ್ಮಿಂಟನ್ ಆಟಗಾರರು ಪಾಲ್ಗೊಳ್ಳುತ್ತಿರುವ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಮೂರನೇ ಆವೃತ್ತಿಯ ಪಂದ್ಯಾವಳಿ ರೋಚಕ ಸೆಣಸಾಟಕ್ಕೆ ವೇದಿಕೆಯಾಗಲಿದೆ.

ಇಲ್ಲಿನ ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಾವಳಿಯ ಎಲ್ಲಾ ಪಂದ್ಯಗಳಲ್ಲಿ ‘11-ಪಾಯಿಂಟ್-ಎ-ಗೇಮ್’ ಅಂಕ ಮಾದರಿಯನ್ನು ಅಳವಡಿಸಿರುವುದರಿಂದಾಗಿ ಟೂರ್ನಿಯ ಎಲ್ಲಾ ಪಂದ್ಯಗಳೂ ವಿಶಿಷ್ಠವಾಗಿರಲಿದೆಯಲ್ಲದೆ, ಪ್ರೇಕ್ಷಕರಿಗೆ ರೋಮಾಂಚನ ಒದಗಿಸಲಿದೆ.

ಟೂರ್ನಿಯಲ್ಲಿ ಅವಧ್ ವಾರಿಯರ್ಸ್, ಹೈದರಾಬಾದ್ ಹಂಟರ್ಸ್, ಬೆಂಗಳೂರು ಬ್ಲಾಸ್ಟರ್ಸ್, ಚೆನ್ನೈ ಸ್ಮಾಷರ್ಸ್, ಮುಂಬೈ ರಾಕೆಟ್ಸ್, ಡೆಲ್ಲಿ ಏಸರ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ.

ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ 2016ರ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ್ದ ಚೆನ್ನೈ ಸ್ಮಾಷರ್ಸ್ ಪಡೆ, ಆತಿಥೇಯ ಹೈದರಾಬಾದ್ ಹಂಟರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದ ನಂತರ, ಹಾಲಿ ಚಾಂಪಿಯನ್ನರಾದ ಡೆಲ್ಲಿ ಏಸರ್ಸ್, ಮಾಜಿ ಚಾಂಪಿಯನ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ದ ಸೆಣಸಲಿದೆ.

ಪ್ರಶಸ್ತಿ ಗೆಲ್ಲುವ ತವಕದಲ್ಲಿ ಬ್ಲಾಸ್ಟರ್ಸ್:

2016ರ ಆವೃತ್ತಿಯಲ್ಲಿ ಬೆಂಗಳೂರು ಟಾಪ್‌' ಗನ್ಸ್ ಹೆಸರಿನಲ್ಲಿ ಕಣಕ್ಕಿಳಿದಿದ್ದ ಬೆಂಗಳೂರು ಫ್ರಾಂಚೈಸಿ, ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಆದರೀಗ, ತನ್ನ ಹೆಸರನ್ನು ಬದಲಿಸಿಕೊಂಡು ಬೆಂಗಳೂರು ಬ್ಲಾಸ್ಟರ್ಸ್ ಆಗಿ ಪ್ರಶಸ್ತಿ ಗೆಲ್ಲುವ ಹೊಸ ಹುಮ್ಮಸ್ಸಿನಲ್ಲಿ ಬೆಂಗಳೂರು ತಂಡ ಕಣಕ್ಕಿಳಿದಿದೆ. ವಿಕ್ಟರ್ ಅಕ್ಸೆಲ್ಸನ್, ಸೌರಭ್ ವರ್ಮಾ, ಬೂನ್ಸಾಕ್ ಪೊನ್ಸಾನಾ, ಆರ್.ಎಸ್. ಗದ್ದೆ, ಚೆಉಂಗ್ ನಾನ್ ಯಿ, ಸಿಕ್ಕಿ ರೆಡ್ಡಿ, ಅಶ್ವಿನಿ ಪೊನ್ನಪ್ಪ, ಪ್ರಣವ್ ಚೋಪ್ರಾ, ಕೊ ಸಂಗ್-ಹ್ಯುನ್, ಯೂ ಯಿವೊನ್ ಸೆಯಾಂಗ್ ತಂಡದಲ್ಲಿದ್ದಾರೆ.

 

click me!