ತಂಡ ಸೋತರೂ ಪ್ರೀತಿಗೆ ಫುಲ್ ಖುಷ್

Published : May 21, 2018, 05:57 PM IST
ತಂಡ ಸೋತರೂ ಪ್ರೀತಿಗೆ ಫುಲ್ ಖುಷ್

ಸಾರಾಂಶ

. ಆದರೆ ಪಂಜಾಬ್ ಪ್ಲೇಆಫ್'ನಿಂದ ಹೊರಹೋಗಿದ್ದಕ್ಕೆ ಪ್ರೀತಿ ಜಿಂಟಾಗೆ ಖುಷಿಯಾಗಿದೆಯಂತೆ. ತಮ್ಮ ಖುಷಿಗೆ ಕಾರಣ ಪಂಜಾಬ್ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್'ಗೆ ಸ್ಥಾನ ಪಡೆದುಕೊಳ್ಳದಿರುವುದು.

ಮುಂಬೈ(ಮೇ.21): ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ ಇಲೆವನ್ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ನಂತರದ ಕೊನೆಯ ಪಂದ್ಯಗಳಲ್ಲಿ ಕಳೆಪೆಯಾಟವಾಡಿದ ಕಾರಣ ಐಪಿಎಲ್ 11ರ ಆವೃತ್ತಿಯ ಪ್ಲೇಆಫ್'ನಿಂದ ಔಟಾಗಿದೆ. 
ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್  ತಂಡದ ವಿರುದ್ಧ  ಅಶ್ವನ್ ನಾಯಕತ್ವದ ಪಂಜಾಬ್ 50ಕ್ಕೂ ಹೆಚ್ಚು ಅಧಿಕ ರನ್'ಗಳಿಂದ ಜಯಗಳಿದ್ದರೆ ಪ್ಲೇಆಪ್ 4ರ ಹಾದಿ ಸುಗಮವಾಗುತ್ತಿತ್ತು. ಪ್ಲೇಆಫ್'ನಿಂದ ಹೊರಗುಳಿದರೆ ಯಾವುದೇ ತಂಡದ ಮಾಲೀಕರಿಗೂ ನಿರಾಸೆಯಾಗುತ್ತದೆ. ಆದರೆ ಪಂಜಾಬ್ ಪ್ಲೇಆಫ್'ನಿಂದ ಹೊರಹೋಗಿದ್ದಕ್ಕೆ ಪ್ರೀತಿ ಜಿಂಟಾಗೆ ಖುಷಿಯಾಗಿದೆಯಂತೆ. ತಮ್ಮ ಖುಷಿಗೆ ಕಾರಣ ಪಂಜಾಬ್ ತಂಡಕ್ಕಿಂತ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್'ಗೆ ಸ್ಥಾನ ಪಡೆದುಕೊಳ್ಳದಿರುವುದು.
ಉತ್ತಮ ರನ್ ರೇಟ್ ಹೊಂದಿದ ಮುಂಬೈ ತಂಡ ನಿನ್ನೆ ಡೆಲ್ಲಿ ಡೇರ್'ಡೇವಿಲ್ಸ್ ವಿರುದ್ಧ ಗೆಲುವುಗಳಿಸಿದ್ದರೆ ಆರಾಮಾಗಿ ಮೊದಲ ನಾಲ್ಕರ ಹಾದಿಯಲ್ಲಿ ಪ್ರವೇಶ ಪಡೆದುಕೊಳ್ಳುತ್ತಿತ್ತು. ಆದರೆ ಜಯ ಒಲಿಯಲಿಲ್ಲ. ಇದರಿಂದ ತುಂಬಾ ಸಂತಸಗೊಂಡಿರುವ ಪ್ರೀತಿ ನನಗೆ ಮುಂಬೈ ಇಂಡಿಯನ್ಸ್ ತಂಡ ಪ್ಲೇಆಫ್ ಪ್ರವೇಶ ಪಡೆದಿಲ್ಲ ತುಂಬ ಖುಷಿಯಾಗಿದ್ದೇನೆ.  ಕೆಲವೇ ಗಂಟಗಳ ನಂತರ ನಂತರ ಪಂಜಾಬ್ ಕೂಡ ಪ್ಲೇ ಆಪ್'ನಿಂದ ಔಟಾಯಿತು ಎಂದು ಟ್ವೀಟ್ ಮಾಡಿದ್ದಾರೆ. ಪಂಜಾಬ್ ಈ ಐಪಿಎಲ್'ನನಲ್ಲಿ 6 ಗೆಲುವು 8 ಸೋಲಿನೊಂದಿಗೆ ಅಂಕಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲಿಯೋನಲ್ ಮೆಸ್ಸಿಗೆ ಪಾಸ್ ವೈಡ್ ಪಾಸ್ ಕೊಟ್ಟು ವೈರಲ್ ಆದ ಸಿಎಂ ರೇವಂತ್ ರೆಡ್ಡಿ
ಸೌತ್ ಆಫ್ರಿಕಾ ವಿರುದ್ದ 3ನೇ ಟಿ20 ಗೆದ್ದ ಟೀಂ ಇಂಡಿಯಾ, ಸರಣಿಯಲ್ಲಿ 2-1 ಮುನ್ನಡೆ