ಪುಲ್ವಾಮ ದಾಳಿ ಭಾರತದ ಮೇಲೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲೊಂದು. 40ಕ್ಕೂ ಹೆಚ್ಚು CRPF ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿ ಬಳಿಕ ಭಾರತೀಯರ ಆಕ್ರೋಶ ಹೆಚ್ಚಾಗಿದೆ. ಭಯೋತ್ವಾದಕರ ತವರು ಪಾಕಿಸ್ತಾನ ತಕ್ಕ ಪಾಠ ಕಲಿಸಲು ಮುಂದಾಗಿದೆ. ಇದೀಗ ಪಾಕ್ ವಿರುದ್ದದ ವಿಶ್ವಕಪ್ ಪಂದ್ಯ ಬಹಿಷ್ಕರಿಸಲು ಆಗ್ರಹ ಕೇಳಿಬಂದಿದೆ.
ಮುಂಬೈ(ಫೆ.17): ಪುಲ್ವಾಮ ದಾಳಿಯಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹಳಸಿದೆ. ಭಯೋತ್ವಾದಕ ಸಂಘಟನೆಗಳ ಮೂಲವಾಗಿರುವ ಪಾಕಿಸ್ತಾನಕ್ಕೆ ತಕ್ಕೆ ಪಾಠ ಕಲಿಸಲು ಭಾರತ ಎಲ್ಲಾ ಪ್ರಯತ್ನಕ್ಕೆ ಮುಂದಾಗಿದೆ. ಇದೀಗ ಪಾಕಿಸ್ತಾನ ವಿರುದ್ದ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಆಗ್ರಹ ಕೇಳಿಬಂದಿದೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತದಲ್ಲಿ ಪಾಕಿಸ್ತಾನ ಲೀಗ್ ಕ್ರಿಕೆಟ್ ಪ್ರಸಾರ ನಿರ್ಭಂಧ!
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಆಡಲಿದೆ. ವೇಳಾಪಟ್ಟಿ ಪ್ರಕಾರ ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಇಂಡೋ-ಪಾಕ್ ಮುಖಾಮುಖಿಯಾಗಲಿದೆ. ಇದೀಗ ಪಾಕ್ ವಿರುದ್ದದ ಪಂದ್ಯ ಆಡದಂತೆ ಕ್ರೆಕೆಟ್ ಕ್ಲಬ್ ಆಫ್ ಇಂಡಿಯಾ(CCI) ಕಾರ್ಯದರ್ಶಿ ಸುರೇಶ್ ಭಫ್ನ ಬಿಸಿಸಿಐ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಧೋನಿ ಸಿಕ್ಸರ್ ನೋಡಿ ಸಂಭ್ರಮಿಸುತ್ತಿದ್ದಾತ ಸೂಸೈಡ್ ಬಾಂಬರ್ ಹೇಗಾದ?
ಕ್ರಿಕೆಟ್‌ಗಿಂತ ದೇಶ ಮೊದಲು. ಹೀಗಾಗಿ ಪಾಕಿಸ್ತಾನ ವಿರುದ್ದದ ಎಲ್ಲಾ ವ್ಯವಹಾರಗಳನ್ನ ನಿಲ್ಲಿಸಬೇಕು. ಈ ಮೂಲಕ ಪಾಕ್‌ಗೆ ಬುದ್ದಿಕಲಿಸಬೇಕು ಎಂದು ಸುರೇಶ್ ಹೇಳಿದ್ದಾರೆ. ಘಟನೆ ಕುರಿತು ಪಾಕಿಸ್ತಾನ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಯಾವುದೇ ಹೇಳಿಕೆಯಾಗಲಿ, ಖಂಡನೆಯಾಗಲಿ, ಸಂತಾಪವಾಗಿ ಸೂಚಿಸಿಲ್ಲ. ಇತರ ದೇಶಗಳು ಘಟನೆಯನ್ನ ಖಂಡಿಸಿದೆ ಎಂದು ಸುರೇಶ್ ಹೇಳಿದ್ದಾರೆ.
ಇದನ್ನೂ ಓದಿ: ಪುಲ್ವಾಮ ದಾಳಿ: ಭಾರತೀಯ ಕ್ರಿಕೆಟ್ ಕ್ಲಬ್‌ನಲ್ಲಿದ್ದ ಇಮ್ರಾನ್ ಖಾನ್ ಫೋಟೋ ಎತ್ತಂಗಡಿ!
ಪುಲ್ವಾಮ ದಾಳಿಯಿಂದ ಕ್ರೆಕೆಟ್ ಕ್ಲಬ್ ಆಫ್ ಇಂಡಿಯಾ(CCI) ರೆಸ್ಟೋರೆಂಟ್‌ನಲ್ಲಿದ್ದ ಪಾಕಿಸ್ತಾನ ಮಾಜಿ ಕ್ರಿಕೆಟಿಗ(ಸದ್ಯ ಪ್ರಧಾನಿ) ಇಮ್ರಾನ್ ಖಾನ್ ಫೋಟೋ ಎತ್ತಂಗಡಿ ಮಾಡಲಾಗಿದೆ. ಈ ಮೂಲಕ ಕ್ಲಬ್ ಆಫ್ ಇಂಡಿಯಾ ಪ್ರತಿಭಟನೆ ಮಾಡಿದೆ.