11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಆದ್ರೆ ಬೆಂಗಳೂರು ಫ್ಯಾನ್ಸ್‌ಗೆ ನಿರಾಸೆ..!

Published : Sep 04, 2024, 12:46 PM IST
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಆದ್ರೆ ಬೆಂಗಳೂರು ಫ್ಯಾನ್ಸ್‌ಗೆ ನಿರಾಸೆ..!

ಸಾರಾಂಶ

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಆರಂಭ ಯಾವಾಗ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಆದರೆ ಬೆಂಗಳೂರು ಕಬಡ್ಡಿ ಫ್ಯಾನ್ಸ್‌ಗೆ ನಿರಾಸೆ ಎದುರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಮುಂಬೈ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 18ರಿಂದ ಆರಂಭಗೊಳ್ಳುವುದಾಗಿ ಟೂರ್ನಿಯ ಆಯೋಜಕರು ಘೋಷಿಸಿದ್ದಾರೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ. 

ಟೂರ್ನಿ ಈ ಬಾರಿ 3 ನಗರಗಳ ಕ್ಯಾರವಾನ್ ಮಾದರಿಯಲ್ಲಿ ಹೈದರಾಬಾದ್, ನೋಯ್ತಾ ಹಾಗೂ ಪುಣೆಯಲ್ಲಿ ನಡೆಯಲಿವೆ. ಅಕ್ಟೋಬರ್18ರಿಂದ ಹೈದರಾಬಾದ್‌ನಲ್ಲಿ ಪಂದ್ಯಗಳು ಆರಂಭಗೊಳ್ಳಲಿದ್ದು, ಬಳಿಕ ನ.10ರಿಂದ ನೋಯ್ಡಾ ಹಾಗೂ ಡಿ.3ರಿಂದ ಪುಣೆಯಲ್ಲಿ ಆಯೋಜನೆಗೊಳ್ಳಲಿವೆ.

ಬೆಂಗಳೂರಲ್ಲಿಲ್ಲ ಪಂದ್ಯ

ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿ ಗಳಲ್ಲೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿದ್ದವು. 2021 ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಕಳೆದೆರಡು ಬಾರಿಯೂ ಕಂಠೀರವ ಕ್ರೀಡಾಂಗಣ ದಲ್ಲಿ ಪಂದ್ಯಗಳು ನಡೆದಿದ್ದವು. ಈ ಬಾರಿ ಇಲ್ಲ.

ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ

ಪ್ರೊ ಕಬಡ್ಡಿ: 118 ಆಟಗಾರರು ಹರಾಜು, ಮೊದಲ ಬಾರಿ 8 ಆಟಗಾರರಿಗೆ ₹1 ಕೋಟಿಗಿಂತ ಹೆಚ್ಚು ಮೊತ್ತ!

11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಕೆಲ ದಿನಗಳ ಕೊನೆಗೊಂಡಿದ್ದು, ಒಟ್ಟು 118 ಆಟಗಾರರು 12 ತಂಡಗಳಿಗೆ ಹರಾಜಾಗಿದ್ದಾರೆ. ಪಿಕೆಎಲ್‌ ಇತಿಹಾಸದಲ್ಲೇ ಮೊದಲ ಬಾರಿ 8 ಆಟಗಾರರು ತಲಾ ₹1 ಕೋಟಿಗಿಂತ ಹೆಚ್ಚು ಮೊತ್ತ ಪಡೆದುಕೊಂಡಿದ್ದಾರೆ.

ಈ ಬಾರಿ ಹರಾಜಿನಲ್ಲಿ ಸಚಿನ್(ತಮಿಳ್ ತಲೈವಾಸ್-₹2.15 ಕೋಟಿ) ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರೆ, ಇರಾನ್‌ನ ಮೊಹಮದ್‌ ರೆಜಾ ಶಾದ್ಲೂ(ಹರ್ಯಾಣ ಸ್ಟೀಲರ್ಸ್ - ₹2.07) ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. ಮೊದಲ ದಿನ ಸಚಿನ್‌ ಹಾಗೂ ಪರ್ದೀಪ್‌ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಬೆಂಗಳೂರು ಬುಲ್ಸ್‌, 2ನೇ ದಿನ ಜೈ ಭಗವಾನ್‌ರನ್ನು ₹63 ಲಕ್ಷ ನೀಡಿ ಖರೀದಿಸಿತು. ಥಾಯ್ಲೆಂಡ್‌ನ ಹಸುನ್‌, ಪ್ರಮೋತ್‌ ಕೂಡಾ ಬುಲ್ಸ್‌ ಸೇರ್ಪಡೆಗೊಂಡರು. ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದವು. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದವು.

ರೋಯಿಂಗ್ ಸ್ಪರ್ಧೆಯ ವೇಳೆ ಮೊಬೈಲ್‌ ಪತ್ತೆ: ಗೆದ್ದಿದ್ದ ಪದಕವನ್ನೇ ಕಳಕೊಂಡ ಇಟಲಿ ಅಥ್ಲೀಟ್‌

ಲಂಕಾದಲ್ಲಿ ಯೋಗಾಸನ ಸ್ಪರ್ಧೆ: ರಾಜ್ಯಕ್ಕೆ 18 ಪದಕ

ಕೊಲಂಬೊ: ಇತ್ತೀಚೆಗೆ ಕೊಲಂಬೊದಲ್ಲಿ ವರ್ಲ್ಡ್ ಫಿಟ್‌ನೆಸ್ ಫೆಡರೇಶನ್ ಯೋಗಾಸನ ಸ್ಪೋರ್ಟ್ಸ್ ಇಂಟರ್‌ನ್ಯಾಶನಲ್ ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಯೋಗ ಪಟುಗಳು 10 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿದ್ದಾರೆ. ಕೂಟದಲ್ಲಿ ಕರ್ನಾಟಕದ 14 ಮಂದಿ ಸೇರಿ ಭಾರತದ ಒಟ್ಟು 55 ಯೋಗ ಪಟುಗಳು ಪಾಲ್ಗೊಂಡಿದ್ದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್