ಮೊದಲಾರ್ಧದ ಆರಂಭದಲ್ಲೇ ಆಲೌಟ್ ಆಗಿ 7 ಅಂಕಗಳ ಹಿನ್ನಡೆ ಅನುಭವಿಸಿದರೂ, ಕುಗ್ಗದ ಪಾಟ್ನಾ 20 ನಿಮಿಷಗಳ ಆಟದ ಮುಕ್ತಾಯಕ್ಕೆ ಅಂತರವನ್ನು ಕೇವಲ 2 ಅಂಕಗಳಿಗೆ (20-22) ಇಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಟೈಟಾನ್ಸ್ ಮೇಲೆ ಸವಾರಿ ಮಾಡಿದ ಪೈರೇಟ್ಸ್, ನಿರ್ಣಾಯಕ ಹಂತದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿ ಮುನ್ನಡೆ ಪಡೆಯಿತು.
ಕೋಲ್ಕತಾ(ಫೆ.14): 10ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಪ್ಲೇ-ಆಫ್ ಹಂತಕ್ಕೆ ಪಾಟ್ನಾ ಪೈರೇಟ್ಸ್ ಪ್ರವೇಶಿಸಿದೆ. ಮಂಗಳವಾರ ತೆಲುಗು ಟೈಟಾನ್ಸ್ ವಿರುದ್ಧ 38-36 ಅಂಕಗಳ ರೋಚಕ ಗೆಲುವು ಸಾಧಿಸಿದ ಪಾಟ್ನಾ, ಪ್ಲೇ-ಆಫ್‌ಗೇರಿದ 5ನೇ ತಂಡ ಎನಿಸಿತು.
ಮೊದಲಾರ್ಧದ ಆರಂಭದಲ್ಲೇ ಆಲೌಟ್ ಆಗಿ 7 ಅಂಕಗಳ ಹಿನ್ನಡೆ ಅನುಭವಿಸಿದರೂ, ಕುಗ್ಗದ ಪಾಟ್ನಾ 20 ನಿಮಿಷಗಳ ಆಟದ ಮುಕ್ತಾಯಕ್ಕೆ ಅಂತರವನ್ನು ಕೇವಲ 2 ಅಂಕಗಳಿಗೆ (20-22) ಇಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಟೈಟಾನ್ಸ್ ಮೇಲೆ ಸವಾರಿ ಮಾಡಿದ ಪೈರೇಟ್ಸ್, ನಿರ್ಣಾಯಕ ಹಂತದಲ್ಲಿ ಎದುರಾಳಿಯನ್ನು ಆಲೌಟ್ ಮಾಡಿ ಮುನ್ನಡೆ ಪಡೆಯಿತು. ಕೊನೆಯಲ್ಲಿ ಸಮಯೋಚಿತ ಆಟವಾಡಿ ಪಂದ್ಯ ಕೈ ಜಾರದಂತೆಯೂ ಎಚ್ಚರ ವಹಿಸಿತು.
ಪಂದ್ಯದ ವೇಳೆಯೇ ಸಿಡಿಲು ಬಡಿದು ಫುಟ್ಬಾಲಿಗ ಸಾವು..! ಇಲ್ಲಿದೆ ನೋಡಿ ಬೆಚ್ಚಿಬೀಳಿಸುವ ವಿಡಿಯೋ
ಪವನ್ ಶೆರಾವತ್‌ರ 16 ಅಂಕಗಳ ಸಾಹಸ ಟೈಟಾನ್ಸ್ ಪಡೆಯನ್ನು 18ನೇ ಸೋಲಿನಿಂದ ಪಾರು ಮಾಡಲಿಲ್ಲ. ಸದ್ಯ ಪುಣೆ, ಜೈಪುರ, ಡೆಲ್ಲಿ, ಗುಜರಾತ್ ಹಾಗೂ ಪಾಟ್ನಾ ತಂಡಗಳು ಪ್ಲೇ-ಆಫ್‌ಗೇರಿದ್ದು ಇನ್ನೊಂದು ಸ್ಥಾನಕ್ಕೆ ಹರ್ಯಾಣ ಹಾಗೂ ಬೆಂಗಾಲ್ ನಡುವೆ ಪೈಪೋಟಿ ಇದೆ. ಬೆಂಗಾಲ್ ಬಾಕಿ ಇರುವ 2 ಪಂದ್ಯ ಗೆದ್ದರೂ ಗರಿಷ್ಠ 64 ಅಂಕ ತಲುಪಬಹುದು. ಹರ್ಯಾಣಕ್ಕೆ 4 ಪಂದ್ಯ ಬಾಕಿ ಇದ್ದು, ತಂಡ 60 ಅಂಕ ಗಳಿಸಿದೆ. 4ರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇ-ಆಫ್ ಸ್ಥಾನ ಖಚಿತವಾಗಲಿದೆ.
ಬೆಂಗಳೂರು ಓಪನ್: ಸುಮಿತ್ ನಗಾಲ್ ಶುಭಾರಂಭ
ಬೆಂಗಳೂರು: ವಿಶ್ವ ರ್‍ಯಾಂಕಿಂಗ್‌ನಲ್ಲಿ 100ರೊಳಗೆ ಪ್ರವೇಶಿಸಿರುವ ಭಾರತದ ಸುಮಿತ್ ನಗಾಲ್ ಬೆಂಗಳೂರು ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸುಮಿತ್, ಫ್ರಾನ್ಸ್‌ನ ಜೆಫ್ರಿ ಬ್ಲ್ಯಾನ್‌ಕಾನೆಕ್ಸ್ ವಿರುದ್ಧ 6-2, 6-2 ನೇರ ಸೆಟ್‌ಗಳಲ್ಲಿ ಸುಲಭ ಜಯ ಸಾಧಿಸಿದರು.
ಟೂರ್ನಿಯಲ್ಲಿ 2ನೇ ಶ್ರೇಯಾಂಕಿತನಾಗಿ ಆಡುತ್ತಿರುವ 26 ವರ್ಷದ ಸುಮಿತ್, 2ನೇ ಸುತ್ತಿನಲ್ಲಿ ಹಾಕಾಂಗ್‌ನ ಕೊಲ್‌ಮನ್ ವಾಂಗ್ ವಿರುದ್ಧ ಸೆಣಸಲಿದ್ದಾರೆ. ವಾಂಗ್ ಮೊದಲ ಸುತ್ತಿನಲ್ಲಿ ಬೆಲ್ಜಿಯಂನ ರಾಫೆಲ್ ಕಾಲಿಗ್ನೊನ್ ವಿರುದ್ಧ 6-4, 7-6(4)ರಲ್ಲಿ ಜಯಿಸಿದರು.
Rajkot Test: ಟೆಸ್ಟ್‌ಗೆ ಪಾದಾರ್ಪಣೆ ಮಾಡಲು ಮತ್ತೊಬ್ಬ ಟೀಂ ಇಂಡಿಯಾ ಕ್ರಿಕೆಟಿಗ ರೆಡಿ..!
ಮಾಜಿ ವಿಶ್ವ ನಂ.25 ಕೆನಡಾದ ವಸೆಕ್ ಪಾಸ್ಪಿಸಿಲ್ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಎರಿಕ್ ವಾನ್ಶೆಲ್‌ಬೊಯ್ಮ್ ವಿರುದ್ಧ 7-6, 3-6, 6-4 ಸೆಟ್‌ಗಳ ಪ್ರಯಾಸದ ಜಯ ಸಾಧಿಸಿದರು. ಡಬಲ್ಸ್‌ನಲ್ಲಿ ಭಾರತದ ಸಾಯಿ ಕಾರ್ತಿಕ್ ರೆಡ್ಡಿ ಹಾಗೂ ಮನೀಶ್ ಸುರೇಶ್ ಕುಮಾರ್ ಮೊದಲ ಸುತ್ತಿನಲ್ಲಿ 2-6, 6-7ರಲ್ಲಿ ಫ್ರಾನ್ಸ್‌ನ ಕಾನ್ಸ್ಟೆಟಿನ್ ಹಾಗೂ ಮ್ಯಾಕ್ಸಿಮ್ ವಿರುದ್ಧ ಸೋಲುಂಡಿತು.