ಘಟನೆಯ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ವೀಕ್ಷಿಸಿದವರು ಆಘಾತಕ್ಕೊಳಗಾಗಿದ್ದಾರೆ. ಈ ರೀತಿ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವನ್ನಪ್ಪಿದ ಘಟನೆ ಕಳೆದ ವರ್ಷ ಇಂಡೋನೇಷ್ಯಾದ ಅಂಡರ್-13 ಪಂದ್ಯಾವಳಿ ವೇಳೆ ನಡೆದಿತ್ತು.
ಬಂಡುಂಗ್(ಫೆ.14): ಪಂದ್ಯದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರನೊಬ್ಬ ಸಾವನ್ನಪ್ಪಿದ ಘಟನೆ ಇಂಡೋನೇಷ್ಯಾದ ಬಂಡುಂಗ್‌ನಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ಕ್ಲಬ್‌ಗಳಾದ ಎಫ್‌ಸಿ ಬಂಡುಂಗ್ ಹಾಗೂ ಎಫ್‌ಬಿಐ ಸುಬಾಂಗ್ ನಡುವಿನ ಸ್ನೇಹಾರ್ಥ ಪಂದ್ಯದ ವೇಳೆ ಸಿಡಿಲು ಬಡಿದು 35 ವರ್ಷದ ಆಟಗಾರ ಕುಸಿದು ಬಿದ್ದಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ವಿಡಿಯೋವನ್ನು ಸಾಮಾಜಿಕ ತಾಣಗಳಲ್ಲಿ ವೀಕ್ಷಿಸಿದವರು ಆಘಾತಕ್ಕೊಳಗಾಗಿದ್ದಾರೆ. ಈ ರೀತಿ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಸಾವನ್ನಪ್ಪಿದ ಘಟನೆ ಕಳೆದ ವರ್ಷ ಇಂಡೋನೇಷ್ಯಾದ ಅಂಡರ್-13 ಪಂದ್ಯಾವಳಿ ವೇಳೆ ನಡೆದಿತ್ತು. ಯುವ ಆಟಗಾರನೊಬ್ಬ ಮೈದಾನದಲ್ಲೇ ಸಾವನ್ನಪ್ಪಿದ್ದ. ಇನ್ನು ಕಳೆದ ವರ್ಷ ಬ್ರೆಜಿಲ್‌ನ 21 ವರ್ಷದ ಫುಟ್ಬಾಲಿಗ ಹೆನ್ರಿಕೆ ಡಿ ಲಿಮಾ ಇದೇ ರೀತಿ ಸಿಡಿಲು ಬಡಿದು ಪ್ರಾಣ ಕಳೆದುಕೊಂಡಿದ್ದರು. ಅವರು ತಮ್ಮ ತಂಡ ಉನಾಯೊ ಜೈರೆನ್ಸೆ ಪರ ಪರಾನಾದಲ್ಲಿ ಆಡುವಾಗ ಘಟನೆ ಸಂಭವಿಸಿತ್ತು.
ಹೀಗಿದೆ ನೋಡಿ ಆ ವಿಡಿಯೋ
ಕುಸ್ತಿ ಸಂಸ್ಥೆ ನಿಷೇಧ ತೆರವು
ನವದೆಹಲಿ: ವಿಶ್ವ ಕುಸ್ತಿ ಸಂಸ್ಥೆ(UWW) ಭಾರತೀಯ ಕುಸ್ತಿ ಫೆಡರೇಷನ್(WFI) ಮೇಲೆ ಹೇರಿದ್ಧ ನಿಷೇಧವನ್ನು ತೆರವುಗೊಳಿಸಿದ್ದು ಅಲ್ಲದೇ, ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ತೀವ್ರ ಹೋರಾಟ ನಡೆಸಿದ್ದ ಕುಸ್ತಿಪಟುಗಳ ರಕ್ಷಣೆಗೂ ಮುಂದಾಗಿದೆ.
ಬ್ರಿಜ್‌ಭೂಷಣ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ಧ ವಿನೇಶ್ ಫೋಗಟ್, ಭಜರಂಗ್ ಪೂನಿಯಾ, ಸಾಕ್ಷಿ ಮಲಿಕ್ ಸೇರಿ ಇತರರ ವಿರುದ್ಧ ಯಾವುದೇ ತಾರತಮ್ಯ ತೋರುವಂತಿಲ್ಲ. ಒಲಿಂಪಿಕ್ಸ್ ಸೇರಿ ಜಾಗತಿಕ ಮಟ್ಟದ ಟೂರ್ನಿಗಳಿಗೆ ಆಯ್ಕೆ ಮಾಡುವಾಗ ಈ ಕುಸ್ತಿಪಟುಗಳನ್ನು ಕಡೆಗಣಿಸುವಂತಿಲ್ಲ ಎಂದು ವಿಶ್ವ ಕುಸ್ತಿ ಸಂಸ್ಥೆ, ಭಾರತೀಯ ಕುಸ್ತಿ ಫೆಡರೇಷನ್‌ಗೆ ಎಚ್ಚರಿಸಿದೆ.
ರೋಹನ್ ಬೋಪಣ್ಣಗೆ ಸಿಎಂ ₹50 ಲಕ್ಷ ಬಹುಮಾನ!
ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ರೋಹನ್ ಬೋಪಣ್ಣ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿಯಾಗಿ ಅಭಿನಂದಿಸಿದರು. ಇದೇ ವೇಳೆ ಅವರಿಗೆ 50 ಲಕ್ಷ ರೂ.ಗಳ ಬಹುಮಾನವನ್ನೂ ಘೋಷಿಸಿದರು.
ಟೀಂ ಇಂಡಿಯಾ ಸ್ಟಾರ್ ಆಟಗಾರರಿಗೆ ಬಿಸಿಸಿಐ ವಾರ್ನಿಂಗ್..!
ಸಚಿವರಾದ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಡಾ.ಕೆ.ಗೋವಿಂದರಾಜು ಹಾಗೂ ರೋಹನ್ ಬೋಪಣ್ಣ ಅವರ ಕುಟುಂಬದವರು ಹಾಜರಿದ್ದರು.
