11ನೇ ಆವೃತ್ತಿ ಪ್ರೊ ಕಬಡ್ಡಿ: ಬೆಂಗ್ಳೂರು ಬುಲ್ಸ್‌ಗೆ ಸತತ 2ನೇ ಸೋಲು!

By Kannadaprabha News  |  First Published Oct 21, 2024, 10:46 AM IST

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಬುಲ್ಸ್ ತಂಡವು ಸತತ ಎರಡನೇ ಸೋಲು ಅನುಭವಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಹೈದರಾಬಾದ್‌: ಮಾಜಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಪ್ರದೀಪ್‌ ನರ್ವಾಲ್‌ ನಾಯಕತ್ವದ ಬುಲ್ಸ್‌ಗೆ ಗುಜರಾತ್‌ ಜೈಂಟ್ಸ್‌ ವಿರುದ್ಧ 32-36 ಅಂಕಗಳಿಂದ ಸೋಲು ಎದುರಾಯಿತು.

ಆರಂಭದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಬುಲ್ಸ್‌, 11ನೇ ನಿಮಿಷದಲ್ಲಿ ಗುಜರಾತ್‌ನ ಆಲೌಟ್‌ ಮಾಡಿ 13-9ರಲ್ಲಿ ಮುನ್ನಡೆ ಪಡೆಯಿತು. ಮೊದಲಾರ್ಧಕ್ಕೆ ಬುಲ್ಸ್‌ ಮುನನ್ಡೆ 19-16ಕ್ಕೆ ಏರಿಕೆಯಾಯಿತು. ಆದರೆ ದ್ವಿತೀಯಾರ್ಧದಲ್ಲಿ ಬುಲ್ಸ್‌ ರೈಡರ್‌ಗಳನ್ನು ಕಟ್ಟಿಹಾಕಲು ಯಶಸ್ವಿಯಾದ ಜೈಂಟ್ಸ್‌ ಗೆಲುವು ತನ್ನದಾಗಿಸಿಕೊಂಡಿತು. ಪ್ರದೀಪ್‌ 9 ಹಾಗೂ ಅಜಿಂಕ್ಯಾ ಪವಾರ್‌ 7 ರೈಡ್‌ ಅಂಕ ಗಳಿಸಿದರೂ ಇತರರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಮೊದಲಾರ್ಧ 13 ರೈಡ್‌ ಅಂಕ ಪಡೆದಿದ್ದ ಬುಲ್ಸ್‌, ದ್ವಿತೀಯಾರ್ಧದಲ್ಲಿ ಕೇವಲ 7 ಅಂಕ ಪಡೆಯಿತು.

𝙂𝙪𝙟𝙖𝙧𝙖𝙩, 𝙩𝙖𝙖𝙧𝙞 𝙬𝙞𝙣 𝙠𝙖𝙢𝙖𝙖𝙡 𝙘𝙝𝙝𝙚 👏

Get all the LIVE updates 👉 https://t.co/cfORnV9MAP or download the Pro Kabaddi Official App 📱 pic.twitter.com/ejZC1Zef7x

— ProKabaddi (@ProKabaddi)

Latest Videos

undefined

ಮಹಿಳಾ ಚುಟುಕು ವಿಶ್ವಕಪ್: ಹರಿಣಗಳನ್ನು ಮಣಿಸಿದ ಕಿವೀಸ್‌ಗೆ ಚೊಚ್ಚಲ ಟಿ20 ವಿಶ್ವಕಪ್ ಕಿರೀಟ!

ಗುಜರಾತ್‌ನ ಪರ್ತೀಕ್ ದಹಿಯಾ 8, ಹಿಮಾನ್ಶು ಸಿಂಗ್‌ 7, ಗುಮಾನ್‌ ಸಿಂಗ್‌, ಸೋಂಬೀರ್‌ ತಲಾ 6 ಅಂಕ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಜೈಪುರ ಜಯಭೇರಿ

ಭಾನುವಾರದ ಆರಂಭಿಕ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರುದ್ಧ ಜೈಪುರ ಪಿಂಕ್‌ ಪ್ಯಾಂಥರ್ಸ್‌ 39-34 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು. ತಾರಾ ರೈಡರ್‌ ಅರ್ಜುನ್‌ ದೇಶ್‌ವಾಲ್‌(15 ಅಂಕ) ಜೈಪುರ ಗೆಲುವಿನ ರೂವಾರಿ ಎನಿಸಿಕೊಂಡರು. ಬೆಂಗಾಲ್ ಪರ ನಿತಿನ್‌ ಧನ್‌ಕರ್‌ 13 ಅಂಕ, ಮಣೀಂದರ್‌ ಸಿಂಗ್ 8 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ.

ಇಂದಿನ ಪಂದ್ಯಗಳು

ಯುಪಿ ಯೋಧಾಸ್‌-ದಬಾಂಗ್‌ ಡೆಲ್ಲಿ, ರಾತ್ರಿ 8 ಗಂಟೆಗೆ

ಪುಣೇರಿ ಪಲ್ಟನ್‌-ಪಾಟ್ನಾ ಪೈರೇಟ್ಸ್‌, ರಾತ್ರಿ 9 ಗಂಟೆಗೆ

ಜೋಹರ್‌ ಕಪ್‌ ಹಾಕಿ: ಭಾರತಕ್ಕೆ ಸತತ 2 ಜಯ

ಜೋಹರ್‌ ಬಹ್ರು(ಮಲೇಷ್ಯಾ): ಸುಲ್ತಾನ್‌ ಆಫ್‌ ಜೋಹರ್‌ ಹಾಕಿ ಟೂರ್ನಿಯಲ್ಲಿ ಭಾರತ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಗ್ರೇಟ್‌ ಬ್ರಿಟನ್‌ ವಿರುದ್ಧ 6-4ರಲ್ಲಿ ಜಯಗಳಿಸಿತು. ಶಾರ್ದಾ ನಂದ್‌, ದಿಲ್‌ರಾಜ್‌ ತಲಾ 2, ಮನ್‌ಮೀತ್‌ ಸಿಂಗ್‌, ಮೊಹಮ್ಮದ್‌ ಕೊನೈನ್‌ ತಲಾ 1 ಗೋಲು ಬಾರಿಸಿದರು. ಭಾರತ ಮುಂದಿನ ಪಂದ್ಯದಲ್ಲಿ ಅ.22ಕ್ಕೆ ಮಲೇಷ್ಯಾ ಎದುರಾಗಲಿದೆ.

ಬೆಂಗಳೂರು ಟೆಸ್ಟ್ ಸೋಲಿನ ಬೆನ್ನಲ್ಲೇ ಶುರುವಾಯ್ತು WTC ಫೈನಲ್ ಹೊಸ ಲೆಕ್ಕಾಚಾರ! ಭಾರತ ಇನ್ನೆಷ್ಟು ಪಂದ್ಯ ಗೆಲ್ಬೇಕು?

ಏಷ್ಯನ್‌ ಕ್ರಾಸ್‌ ಕಂಟ್ರಿ ಓಟ: ಭಾರತಕ್ಕೆ ಒಟ್ಟು 11 ಪದಕ

ಹಾಂಕಾಂಗ್‌: ಏಷ್ಯನ್‌ ಕ್ರಾಸ್‌ ಕಂಟ್ರಿ ಓಟದ ಸ್ಪರ್ಧೆಯಲ್ಲಿ ಭಾರತ 11 ಪದಕಗಳನ್ನು ಗೆದ್ದಿದೆ. ಪುರುಷ, ಮಹಿಳಾ, ಅಂಡರ್‌-20 ಪುರುಷ, ಮಹಿಳಾ ವಿಭಾಗಗಳಲ್ಲಿ ಚಿನ್ನ ಗೆದ್ದ ಭಾರತ, ಪುರುಷರ 10 ಕಿ.ಮೀ. ವೈಯಕ್ತಿಕ ವಿಭಾಗದಲ್ಲಿ ಎಲ್ಲಾ ಪದಕ ಜಯಿಸಿ ಕ್ಲೀನ್‌ಸ್ವೀಪ್‌ ಸಾಧಿಸಿತು. ಮಹಿಳೆಯರ 10 ಕಿ.ಮೀ. ರೇಸ್‌ನಲ್ಲಿ ಚಿನ್ನ, ಬೆಳ್ಳಿ ಲಭಿಸಿತು.

click me!