PKL 2019: ಪಾಟ್ನಾ ಅಬ್ಬರಕ್ಕೆ ಪುಣೇರಿ ಪಲ್ಟಿ!

By Web Desk  |  First Published Sep 15, 2019, 10:10 PM IST

ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ಪಾಟ್ನಾ ಪೈರೇಟ್ಸ್ ಅಬ್ಬರಿಸಿದೆ ಪುಣೇರಿ ವಿರುದ್ಧ ಮಿಂಚಿನ ಪ್ರದರ್ಶನ ನೀಡಿದ ಪಾಟ್ನಾ ಅಂಕಬೇಟೆಯಲ್ಲಿ ಅರ್ಧಶತಕ ಸಿಡಿಸಿತು. ಈ ಹೋರಾಟದ ಹೈಲೈಟ್ಸ್ ಇಲ್ಲಿದೆ.


ಪುಣೆ(ಸೆ.15): ಪ್ರೋ ಕಬಡ್ಡಿ ಲೀಗ್ ಟೂರ್ನಿಯ 92ನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ ಅಕ್ಷರಶಃ ಅಬ್ಬರಿಸಿತು. ತವರಿಣ ಪುಣೇರಿ ಪಲ್ಟಾನ್ ವಿರುದ್ಧ ಹೋರಾಡಿದ ಪಾಟ್ನಾ ಪೈರೇಟ್ಸ್ 55-33 ಅಂಕಗಳಿಂದ ಪಂದ್ಯ ಗೆದ್ದುಕೊಂಡಿತು. ಇದರೊಂದಿಗೆ ಪಾಟ್ನಾ 6 ಗೆಲುವಿನಿಂದ 8ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ಪುಣೇರಿ 10ನೇ ಸ್ಥಾನಕ್ಕೆ ಕುಸಿದಿದೆ.

ಇದನ್ನೂ ಓದಿ: ಸಂದರ್ಶನ: ಪ್ರೊ ಕಬಡ್ಡಿ ಕನಸು ಕಾಣುವ ಯುವಕರಿಗೆ ಪವನ್ ಶೆರಾವತ್ ಸಲಹೆ...

Tap to resize

Latest Videos

ನಿತಿನ್ ಥೋಮರ್ ರೈಡ್ ಪಾಯಿಂಟ್ ಮೂಲಕ ಪುಣೇರಿ ಪಲ್ಟಾನ್ ಅಂಕ ಖಾತೆ ತೆರೆಯಿತು. ಮಂಜೀತ್ ಟ್ಯಾಕಲ್ ಹಾಗೂ ರೈಡ್ ನಿಂದ ಪುಣೇರಿ ಆರಂಭದಲ್ಲಿ 3-1 ಅಂಕಗಳ ಮುನ್ನಡೆ ಪಡೆಯಿತು. 4ನೇ ನಿಮಿಷಗಲ್ಲಿ ಪಾಟ್ನಾ 7-7 ಅಂಕಗಳಿಂದ ಸಮಬಲ ಮಾಡಿಕೊಂಡಿತು. ನಿಧಾನವಾಗಿ ಚೇತರಿಸಿಕೊಂಡ ಪಾಟ್ನಾ ಮಿಂಚಿನ ವೇಗದಲ್ಲಿ ಅಂಕ ಕಲೆಹಾಕಿತು. 15ನೇ ನಿಮಿಷದಲ್ಲಿ ಪಾಟ್ನಾ ಪೈರೇಟ್ಸ್ 19-14 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. 

ಇದನ್ನೂ ಓದಿ: PKL 2019: ಮೈದಾನದಲ್ಲೇ ಕುಸಿದು ಬಿದ್ದ ಸಂದೀಪ್ ನರ್ವಾಲ್! 

ಮೊದಲಾರ್ಧದಲ್ಲಿ 27-17 ಅಂಕಗಳಿಂದ ಮುನ್ನಡೆ ಪಡೆದುಕೊಂಡಿತು. ಇನ್ನು ದ್ವಿತಿಯಾರ್ಧದಲ್ಲೂ ಪುಣೇರಿ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ದ್ವಿತಿಯಾರ್ಧದ 15ನೇ ನಿಮಿಷದಲ್ಲಿ 44-29 ಮುನ್ನಡೆ ಪಡೆದುಕೊಂಡ ಪಾಟ್ನಾ ಗೆಲುವು ಖಚಿತಗೊಂಡಿತು. ಅಂತಿಮ ಹಂತದಲ್ಲಿ 55-33 ಅಂಕಗಳಲ್ಲಿ ಗೆಲುವು ಸಾಧಿಸಿತು. 

ಗುಜರಾತ್ ಮಣಿಸಿದ ದಂಬಾಗ್:
ಪಾಟ್ನಾ ಪೈರೇಟ್ಸ್ ಪಂದ್ಯಕ್ಕೂ ಮೊದಲು ಗುಜರಾತ್ ಫಾರ್ಚೂನ್ ಜೈಂಟ್ಸ್ ಹಾಗೂ ದಬಾಂಗ್ ದಿಲ್ಲಿ ಹೋರಾಟ ನಡೆಸಿತು. ರೋಚಕ ಪಂದ್ಯದಲ್ಲಿ ದಬಾಂಗ್ ದಲ್ಲಿ 34-30 ಅಂಕಗಳಲ್ಲಿ ಗೆಲುವು ಕಂಡಿತು. 12 ಗೆಲುವಿನೊಂದಿಗೆ ದಿಲ್ಲಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಇತ್ತ ಸೋಲು ಕಂಡ ಗುಜರಾತ್ 9ನೇ ಸ್ಥಾನಕ್ಕೆ ಕುಸಿದಿದೆ.
 

click me!