40 ನಿಮಿಷಗಳ ಪಂದ್ಯದಲ್ಲಿ 39 ನಿಮಿಷ ಮುನ್ನಡೆ ಕಾಯ್ದುಕೊಂಡಿದ್ದ ಬೆಂಗಾಲ್ ವಾರಿಯರ್ಸ್ ಇನ್ನೇನು ಗೆಲುವು ನಮ್ಮದೇ ಎಂದು ಬೀಗುವಷ್ಟರಲ್ಲೆ ಜೈಪುರ ಪಿಂಕ್ ಪ್ಯಾಂಥರ್ಸ್ ತಿರುಗೇಟು ನೀಡಿದೆ. ಅಂತಿಮ ನಿಮಿಷದಲ್ಲಿ ಜೈಪುರ ತಂಡದ ಮ್ಯಾಜಿಕ್ ಫಲಿತಾಂಶವನ್ನೇ ಬದಲಿಸಿತು.
ಮುಂಬೈ(ಜು.27): ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಪಂದ್ಯಗಳು ತೀವ್ರ ಕುತೂಹಲ ಕೆರಳಿಸುತ್ತಿದೆ. ಜೈಪುರ್ ಪಿಂಕ್ ಪ್ಯಾಂಥರ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ನಡುವಿನ ಹೋರಾಟ ಅಂತಿಮ ಘಟ್ಟದವರೆಗೂ ಗೆಲುವು ಯಾರಿಗೆ ಅನ್ನೋ ಕುತೂಹಲ ಹಿಡಿದಿಟ್ಟುಕೊಂಡಿತು. ರೋಚಕ ಪಂದ್ಯದಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ 2 ಅಂಕಗಳ ಅಂತರದಲ್ಲಿ ಬೆಂಗಾಲ್ ವಾರಿಯರ್ಸ್‌ಗೆ ಸೋಲುಣಿಸಿತು.
ಇದನ್ನೂ ಓದಿ: PKL7: ಮಹಾರಾಷ್ಟ್ರ ಡರ್ಬಿ ಹೋರಾಟಕ್ಕೆ ಹಾಜರಾದ ಕೊಹ್ಲಿ!
ಮೊದಲಾರ್ಧದ ಆರಂಭಿಕ 2 ರೈಡ್‌ಗಳಲ್ಲಿ ಉಭಯ ತಂಡಗಳು ಅಂಕಗಳಿಸಲು ವಿಫಲವಾಯಿತು. ಆದರೆ ಕೆ ಪ್ರಪಂಜನ್ ರೈಡ್‌ನಿಂದ ಬೆಂಗಾಲ್ ವಾರಿಯರ್ಸ್ 2 ಅಂಕದೊಂದಿಗೆ ಅಕೌಂಟ್ ಓಪನ್ ಮಾಡಿತು. 4 ನಿಮಿಷದಲ್ಲಿ ಬೆಂಗಾಲ್ ವಾರಿಯರ್ಸ್ 4 ಅಂಕ ಪಡೆದರೂ, ಇತ್ತ ಜೈಪುರ ಅಂಕ ಖಾತೆ ತೆರಯಲು ಪರದಾಡಿತು. 5ನೇ ನಿಮಿಷದಿಂದ ಜೈಪುರ ಮಿಂಚಿನ ಆಟ ಪ್ರದರ್ಶಿಸಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಬೆಂಗಾಲ್ ವಾರಿಯರ್ಸ್ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದ 16ನೇ ನಿಮಿಷದಲ್ಲಿ ಜೈಪುರ 10-10 ಅಂಕಗಳ ಮೂಲಕ ಸಮಬಲ ಮಾಡಿತು. ಅಷ್ಟೇ ವೇಗದಲ್ಲಿ ತಿರುಗೇಟು ನೀಡಿದ ಬೆಂಗಾಲ್ 14-10 ಅಂಕಗಳ ಅಂತರದಲ್ಲಿ ಮೊದಲಾರ್ಧ ಅಂತ್ಯಗೊಳಿಸಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ದ್ವಿತಿಯಾರ್ಧದಲ್ಲಿ 18 ನಿಮಿಷದ ವರೆಗೂ ಬೆಂಗಾಲ್ ವಾರಿಯರ್ಸ್ ಮುನ್ನಡೆ ಕಾಯ್ದುಕೊಂಡಿತು. 24-23 ಅಂಕಗಳಿಂದ ಮುನ್ನಡೆ ಪಡೆದಿದ್ದ ಬೆಂಗಾಲ್ ಅಂತಿಮ ಹಂತದಲ್ಲಿ ಆಲೌಟ್ ಆಗೋ ಮೂಲಕ ಹಿನ್ನಡೆ ಅನುಭವಿಸಿತು. ಜೈಪುರ 26-24 ಅಂಕಗಳ ಮುನ್ನಡೆ ಪಡೆಯಿತು. ಪಂದ್ಯ ಮುಕ್ತಾಯದ ವೇಳೆ ಜೈಪುರ 27-25 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.