ಹೈದರಾಬಾದ್ ಬಳಿಕ ಮುಂಬೈನಲ್ಲಿ ಆರಂಭಗೊಂಡ ಪ್ರೊ ಕಬಡ್ಡಿ ಪಂದ್ಯ ಹಲವು ವಿಶೇಷತೆಗಳಿಂದ ಕೂಡಿತ್ತು. ಒಂದಡೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಗಮನ , ಮತ್ತೊಂದೆಡೆ ಮಹಾರಾಷ್ಟ್ರ ಡರ್ಬಿ ಹೋರಾಟ ಅಭಿಮಾನಿಗಳನ್ನು ಪುಳಕಿತಗೊಳಿಸಿತು.
ಮುಂಬೈ(ಜು.27): ಹೈದರಾಬಾದ್‌ನಲ್ಲಿ ಆರಂಭಗೊಂಡ 7ನೇ ಆವೃತ್ತಿ ಪ್ರೊ ಕಬಡ್ಡಿ ಟೂರ್ನಿ ಇದೀಗ ಮುಂಬೈಗೆ ಶಿಫ್ಟ್ ಆಗಿದೆ. ಟೀಂ ಇಂಡಿಯಾ ವಿರಾಟ್ ಕೊಹ್ಲಿ ಆಗಮನ ಅಭಿಮಾನಿಗಳಿಗೆ ಮಾತ್ರವಲ್ಲ ಕಬಡ್ಡಿ ಪಟುಗಳಿಗೆ ಹೊಸ ಉತ್ಸಾಹ ನೀಡಿತ್ತು. ಮುಂಬೈ ಲೆಗ್ ಆರಂಭದಲ್ಲಿ ವಿರಾಟ್ ಕೊಹ್ಲಿ ರಾಷ್ಟ್ರ ಗೀತೆ ಹಾಡಿದರು. ಬಳಿಕ ಪಂದ್ಯ ಆರಂಭಗೊಂಡಿತು. ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ಡರ್ಬಿ ಹೋರಾಟ ಅಭಿಮಾನಿಗಳಿಗೆ ಸಖತ್ ಮನರಂಜನೆ ನೀಡಿತು. ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಪುಣೇರಿ ಪಲ್ಟಾನ್ ವಿರುದ್ದ ಯು ಮುಂಬಾ 33-23 ಅಂಕಗಳ ಗೆಲುವು ಸಾಧಿಸಿದೆ.
ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ !
ಬಲಿಷ್ಠ ಯು ಮುಂಬಾ ತಂಡ ಮೊದಲ ರೈಡ್‌ನಲ್ಲೇ ಅಂಕ ಖಾತೆ ತೆರೆಯಿತು. ಇತ್ತ ಪುಣೇರಿ ಪಲ್ಟಾನ್ ಕೂಡ ತಿರುಗೇಟು ನೀಡಿತು. ಮೊದಲಾರ್ಧದಲ್ಲಿ ಯು ಮುಂಬಾ ಹಾಗೂ ಪುಣೇರಿ ಸಮಬಲದ ಹೋರಾಟ ನೀಡಿತು. ಹಂತ ಹಂತದಲ್ಲೂ ಪಂದ್ಯ ರೋಚಕತೆ ಹೆಚ್ಚಿಸಿತು. ಫಸ್ಟ್ ಹಾಫ್ ಅಂತ್ಯದಲ್ಲಿ ಯು ಮುಂಬಾ 11-9 ಅಂತರ ಕಾಯ್ದುಕೊಂಡಿತು.
ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!
ದ್ವಿತಿಯಾರ್ಧದಲ್ಲಿ ಯು ಮುಂಬಾ ಗೇರ್ ಬದಲಿಸಿತು. ಪುಣೇರಿ ಪಲ್ಟಾನ್‌ಗೆ ಅಂಕ ಗಳಿಸಲು ಹೆಚ್ಚಿನ ಅವಕಾಶ ನೀಡಲಿಲ್ಲ. ಇತ್ತ ರೈಡ್ ಹಾಗೂ ಟ್ಯಾಕಲ್ ಮೂಲಕ ಮುಂಬೈ ಅಂಕ ಹೆಚ್ಚಿಸಿತು. ಹೀಗಾಗಿ ಅಂಕಗಳ ಅಂತರ ಹೆಚ್ಚಾಯಿತು. ಸೆಕೆಂಡ್ ಹಾಫ್‌ನಲ್ಲಿ ಪುಣೇರಿ ಅಲ್ಪ ಮಂಕಾಯ್ತು. ಹೀಗಾಗಿ ಯು ಮುಂಬಾ 33-23 ಅಂಕಗಳ ಅಂತರದಲ್ಲಿ ಗೆಲುವು ಸಾಧಿಸಿತು.