
ಮುಂಬೈ(ಜು.27): ಟೀಂ ಇಂಡಿಯಾ ಮುಖ್ಯ ಕೋಚ್ ಹಾಗೂ ಸಹಾಯ ಸಿಬ್ಬಂದಿ ಸ್ಥಾನಕ್ಕೆ ಬಿಸಿಸಿಐ ಈಗಾಗಲೇ ಅರ್ಜಿ ಆಹ್ವಾನಿಸಿದೆ. ಸದ್ಯ ರವಿ ಶಾಸ್ತ್ರಿ ಅವಧಿಯನ್ನು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ವಿಸ್ತರಿಸಲಾಗಿದೆ. ಇದರ ಬೆನ್ನಲ್ಲೇ ಮುಖ್ಯ ಕೋಚ್ ರವಿ ಶಾಸ್ತ್ರಿ ಬದಲಾವಣೆ ಇಲ್ಲ ಅನ್ನೋ ಮಾತುಗಳು ಕೇಳಿ ಬಂದಿದೆ. ಇದೀಗ ಆಯ್ಕೆ ಸಮಿತಿ ಸದಸ್ಯ ಅಂಶುಮಾನ್ ಗಾಯಕ್ವಾಡ್ ಶಾಸ್ತ್ರಿ ಕೋಚ್ ಭವಿಷ್ಯದ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: ಬೌಲಿಂಗ್ ಕೋಚ್ ಅರುಣ್ ಸ್ಥಾನ ಗಟ್ಟಿ, ಬಾಂಗರ್‌ಗೆ ಸಂಕಷ್ಟ?
ಬಿಸಿಸಿಐ ಕೋಚ್ ಹಾಗೂ ಸಹಾಯಕ ಸಿಬ್ಬಂದಿ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದೆ. ಆದರೆ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿಗೆ ಮುಂದುವರಿಯಲು ಸೂಚಿಸಲಾಗಿದೆ. ಇನ್ನು ಸಹಾಯಕ ಸಿಬ್ಬಂದಿಗೆ ಆಯ್ಕೆ ನಡೆಯಲಿದೆ ಎಂದು ಅಂಶುಮಾನ್ ಹೇಳಿದ್ದಾರೆ. ಅಂಶುಮಾನ್ ಪ್ರಕಾರ ಶಾಸ್ತ್ರಿ ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ಮುಂದುವರಿಯುವುದು ಬಹುತೇಕ ಖಚಿತಗೊಂಡಿದೆ.
ಇದನ್ನೂ ಓದಿ: ಕೋಚ್ ಶಾಸ್ತ್ರಿ ಬದಲಾವಣೆ ತಂಡಕ್ಕೆ ನಷ್ಟ; ಅರ್ಜಿ ಆಹ್ವಾನಿಸಿ ನಾಟಕವಾಡಿತಾ BCCI?
ನ್ಯೂಜಿಲೆಂಡ್ ಮಾಜಿ ಕೋಚ್ ಮೈಕ್ ಹೆಸನ್ ಹಾಗೂ ಟೀಂ ಇಂಡಿಯಾ ಮಾಜಿ ಫೀಲ್ಡಿಂಗ್ ಕೋಚ್ ರಾಬಿನ್ ಸಿಂಗ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಶಾಸ್ತ್ರಿ ಮುಂದುವರಿಯುವ ಸಾಧ್ಯತೆ ಹೆಚ್ಚಿರುವುದರಿಂದ ಮುಖ್ಯ ಕೋಚ್ ಸ್ಥಾನ ಹೊಸಬರಿಗೆ ಲಭ್ಯವಿರುವುದಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.