ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಕೋಟ್ಯಾಂತರ ಭಾರತೀಯರಿಗೆ ಆಶಾಕಿರಣವಾಗಿದ್ದರು. ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತಂದ ಹೆಗ್ಗಳಿಕೆ ಸುಷ್ಮಾಗಿದೆ. ಟ್ವೀಟರ್ ಪೋಸ್ಟ್‌ನಂತೆ ಮಿಂಚಿನ ವೇಗದಲ್ಲಿ ಸುಷ್ಮಾ ಕಾರ್ಯನಿರ್ವಹಿಸುತ್ತಿದ್ದರು. ಇದೇ ರೀತಿ ಬ್ರೆಝಿಲ್‌ನಲ್ಲಿ ನೊಂದ ಕುಸ್ತಿ ಪಟು ವಿನೇಶ್ ಪೋಗತ್‌ಗೆ ಸುಷ್ಮಾ ಟ್ವೀಟ್ ಹೊಸ ಬದುಕನ್ನೇ ಕಟ್ಟಿಕೊಟ್ಟಿದೆ.
ಹರ್ಯಾಣ(ಆ.07): ಹೃದಯಾಘಾತದಿಂದ ನಿಧನರಾದ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ದೆಹಲಿಯಲ್ಲಿ ಸುಷ್ಮಾ ಅಂತ್ಯಕ್ರೀಯೆ ನೆರವೇರಿಸಲಾಗಿದೆ. ಸುಷ್ಮಾ ಆಗಲಿಕೆ ಭಾರತೀಯರಿಗೆ ಆಘಾತ ತಂದಿದೆ. ಸಚಿವರನ್ನು ಭೇಟಿಯಾಗಿ ಪತ್ರ ಮುಖೇನ ಸಮಸ್ಯೆಗಳನ್ನು ಹೇಳಿಕೊಂಡರೆ ಮಾತ್ರ ಪರಿಹಾರ ಅನ್ನೋ ಸಂಪ್ರದಾಯವನ್ನು ಮುರಿದ ಸುಷ್ಮಾ ಸ್ವರಾಜ್ ಟ್ವಿಟರ್ ಮೂಲಕವೇ ಕೋಟ್ಯಾಂತರ ಭಾರತೀಯರಿಗೆ ನೆರವಾಗಿದ್ದರು. ಜನಮೆಚ್ಚಿದ ನಾಯಕಿ ಸುಷ್ಮಾ ಸಾಮಾನ್ಯರಿಂದ ಹಿಡಿದು, ಸೆಲೆಬ್ರೆಟಿಗಳು, ಕ್ರೀಡಾಪಟುಗಳಿಗೂ ನೆರವಾಗಿದ್ದಾರೆ. ಇದರಲ್ಲಿ ಕುಸ್ತಿ ಪಟು ವಿನೇಶ್ ಪೋಗತ್ ಕೂಡ ಹೊರತಲ್ಲ.
ಇದನ್ನೂ ಓದಿ: ಸುಷ್ಮಾ ಅಗಲಿಕೆಗೆ ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟರ್ಸ್!
2016ರ ರಿಯೋ ಒಲಿಂಪಿಕ್ಸ್ ವೇಳೆ ಪದಕ ಭರವಸೆ ಮೂಡಿಸಿದ್ದ ಕುಸ್ತಿ ಪಟು ವಿನೇಶ್ ಪೋಗತ್, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಸನ್ ಯುನಾನ್ ವಿರುದ್ಧ ಹೋರಾಡುವ ವೇಳೆ ಗಂಭೀರ ಗಾಯಕ್ಕೆ ತುತ್ತಾದರು. ಹೀಗಾಗಿ ಪಂದ್ಯ ಪೂರ್ಣಗೊಳಿಸದೆ ತೆರಳಬೇಕಾಯಿತು. ಇಷ್ಟೇ ಅಲ್ಲ ವಿನೇಶ್ ಪೋಗತ್ ರಿಯೋ ಒಲಿಂಪಿಕ್ಸ್ ಟೂರ್ನಿ ಹೋರಾಟ ಗಾಯದೊಂದಿಗೆ ಅಂತ್ಯವಾಯಿತು. ಪೋಗತ್ ಗಾಯ ಗಂಭೀರವಾದ ಕಾರಣ, ಮತ್ತೆ ಕುಸ್ತಿ ರಿಂಗ್‌ಗೆ ಕಣಕ್ಕಿಳಿಯುವುದೇ ಅನುಮಾನವಾಗಿತ್ತು. ದೈಹಿಕವಾಗಿ, ಮಾನಸಿಕವಾಗಿ ವಿನೇಶ್ ಪೋಗತ್ ಕುಗ್ಗಿ ಹೋಗಿದ್ದರು.
ಇದನ್ನೂ ಓದಿ: ಕುಸ್ತಿ: ಒಂದೇ ತಿಂಗಳಲ್ಲಿ 3 ಚಿನ್ನ ಗೆದ್ದ ವಿನೇಶ್
ಈ ವೇಳೆ ಪೋಗತ್ ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೆ ನನಗೆ ಮೋಸ ಮಾಡಿದಂತೆ. ನನಗೆ ತುಂಬಾ ನೋವಾಗಿದೆ. ದೈಹಕವಾಗಿ, ಮಾನಸಿಕವಾಗಿ ನೊಂದಿದ್ದೇನೆ. ಆದರೆ ಚೇತರಿಸಿಕೊಳ್ಳೋ ಭರವಸೆ ಇದೆ ಎಂದು ಟ್ವೀಟ್ ಮಾಡಿದ್ದರು.
If I tel u that I m ok it wud b lying to myself n all of u. Right nw I m hurt; both physically and mentally. I ll recover soon. Thank u all🙏
— Vinesh Phogat (@Phogat_Vinesh)ಪೋಗತ್ ಟ್ವೀಟ್ ಮಾಡಿದ ಬೆನ್ನಲ್ಲೇ ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ ನೀಡಿದ್ದರು. ವಿನೇಶ್, ನೀನು ನಮ್ಮ ಮಗಳು. ಬ್ರಿಜಿಲ್‌ಗೆ ತೆರಳಿರೋ ಎಲ್ಲಾ ಭಾರತೀಯರು ನಿನ್ನ ಕುಟುಂಬ. ಯಾವುದೇ ಸಹಾಯ ಬೇಕಿದ್ದರು ಕೇಳು ಎಂದು ಸುಷ್ಮಾ ಟ್ವೀಟ್ ಮಾಡಿದ್ದರು.
Vinesh - You are our daughter. is your family. Ask for anything you require. https://t.co/I3Y4axejq6
— Sushma Swaraj (@SushmaSwaraj)ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಧರ್ಯ ತುಂಬುತ್ತಾರೆ. ನಿನ್ನ ಜೊತೆಗೆ ನಾವಿದ್ದೇವೆ ಅನ್ನೋ ಸಾಂತ್ವನದ ನುಡಿಗಳನ್ನು ಆಡುತ್ತಾರೆ ಎಂದು ಪೋಗತ್ ಊಹಿಸಿರಲಿಲ್ಲ. ಆದರೆ ಸುಷ್ಮಾ ಮಾಡಿ ತೋರಿಸಿದ್ದರು. ಸುಷ್ಮಾ ಸ್ವರಾಜ್ ಟ್ವೀಟ್, ಪೋಗತ್ ಕರಿಯರ್ ಬದಲಿಸಿತು. ಆತ್ಮವಿಶ್ವಾಸ ಹೆಚ್ಚಾಯಿತು. ರಿಯೋ ಒಲಿಂಪಿಕ್ಸ್ ಬಳಿಕ ಅಷ್ಟೇ ವೇಗದಲ್ಲಿ ಗಾಯದಿಂದ ಗುಣಮುಖರಾಗಿ ಮತ್ತೆ ಕುಸ್ತಿ ರಿಂಗ್‌ಗೆ ಇಳಿದರು. ಇದೀಗ ಸುಷ್ಮಾ ಅಗಲಿಕೆಯ ಸಂದರ್ಭ ವಿನೇಶ್ ಪೋಗತ್ ಈ ಎಲ್ಲಾ ವಿಚಾರವನ್ನು ಮತ್ತೆ ನೆನಪಿಸಿ ಕಣ್ಣೀರಿಟ್ಟಿದ್ದಾರೆ.
When l was sidelined by most, you reached out & extended full support.
I can never forget that day and that voice who said to me, you are my daughter and assured me that I will be well taken care.
M’am the void you left in our hearts will always be empty. RIP 🙏🙏