PKL7: ಯುಪಿ ಯೋಧ-ತಮಿಳ್ ತಲೈವಾಸ್ ಪಂದ್ಯ ರೋಚಕ ಟೈ!

By Web Desk  |  First Published Aug 7, 2019, 8:44 PM IST

ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಪಂದ್ಯ ಟೈ ಆಗಿದೆ. ಯುಪಿ ಯೋಧ-ತಮಿಳ್ ತಲೈವಾಸ್  ನಡುವಿನ ರೋಚಕ ಪಂದ್ಯ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಮುನ್ನಡೆಯಲ್ಲಿದ್ದ ಯೋಧ ತಂಡಕ್ಕೆ ಶಾಕ್ ನೀಡಿದ ತಲೈವಾಸ್ ಸಮಬಲ ಮಾಡಿಕೊಂಡು ನಿಟ್ಟುಸಿರು ಬಿಟ್ಟಿತು.
 


ಪಾಟಲೀಪುತ್ರ(ಆ.07): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಯುಪಿ ಯೋಧ ಹಾಗೂ ತಮಿಳ್ ತಲೈವಾಸ್ ನಡುವಿನ ಪಂದ್ಯ ಅತ್ಯಂತ ರೋಚಕ ಪಂದ್ಯವಾಗಿ ಮಾರ್ಪಟ್ಟಿತು. ಅಂತಿಮ 9 ನಿಮಿಷಗಳ ಹೋರಾಟ ಟಿ20 ಕ್ರಿಕೆಟ್ ಪಂದ್ಯವನ್ನು ಮೀರಿಸಿ ಬಿಟ್ಟಿತು. ಕಾರಣ ಯುಪಿ ಯೋಧಾ ಹಾಗೂ  ತಮಿಳ್ ತಲೈವಾಸ್ ನಡುವಿನ ಪಂದ್ಯ 28-28 ಅಂಕಗಳಿಂದ ಟೈ ಆಗಿದೆ. ಈ ಮೂಲಕ  ಈ ಆವೃತ್ತಿಯಲ್ಲಿ ಟೈ ಆದ  ಮೊದಲ ಪಂದ್ಯ ಅನ್ನೋ ಖ್ಯಾತಿ ಪಡೆದಿದೆ.

ಇದನ್ನೂ ಓದಿ: ಪ್ರೊ ಕಬಡ್ಡಿ 2019: 7ನೇ ಆವೃತ್ತಿ ವೇಳಾಪಟ್ಟಿ ! 

Tap to resize

Latest Videos

ಪಂದ್ಯದ ಆರಂಭದಲ್ಲೇ ಮಂಜೀತ್ ಚಿಲ್ಲರ್ ಅದ್ಭುತ ಟ್ಯಾಕಲ್‌ನಿಂದ ತಮಿಳ್ ತಲೈವಾಸ್ ಅಂಕ ಖಾತೆ ತೆರೆಯಿತು. ಮೊದಲ ರೈಡ್‌ನಲ್ಲಿ ಹಿನ್ನಡೆ ಅನುಭವಿಸಿದ ಯುಪಿ ಯೋಧ, ಇತ್ತ ಡಿಫೆಂಡ್‌ನಲ್ಲೂ ಅಂಕ ಕಳೆದುಕೊಂಡಿತು. ರಿಷಾಂಕ್ ದೇವಾಡಿ ರೈಡ್ ಮೂಲಕ ಯುಪಿ ಯೋಧ ಮೊದಲ ಅಂಕ ಬಾಚಿಕೊಂಡಿತು. ಈ ಮೂಲಕ ತಮಿಳ್ ತಲೈವಾಸ್‌ಗೆ ತಿರುಗೇಟು ನೀಡಿತು. ಇಷ್ಟೇ ಅಲ್ಲ 2-2 ಅಂಗಳ ಮೂಲಕ ಸ್ಕೂರ್ ಸಮಬಲ ಮಾಡಿಕೊಂಡಿತು. ಉಭಯ ತಂಡ ಕಠಿಣ ಹೋರಾಟ ನೀಡಿತು. ಹೀಗಾಗಿ ಯುಪಿ ಹಾಗೂ ತಮಿಳು ಒಟ್ಟು 5 ರೈಡ್‌ನಲ್ಲಿ ಯಾವುದೇ ಅಂಕ ಬರಲಿಲ್ಲ.  

ಇದನ್ನೂ ಓದಿ: ಪ್ರೊ ಕಬಡ್ಡಿ 7ನೇ ಆವೃತ್ತಿ ಹಾಗೂ ವಿಶೇಷತೆ!

ಪಂದ್ಯದ 6ನೇ ನಿಮಿಷದಲ್ಲಿ ಯುಪಿ ಯೋಧ ಮುನ್ನಡೆ ಪಡೆದುಕೊಂಡಿತು. ಯೋಧ ರೈಡ್ ಹಾಗೂ ಟ್ಯಾಕಲ್ ಮೂಲಕ ಅಂಕ ಗಳಿಸಿದರೆ, ತಮಿಳ್ ತಲೈವಾಸ್ ಅಂಕಕ್ಕಾಗಿ ಹರಸಾಹಸ ಪಟ್ಟಿತು. ಮೊದಲಾರ್ಧದ ಅಂತ್ಯದಲ್ಲಿ ಯುಪಿ ಯೋಧ 16-12 ಅಂಗಳಿಂದ ಮುನ್ನಡೆ ಕಾಯ್ದುಕೊಂಡಿತು. ಸೆಕೆಂಡ್ ಹಾಫ್‌ನಲ್ಲಿ ತಮಿಳ್ ತಲೈವಾಸ್ ಕೂಡ  ಆಕ್ರಮಣಕಾರಿ ಆಟವಾಡಿತು. ಹಿನ್ನಡೆ ಅನುಭಿವಿಸಿದ್ದ ತಮಿಳ್ ತಲೈವಾಸ್ ನಿಧಾನವಾಗಿ ಚೇತರಿಸಿಕೊಂಡಿತು.

ದ್ವಿತಿಯಾರ್ಧದ 11ನೇ ನಿಮಿಷದಲ್ಲಿ ತಮಿಳ್ ತಲೈವಾಸ್ 23-23 ಅಂಕಗಳಿಂದ ಸ್ಕೋರ್ ಸಮಬಲ ಮಾಡಿಕೊಂಡಿತು. ಇನ್ನುಳಿದ 9 ನಿಮಿಷಗಳ ಆಟ ಟಿ20 ಕ್ರಿಕೆಟ್ ಪಂದ್ಯವನ್ನು ಮೀರಿಸಿತ್ತು. ಹೆಜ್ಜೆ ಹೆಜ್ಜೆಗೂ ಸ್ಕೋರ್ ಸಮಬಲಗೊಳ್ಳುತ್ತಿತ್ತು. ಹೀಗಾಗಿ ಗೆಲುವು ಯಾರಿಗೆ ಅನ್ನೋದೇ ಕುತೂಹಲ ಮೂಡಿಸಿತ್ತು.  19ನೇ ನಿಮಿಷದಲ್ಲಿ ಯುಪಿ ಯೋಧ 28-27 ಅಂಕಗಳಿಂದ ಮುನ್ನಡೆ ಪಡೆಯಿತು. ಆದರೆ ಅಂತಿಮ ರೈಡ್‌ನಲ್ಲಿ ತಲೈವಾಸ್ ಅಂಕಗಳಿಸೋ ಮೂಲಕ 28-28 ಅಂಕಗಳಿಂದ ಪಂದ್ಯ ಟೈಗೊಂಡಿತು. 
 

click me!