ಅಮೆರಿಕದ ಖ್ಯಾತ ವಾಲಿಬಾಲ್ ಆಟಗಾರ ಡೇವಿಡ್ ಲೀ ಅವರ ಮಾರ್ಗದರ್ಶನದಲ್ಲಿ ನಗರದ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕಳೆದ ಮೂರು ತಿಂಗಳಿಂದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಫೆ.15ರಂದು ಕೋಲ್ಕತಾ ಥಂಡರ್ ಬೋಲ್ಟ್ಸ್ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
ಬೆಂಗಳೂರು(ಫೆ.12): 3ನೇ ಆವೃತ್ತಿಯ ಪ್ರೈಮ್ ವಾಲಿಬಾಲ್ ಲೀಗ್ ಫೆ.15ರಿಂದ ಚೆನ್ನೈ ನಲ್ಲಿ ಆರಂಭವಾಗಲಿದ್ದು, ಪಂಕಜ್ ಶರ್ಮಾ ನಾಯಕತ್ವದ ಬೆಂಗಳೂರು ಟಾರ್ಪೆಡೋಸ್ ತಂಡ ಟ್ರೋಫಿ ಗೆಲ್ಲಲು ಭರ್ಜರಿ ಸಿದ್ಧತೆ ನಡೆಸುತ್ತಿದೆ.
ಅಮೆರಿಕದ ಖ್ಯಾತ ವಾಲಿಬಾಲ್ ಆಟಗಾರ ಡೇವಿಡ್ ಲೀ ಅವರ ಮಾರ್ಗದರ್ಶನದಲ್ಲಿ ನಗರದ ಯಲಹಂಕದಲ್ಲಿರುವ ಪಡುಕೋಣೆ-ದ್ರಾವಿಡ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಕಳೆದ ಮೂರು ತಿಂಗಳಿಂದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಫೆ.15ರಂದು ಕೋಲ್ಕತಾ ಥಂಡರ್ ಬೋಲ್ಟ್ಸ್ ವಿರುದ್ಧ ತನ್ನ ಮೊದಲ ಪಂದ್ಯವಾಡಲಿದೆ.
Last night was electric as the Torpedoes rallied to support the Blues! What an unforgettable atmosphere. For Pride and for Bengaluru 💜💙 pic.twitter.com/7wj84dvsYw
— Bengaluru Torpedoes (@TorpedoesBLR)
undefined
ಕನ್ನಡಿಗ ಸರ್ಜ್ಜನ್ ಶೆಟ್ಟಿ, ಬ್ರೆಜ್ಜಿಲ್ ಮತ್ತು ಆಸ್ಟ್ರೇಲಿಯಾದ ಆಟಗಾರರು ಈ ಬಾರಿ ತಂಡದಲ್ಲಿ ಇದ್ದಾರೆ ಎಂದು ಕೋಚ್ ಡೇವಿಡ್ ಲೀ ತಿಳಿಸಿದ್ದಾರೆ. ಒಟ್ಟು 9 ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳತ್ತಿವೆ. ಕಳೆದ ಬಾರಿ ಫೈನಲ್ ಪ್ರವೇಶಿಸಿದ್ದ ಬೆಂಗಳೂರು ತಂಡ, ಅಹ್ಮದಾಬಾದ್ ವಿರುದ್ಧ ಪರಾಭವಗೊಂಡಿತ್ತು.
Kenya's Kelvin Kiptum: ಮ್ಯಾರಥಾನ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದ ಅಥ್ಲೀಟ್ ಅಪಘಾತದಲ್ಲಿ ದುರ್ಮರಣ..!
ಬೆಲ್ಜಿಯಂನಲ್ಲಿ ಹೈಜಂಪ್ ಸ್ವರ್ಣ ಗೆದ್ದ ತೇಜಸ್ವಿನ್
ಬ್ರಸೆಲ್ಸ್(ಬೆಲ್ಜಿಯಂ): ಭಾರತದ ತಾರಾ ಹೈ ಜಂಪ್ ಪಟು ತೇಜಸ್ವಿನ್ ಶಂಕರ್ ಬೆಲ್ಜಿಯಂನಲ್ಲಿ ನಡೆದ ಗಾಲಾ ಎಲ್ಮೋಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಳೆದ ಅಕ್ಟೋಬರ್ ಬಳಿಕ ಮೊದಲ ಬಾರಿ ಸ್ಪರ್ಧಿಸಿದ ಶಂಕರ್ 2.23 ಮೀ. ಎತ್ತರಕ್ಕೆ ಜಿಗಿದು ಅಗ್ರಸ್ಥಾನಿಯಾದರು. ಗ್ರೀಕ್‌ನ ಆ್ಯಂಟೊನಿಯಸ್ ಮೆರ್ಲಸ್ 2.20 ಮೀ. ನೆಗೆದು ಬೆಳ್ಳಿ ಪಡೆದರು.
ಏಷ್ಯನ್ ಫುಟ್ಬಾಲ್: ಕತಾರ್ ಸತತ 2ನೇ ಚಾಂಪಿಯನ್
ಲುಸೈಲ್(ಕತಾರ್): ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್‌ನಲ್ಲಿ ಆತಿಥೇಯ ಕತಾರ್ ಸತತ 2ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಶನಿವಾರ ರಾತ್ರಿ ನಡೆದ ಜೋರ್ಡನ್ ವಿರುದ್ಧದ ರೋಚಕ ಫೈನಲ್ ಹಣಾಹಣಿಯಲ್ಲಿ ಕತಾರ್ 3-1 ಗೋಲುಗಳ ಅಂತರದಲ್ಲಿ ಜಯಭೇರಿ ಬಾರಿಸಿತು. ಅಕ್ರಂ ಅಫೀಫ್ ತಮಗೆ ಲಭಿಸಿದ ಮೂರೂ ಪೆನಾಲ್ಟಿ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿ ಕತಾರ್ ಗೆಲುವಿನ ರೂವಾರಿ ಎನಿಸಿಕೊಂಡರು. ಇದರೊಂದಿಗೆ ಫೈನಲ್‌ಗೇರಿದ್ದ 2 ಬಾರಿಯೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು. ಜೋರ್ಡನ್ ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತು.
Ranji Trophy ಕುತೂಹಲ ಘಟ್ಟಕ್ಕೆ ಕರ್ನಾಟಕ vs ತಮಿಳ್ನಾಡು ಪಂದ್ಯ
ಫುಟ್ಬಾಲ್: ಬೆಂಗಳೂರು ಜಮ್ಶೇಡ್‌ಪುರ 1-1 ಡ್ರಾ
ಜಮ್ಶೇಡ್‌ಪುರ: ಬೆಂಗಳೂರು ಎಫ್‌ಸಿ ಹಾಗೂ ಜಮ್ಶೇಡ್‌ಪುರ ಎಫ್‌ಸಿ ನಡುವಿನ ಐಎಸ್‌ಎಲ್ ಫುಟ್ಬಾಲ್ ಟೂರ್ನಿಯ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ಬಿಎಫ್‌ಸಿ 15 ಪಂದ್ಯಗಳಲ್ಲಿ 15 ಅಂಕಗಳೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಜಮ್ಶೇಡ್‌ಪುರ 14 ಅಂಕದೊಂದಿಗೆ 8ನೇ ಸ್ಥಾನದಲ್ಲೇ ಉಳಿದಿದೆ. ಬಿಎಫ್‌ಸಿ ಪರ ಸುರೇಶ್ ಸಿಂಗ್ 14ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಜಮ್ಶೇಡ್‌ಪುರದ ಜೇವಿಯರ್ 70ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಪಂದ್ಯ ಸಮಬಲಗೊಂಡಿತು.