ಪ್ರೊ ಕಬಡ್ಡಿ: ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಬೆಂಗಳೂರು ಬುಲ್ಸ್‌

By Kannadaprabha NewsFirst Published Feb 12, 2024, 10:34 AM IST
Highlights

ಬೆಂಗಳೂರು ಬುಲ್ಸ್‌ ಸದ್ಯ 19 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 48 ಅಂಕ ಸಂಪಾದಿಸಿದ್ದು, 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಅತ್ತ ಬುಲ್ಸ್‌ ವಿರುದ್ಧ ಬೃಹತ್‌ ಗೆಲುವು ದಾಖಲಿಸುವ ಮೂಲಕ ಗುಜರಾತ್‌ ಜೈಂಟ್ಸ್‌ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌, ತಮಿಳ್‌ ತಲೈವಾಸ್‌ ವಿರುದ್ಧ 56-29 ಅಂಕಗಳ ಬೃಹತ್‌ ಜಯ ದಾಖಲಿಸಿತು.

ಕೋಲ್ಕತ್ತ(ಫೆ.12): ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ಪ್ಲೇ-ಆಫ್‌ಗೇರುವ ಕನಸಿನಲ್ಲಿದ್ದ ಬೆಂಗಳೂರು ಬುಲ್ಸ್‌ ಕನಸು ನುಚ್ಚುನೂರಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ 28-50 ಅಂಕಗಳ ಹೀನಾಯ ಸೋಲನುಭವಿಸಿ, ಇನ್ನೂ 2 ಪಂದ್ಯ ಬಾಕಿಯಿರುವಾಗಲೇ ಪ್ಲೇ-ಆಫ್‌ ಆಸೆ ಕೈಬಿಟ್ಟಿದೆ. 

ಬೆಂಗಳೂರು ಬುಲ್ಸ್‌ ಸದ್ಯ 19 ಪಂದ್ಯಗಳಲ್ಲಿ 7 ಗೆಲುವಿನೊಂದಿಗೆ 48 ಅಂಕ ಸಂಪಾದಿಸಿದ್ದು, 8ನೇ ಸ್ಥಾನದಲ್ಲೇ ಬಾಕಿಯಾಗಿದೆ. ಅತ್ತ ಬುಲ್ಸ್‌ ವಿರುದ್ಧ ಬೃಹತ್‌ ಗೆಲುವು ದಾಖಲಿಸುವ ಮೂಲಕ ಗುಜರಾತ್‌ ಜೈಂಟ್ಸ್‌ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿತು. ದಿನದ ಮತ್ತೊಂದು ಪಂದ್ಯದಲ್ಲಿ ಪುಣೇರಿ ಪಲ್ಟನ್‌, ತಮಿಳ್‌ ತಲೈವಾಸ್‌ ವಿರುದ್ಧ 56-29 ಅಂಕಗಳ ಬೃಹತ್‌ ಜಯ ದಾಖಲಿಸಿತು.

Latest Videos

Ranji Trophy ಕುತೂಹಲ ಘಟ್ಟಕ್ಕೆ ಕರ್ನಾಟಕ vs ತಮಿಳ್ನಾಡು ಪಂದ್ಯ

ಇಂದಿನ ಪಂದ್ಯಗಳು: ಯು.ಪಿ ಮತ್ತು ಜೈಪುರ್‌ ರಾತ್ರಿ 8ಕ್ಕೆ

ಬೆಂಗಾಲ್‌ ಮತ್ತು ಯು ಮುಂಬಾ ರಾತ್ರಿ 9ಕ್ಕೆ

ಫುಟ್ಬಾಲ್‌: ಬೆಂಗಳೂರು ಜಮ್ಶೇಡ್‌ಪುರ 1-1 ಡ್ರಾ

ಜಮ್ಶೇಡ್‌ಪುರ: ಬೆಂಗಳೂರು ಎಫ್‌ಸಿ ಹಾಗೂ ಜಮ್ಶೇಡ್‌ಪುರ ಎಫ್‌ಸಿ ನಡುವಿನ ಐಎಸ್‌ಎಲ್‌ ಫುಟ್ಬಾಲ್‌ ಟೂರ್ನಿಯ ಪಂದ್ಯ 1-1 ಗೋಲುಗಳಿಂದ ಡ್ರಾಗೊಂಡಿದೆ. ಇದರೊಂದಿಗೆ ಬಿಎಫ್‌ಸಿ 15 ಪಂದ್ಯಗಳಲ್ಲಿ 15 ಅಂಕಗಳೊಂದಿಗೆ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಜಮ್ಶೇಡ್‌ಪುರ 14 ಅಂಕದೊಂದಿಗೆ 8ನೇ ಸ್ಥಾನದಲ್ಲೇ ಉಳಿದಿದೆ. ಬಿಎಫ್‌ಸಿ ಪರ ಸುರೇಶ್‌ ಸಿಂಗ್‌ 14ನೇ ನಿಮಿಷದಲ್ಲೇ ಗೋಲು ಬಾರಿಸಿದರೂ, ಜಮ್ಶೇಡ್‌ಪುರದ ಜೇವಿಯರ್‌ 70ನೇ ನಿಮಿಷದಲ್ಲಿ ಬಾರಿಸಿದ ಗೋಲಿನಿಂದಾಗಿ ಪಂದ್ಯ ಸಮಬಲಗೊಂಡಿತು.

ಈ ಆಟಗಾರನ ಜತೆ ಫೋಟೋ ಶೇರ್ ಮಾಡಿದ ಸಾನಿಯಾ ಮಿರ್ಜಾ..! ಆ ದಿನಗಳನ್ನು ಮೆಲುಕುಹಾಕಿದ ಮೂಗುತಿ ಸುಂದರಿ

ಬೆಂಗ್ಳೂರು ಓಪನ್‌ ಟೆನಿಸ್‌: ಪ್ರಜ್ವಲ್‌ಗೆ ವೈಲ್ಡ್‌ ಕಾರ್ಡ್‌

ಬೆಂಗಳೂರು: ಕರ್ನಾಟಕದ ತಾರಾ ಟೆನಿಸಿಗ ಎಸ್‌.ಡಿ ಪ್ರಜ್ವಲ್‌ ದೇವ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ಗೆ ವೈಲ್ಡ್‌ಕಾರ್ಡ್‌ ಎಂಟ್ರಿ ಪಡೆದಿದ್ದಾರೆ. ಕಳೆದ ವರ್ಷ 2ನೇ ಸುತ್ತಲ್ಲೇ ಈ ಟೂರ್ನಿಯಿಂದ ನಿರ್ಗಮಿಸಿದ್ದ ಪ್ರಜ್ವಲ್‌ 2023ರ ಐಟಿಎಫ್‌ ಥಾಯ್ಲೆಂಡ್‌ ಟೂರ್ನಿಯಲ್ಲಿ ರನ್ನರ್‌ ಅಪ್‌ ಆಗಿದ್ದರು. ಕರ್ನಾಟಕ ಲಾನ್‌ ಟೆನಿಸ್‌ ಸಂಸ್ಥೆ ಶೀಘ್ರ ಇನ್ನಷ್ಟು ವೈಲ್ಡ್‌ ಕಾರ್ಡ್‌ಗಳನ್ನು ಘೋಷಣೆ ಮಾಡಲಿದೆ.

click me!