
ನವದೆಹಲಿ[ಫೆ.01]: 2021ರ ಚಾಂಪಿಯನ್ಸ್ ಟ್ರೋಫಿ, 2023ರ ಏಕದಿನ ವಿಶ್ವಕಪ್ ಭಾರತದಿಂದ ಸ್ಥಳಾಂತರಗೊಳ್ಳುವುದಿಲ್ಲ ಎಂದು ಐಸಿಸಿ ಸಿಇಒ ಡೇವಿಡ್ ರಿಚರ್ಡ್‌ಸನ್ ಸ್ಪಷ್ಟಪಡಿಸಿದ್ದಾರೆ.
ಗುರುವಾರ ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2 ಮಹತ್ವದ ಐಸಿಸಿ ಟೂರ್ನಿಗಳ ಆತಿಥ್ಯ ಭಾರತಕ್ಕೆ ಕೈತಪ್ಪುವ ಆತಂಕವನ್ನು ದೂರಗೊಳಿಸಿದರು. 2016ರ ಟಿ20 ವಿಶ್ವಕಪ್ ವೇಳೆ ಕೇಂದ್ರ ಸರ್ಕಾರದಿಂದ ಐಸಿಸಿಗೆ ತೆರಿಗೆ ವಿನಾಯ್ತಿ ದೊರೆತಿರಲಿಲ್ಲ. ಹೀಗಾಗಿ ಐಸಿಸಿ, ಬಿಸಿಸಿಐಗೆ 161 ಕೋಟಿ ರುಪಾಯಿ ಪರಿಹಾರ ಪಾವತಿಸಿ ಇಲ್ಲವೇ 2023ರ ವಿಶ್ವಕಪ್ ಆತಿಥ್ಯ ಕಳೆದುಕೊಳ್ಳಿ ಎಂಬ ಷರತ್ತು ವಿಧಿಸಿತ್ತು.
160 ಕೋಟಿ ಬಾಕಿ- ಬಿಸಿಸಿಐ ಕೈತಪ್ಪುತ್ತಾ 2023ರ ವಿಶ್ವಕಪ್ ಆತಿಥ್ಯ?
ಈ ಕುರಿತು ಮಾತನಾಡಿದ ರಿಚರ್ಡ್‌ಸನ್, ‘ತೆರಿಗೆ ವಿನಾಯ್ತಿ ಪಡೆಯುವುದು ಬಹಳ ಮುಖ್ಯ. ಅದರಿಂದ ಉಳಿತಾಯವಾಗುವ ಹಣವನ್ನು ಕ್ರಿಕೆಟ್ ಅಭಿವೃದ್ಧಿಗೆ ಬಳಸಲಾಗುತ್ತದೆ. ಹಾಗಂತ, ಭಾರತದಿಂದ ಮಹತ್ವದ ಟೂರ್ನಿಯನ್ನು ಸ್ಥಳಾಂತರ ಮಾಡುವ ಯೋಚನೆ ಇಲ್ಲ. ಟೂರ್ನಿಗೆ ಇನ್ನೂ ಸಮಯವಿದೆ. ಕೊನೆಯಲ್ಲಿ ವಿನಾಯ್ತಿ ಸಿಗಲಿದೆ ಎನ್ನುವ ಭರವಸೆ ಇದೆ’ ಎಂದು ಹೇಳಿದರು.
2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ
ಭಾರತದ ಬಗ್ಗೆ ಮೆಚ್ಚುಗೆ: ‘ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್‌ನ ಶ್ರೇಷ್ಠ ರಾಯಭಾರಿ ಹಾಗೂ ಭಾರತ ತಂಡ ಅತ್ಯುತ್ತಮ ನಡವಳಿಕೆ ಹೊಂದಿರುವ ತಂಡವಾಗಿದೆ’ ಎಂದು ರಿಚರ್ಡ್‌ಸನ್ ಹೇಳಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.